ಮಣಿಪಾಲ ಮೂಲದ ಡಾ| ನಿಶ್ಚಲ ರಾವ್ ಲಂಡನ್‌ನಲ್ಲಿ “ವಿಸ್ಮಯ ವೈದ್ಯ’
Team Udayavani, Jul 10, 2018, 12:30 PM IST
ಉಡುಪಿ: ಮಣಿಪಾಲ ನೆಹರು ನಗರ ಮೂಲದ ಡಾ| ನಿಶ್ಚಲ ರಾವ್ ಅವರು ಲಂಡನ್‌ನಲ್ಲಿ “ವಿಸ್ಮಯಕಾರಿ’ ವೈದ್ಯ ಎನಿಸಿಕೊಂಡಿದ್ದಾರೆ.
ಸುಮಾರು 14 ತಿಂಗಳ ಹಿಂದೆ ಲಂಡನ್‌ನ ವಿಟ್ಟಿಂಗ್ಟನ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಜೋಡಿ ಸ್ಕಾ éಡನ್ ಅವರು ದಾಖಲಾಗಿದ್ದರು. ಆದರೆ ಅವರು ಪ್ರಸವಿಸಿದ ಮಗು ಉಸಿರಾಡುತ್ತಿರಲಿಲ್ಲ. ಡಾ| ನಿಶ್ಚಲ ರಾವ್ ಅದೇ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಅದರಲ್ಲೂ ಅವಧಿಪೂರ್ವ ಜನಿಸಿದ ಮಕ್ಕಳ ಚಿಕಿತ್ಸೆಯಲ್ಲಿ ವಿಶೇಷಜ್ಞ.
ಮಗು ಸತ್ತು ಹೋಗಿದೆ ಎಂದು ಎಲ್ಲರೂ ಭಾವಿಸಿದ್ದರೂ ಡಾ| ನಿಶ್ಚಲ ರಾವ್ ಮತ್ತವರ ತಂಡ ಅಗತ್ಯ ತುರ್ತು ಚಿಕಿತ್ಸೆಗಳನ್ನು ಒದಗಿಸಿದರು. ಮಗು ಉಸಿರಾಟ ಆರಂಭಿಸಿತು; ಈಗ ಆರೋಗ್ಯವಾಗಿದೆ.
ಡಾ| ನಿಶ್ಚಲ ರಾವ್ ಅವರು ಮಣಿಪಾಲ ಕೆಎಂಸಿಯಲ್ಲಿ ಎಂಬಿಬಿಎಸ್ ಕಲಿತು, ಲಂಡನ್‌ನಲ್ಲಿ ಎಂಆರ್‌ಸಿಪಿ ಶಿಕ್ಷಣ ಪಡೆದಿದ್ದಾರೆ. ಸುಮಾರು 20 ವರ್ಷಗಳಿಂದ ಲಂಡನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ| ನಿಶ್ಚಲ್ ರಾವ್ ಅವರು ಮಣಿಪಾಲದ ಎಂಐಟಿ ನಿವೃತ್ತ ಪ್ರಾಧ್ಯಾಪಕ ಪ್ರೊ| ಕೆ. ಕಮಲಾಕ್ಷ ಮತ್ತು ನಗರಸಭೆ ಮಾಜಿ ಸದಸ್ಯೆ ಸ್ನೇಹಪ್ರಭಾ ಅವರ ಪುತ್ರ.
ಅಮೇಜಿಂಗ್ ಡಾಕ್ಟರ್
ಈ ವಿಷಯವನ್ನು ವೈದ್ಯರು ಮರೆತು ಬಿಟ್ಟಿದ್ದರು. ಆದರೆ ತಾಯಿ ಮತ್ತು ತಂದೆ ಬಿಬಿಸಿ ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿದರು. ಬಿಬಿಸಿ ಡಾ| ನಿಶ್ಚಲ ರಾವ್ ಅವರನ್ನು ಕರೆಸಿ ಸಂದರ್ಶನ ನಡೆಸಿದ್ದು, ಇದು ಜು. 3ರಂದು ಬಿತ್ತರವಾಯಿತು. ಸಂದರ್ಶನದಲ್ಲಿ ಡಾ| ರಾವ್ ಅವರು ತಾನು ಮತ್ತು ತಂಡ ಹೇಗೆ ಮಗುವಿಗೆ ಚಿಕಿತ್ಸೆ ನೀಡಿತೆಂದು ವಿವರಿಸಿದ್ದಾರೆ. ಇದಾದ ಬಳಿಕ ಆಸ್ಪತ್ರೆಯ ಆಡಳಿತದವರು ಡಾ| ನಿಶ್ಚಲ ರಾವ್ ಅವರಿಗೆ “ವಿಸ್ಮಯ ವೈದ್ಯ’ (ಅಮೇಜಿಂಗ್ ಡಾಕ್ಟರ್) ಎಂದು ಗೌರವಿಸಿದ್ದಾರೆ. “ನಾನೊಬ್ಬನೇ ಈ ಸಾಧನೆ ಮಾಡಿಲ್ಲ, ನಮ್ಮ ತಂಡ ಈ ಕೆಲಸ ಮಾಡಿದೆ’ ಎಂದು ಡಾ| ನಿಶ್ಚಲ ರಾವ್ ಹೇಳಿದ್ದಾರೆ.
ಇದು ಪ್ರಕೃತಿ ಸಹಜವೆ?
ಚಿತ್ರದಲ್ಲಿರುವುದು ಆರಂಭದಲ್ಲಿ ಉಸಿರಾಟ ನಡೆಸದ, ಪ್ರಸ್ತುತ ಆರೋಗ್ಯವಾಗಿರುವ ಮಗು, ಚಿಕಿತ್ಸೆ ನೀಡಿದ ಡಾ| ನಿಶ್ಚಲ ರಾವ್, ಮಗುವಿನ ತಂದೆ ತಾಯಿ ಜತೆಗಿದ್ದಾರೆ. ಮಗು ಆರಂಭದಲ್ಲಿ ಉಸಿರಾಡುತ್ತಿರಲಿಲ್ಲ, ಈಗ ಅದು (ತನಗೆ ಉಸಿರಾಟ ಕಲ್ಪಿಸಿದ ವೈದ್ಯರು ಇರುವುದು ಗೊತ್ತಿಲ್ಲದೆ) ತಂದೆಯ ಮೂಗನ್ನು ಹಿಡಿದುಕೊಂಡು ಉಸಿರಾಟವನ್ನು ನಿಲ್ಲಿಸುವ ಸಂಕೇತ ನೀಡಿದಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.