ಜನಸ್ಪಂದನದಿಂದ ಸಮಸ್ಯೆ ಪರಿಹಾರ: ಗೋಪಾಲ ಪೂಜಾರಿ
Team Udayavani, Sep 2, 2017, 7:50 AM IST
ತೆಕ್ಕಟ್ಟೆ (ಕನ್ನುಕೆರೆ): ಕರಾವಳಿ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಿಂದ ಎಲ್ಲರೂ ಒಂದಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶಾಸಕರ ಜನಸ್ಪಂದನೆಯ ಮಾದರಿಯಲ್ಲಿಯೇ ಜಿಲ್ಲಾ ವ್ಯವಸ್ಥೆಯನ್ನು ಕರೆತರಿಸಿ ರೈತರ ಜನಸ್ಪಂದನ ಕಾರ್ಯವಾದಾಗ ಮಾತ್ರ ಸಮಸ್ಯೆಗಳಿಗೆ ನೇರವಾಗಿ ಪರಿಹಾರ ಹುಡುಕಲು ಯಶಸ್ವಿಯಾಗಬಹುದು. ಈ ನಿಟ್ಟಿನಲ್ಲಿ ವಾರಾಹಿ, ಡೀಮ್ಡ್ ಫಾರೆಸ್ಟ್, ಕುಮ್ಕಿ ಹಕ್ಕು, ಸಿಆರ್‌ಝಡ್, ಮರಳುಗಾರಿಕೆ ಸಮಸ್ಯೆಗಳ ಬಗ್ಗೆ ರಾಜಕೀಯ ರಹಿತವಾಗಿ ಪರಿಹಾರ ಹುಡುಕುವ ಕಾರ್ಯವಾಗಬೇಕಾಗಿದೆ ಎಂದು ಬೈಂದೂರು ಶಾಸಕ ಗೋಪಾಲ ಪೂಜಾರಿ ಹೇಳಿದರು.
ಅವರು ಸೆ. 1ರಂದು ತೆಕ್ಕಟ್ಟೆ ಕನ್ನುಕೆರೆ ಗ್ರೇಸ್ ಆಡಿಟೋರಿಯಂನಲ್ಲಿ ಉಡುಪಿ ಜಿಲ್ಲಾ ರೈತ ಸಂಘ, ಬೀಜಾಡಿ ವಲಯದ ರೈತ ಸಮಾವೇಶವನ್ನು ಉದ್ಘಾಟಿಸಿ ರೈತರ ಸಮಸ್ಯೆಗಳಿಗೆ ಉತ್ತರಿಸಿ ಮಾತನಾಡಿದರು.
ವಾರಾಹಿ ಬಲದಂಡೆ ರೂಪುರೇಷೆ
ವಾರಾಹಿಯ ದೊಡ್ಡ ಮಟ್ಟದ ಹೋರಾಟದಿಂದಾಗಿ ಒಂದನೆಯ ಹಂತದ ಕಾಮಗಾರಿಯ ಉದ್ಘಾಟನೆಯಾಗಿದೆ ಪ್ರಸ್ತುತ ವಾರಾಹಿ ಬಲದಂಡೆ ಯೋಜನೆಯ ಬಗ್ಗೆ ಅಂದಾಜು ರೂ. 337 ಕೋಟಿ ವೆಚ್ಚದ ಯೋಜನೆಗೆ ರೂಪುರೇಷೆ ಸಿದ್ಧಗೊಂಡಿದ್ದು ಒಂದು ವಾರದೊಳಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಯಾದ ಮೇಲೆ ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಭೇಟಿಯಾಗಿ ಮುಂಬರುವ ನವೆಂಬರ್ ಡಿಸೆಂಬರ್ ಒಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಯ ಚಾಲನೆಗೊಳಿಸುವ ಬಗ್ಗೆ ಪ್ರಯತ್ನಮಾಡುತ್ತಿದ್ದೇವೆ ಎಂದರು.
ಪ್ರಾಮಾಣಿಕ ಪ್ರಯತ್ನ
ಸೌಕೂರು ಮತ್ತು ಸಿದ್ಧಾಪುರ ಏತ ನೀರಾವರಿ ಯೋಜನೆಯನ್ನು ರೂ. 33 ಕೋಟಿ ವೆಚ್ಚದಲ್ಲಿ ರೂಪರೇಷೆ ಸಿದ್ಧಗೊಂಡಿದ್ದು ಅದನ್ನು ಈ ವರ್ಷವೇ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಈ ಭಾಗದ ರೈತರಿಗೆ ನೀರು ಕೊಡಿಸುವ ಕೆಲಸವನ್ನು ಮಾಡಿಸುವ ಬಗ್ಗೆ ಸಂಪೂರ್ಣವಾಗಿ ಸರಕಾರದ ಗಮನ ಸೆಳೆಯುತ್ತೇವೆ. ಈ ಸಂಪುಟದಲ್ಲಿ ಗೆಜೆಟ್ ನೋಟಿಫಿಕೇಷನ್ ಹಾಕಲು ಬಾಕಿ ಇದ್ದು ಈಗಾಗಲೇ ಅರಣ್ಯ ಇಲಾಖೆಯಿಂದ ಕೆಲವು ಮಾಹಿತಿಯನ್ನು ಕೇಳಲಾಗಿದ್ದು ಯಾವ ಜಾಗ ಸರ್ವೆà ನಂಬರ್ ರಿಜಿಸ್ಟರ್ ಕೈಬಿಟ್ಟು ಹೋಗಿವೆ ಎಲ್ಲಾ ಜಾಗವನ್ನು ಗೆಜೆಟ್ ನೋಟಿಫಿಕೇಷನ್ ಮಾಡಿ ಮುಂದಿನ ದಿನಗಳಲ್ಲಿ ಅಕ್ರಮ ಸಕ್ರಮದಲ್ಲಿ ಖಾಯಂ ಮಂಜೂರಾತಿಗೊಳಿಸಿ ಒಂದೇ ತಿಂಗಳಲ್ಲಿ ಆದೇಶವನ್ನು ಹೊರಡಿಸುವ ಪ್ರಯತ್ನವನ್ನು ಮಾಡುತ್ತೇವೆ. ಕುಮ್ಕಿ ಹಕ್ಕನ್ನು ತಿದ್ದುಪಡಿ ಮಾಡಿ ಮುಂದಿನ ಅಧಿವೇಶನದ ಒಳಗೆ ಅದನ್ನು ತಮ್ಮ ಹಕ್ಕನ್ನು ಕೊಡಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಸರಕಾರದ ಮೂಲಕ ಮಾಡುತ್ತೇವೆ ಎಂದರು.
ವಾರದೊಳಗೆ ಆದೇಶ?
ಜಿಲ್ಲೆಯಲ್ಲಿ ತಲೆದೋರಿರುವ ಮರಳುಗಾರಿಕೆ ಸಮಸ್ಯೆಗಳ ಬಗ್ಗೆ ನಮ್ಮ ಜಿಲ್ಲೆಯವರೇ ಹಸಿರು ಪೀಠಕ್ಕೆ ಹೋಗಿದ್ದಾರೆ ಅಲ್ಲದೆ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಕೆಲವೊಂದು ನಿಯಮಗಳನ್ನು ಮಾಡಲಾಗಿದ್ದು ಯಾರು ಸಾಂಪ್ರದಾಯಿಕವಾಗಿ ಮರಳು ತೆಗೆಯುತ್ತಾರೆ ಅವರಿಗೆ ಅವಕಾಶ ಕೊಡಬೇಕು ಎಂದು ಕೋರ್ಟಿನಿಂದ ತೀರ್ಪು ಬಂದಿದೆ . ಬಿಹಾರ್‌ನಿಂದ ಮರಳು ತರುವವರಿಗೆ ಜಿಲ್ಲಾಡಳಿತದ ವಿರೋಧವಿದೆ ಈ ನಿಟ್ಟಿನಲ್ಲಿ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸಿಸುತ್ತಾರೆ ಅವರಿಗೆ ಮಾತ್ರ ಮರಳುಗಾರಿಕೆ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಚರ್ಚಿಸುವಾಗ ಹೇಳಿದ್ದಾರೆ ಅಲ್ಲದೆ ಒಂದು ವಾರದ ಒಳಗೆ ಆದೇಶ ಹೊರಡಿಸುವಂತೆ ಹೇಳಿದ್ದೇನೆ ಎಂದು ಸಭೆಯಲ್ಲಿ ರೈತರ ಪ್ರಶ್ನೆಗೆ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರು ಉತ್ತರಿಸಿದರು.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯ ವ್ಯವಸ್ಥೆಗಳು ಬೇರೆ ರೈತ ಸಂಘ ತಮ್ಮ ಇರುವಿಕೆಯನ್ನು ರೈತರ ಸಮಸ್ಯೆಯನ್ನು ಪರಿಹರಿಸುವಂತಹ ಚಿಂತನೆ ಹಾಗೂ ಭಾವನೆಗಳಿಗೆ ಪೂರಕವಾಗಿ ರೈತ ಸಂಘದ ವಿಚಾರಧಾರೆಯ ಮೂಲಕ ಸ್ಪಂದಿಸಬೇಕಾಗಿದೆ ಎಂದರು.
ಬಹಳಷ್ಟು ಅರ್ಜಿಗಳನ್ನು ಮಂಜೂರು ಮಾಡಲಾಗದಂತಹ ತಾಂತ್ರಿಕ ಸಮಸ್ಯೆಗಳಲ್ಲಿ ಕುಮ್ಕಿ ಜಮೀನು ಒಂದಾಗಿದ್ದು, ಈ ಕುಮ್ಕಿಗೆ ವಿಶೇಷವಾದ ಅವಕಾಶ ಕಲ್ಪಿಸಿ ಕೊಡಬೇಕು ಎನ್ನುವ ಚಿಂತನೆಯ ಹಿನ್ನೆಲೆಯಲ್ಲಿ ಅಧ್ಯಾದೇಶವನ್ನು ಕುಮ್ಕಿ ಜಮೀನನ್ನು ರೈತರಿಗೆ ಕೊಡಿಸುವ ಕಾಯ್ದೆಯನ್ನು ಮಾಡಿದ್ದಾರೆ ಪ್ರಸ್ತುತ ಕುಮ್ಕಿ ಜಮೀನನ್ನು ರೈತರಿಗೆ ನೀಡಲು ಆಗದಿರುವಂತಹ ವಾತಾವರಣ ನಿರ್ಮಾಣವಾಗಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಗ್ರಾಮ ಪಂ. ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ, ತಾ.ಪಂ. ಸದಸ್ಯೆ ಜ್ಯೋತಿ ಪುತ್ರನ್, ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘದ ವಿವಿಧ ವಲಯಗಳ ಅಧ್ಯಕ್ಷರಾದ ಶೇಷಗಿರಿ ಗೋಟ, ಸತೀಶ್ ಕಿಣಿ, ಕೃಷ್ಣದೇವ ಕಾರಂತ್, ಶರತ್ ಕುಮಾರ್ ಶೆಟ್ಟಿ, ವಾಸುದೇವ ಪೈ, ಬಲ್ಲಾಡಿ ಸಂತೋಷ ಕುಮಾರ್ ಶೆಟ್ಟಿ, ಕಿಶೋರ್ ಕುಮಾರ್, ಭೋಜು ಕುಲಾಲ್, ಸೀತಾರಾಮ ಗಾಣಿಗ, ಸಂಪಿಗೇಡಿ ಸಂಜೀವ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘ, ಬೀಜಾಡಿ ವಲಯದ ಅಧ್ಯಕ್ಷ , ಮಾಜಿ ತಾ.ಪಂ. ಸದಸ್ಯ ಕೆ.ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.ಉಡುಪಿ ಜಿಲ್ಲಾ ರೈತ ಸಂಘ, ಬೀಜಾಡಿ ವಲಯದ ಅಧ್ಯಕ್ಷ ಕೆ. ಸದಾನಂದ ಶೆಟ್ಟಿ ಸ್ವಾಗತಿಸಿ, ಉಡುಪಿ ಜಿಲ್ಲಾ ರೈತ ಸಂಘದ ಕೋಟೇಶ್ವರ ವಲಯದ ಉಪಾಧ್ಯಕ್ಷ ವಿಕಾಸ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿ, ಹರಿಪ್ರಸಾದ್ ಶೆಟ್ಟಿ ವಂದಿಸಿದರು.
ಜನಪ್ರತಿನಿಧಿಗಳಿಗೆ ಕೇಳದ ರೈತರ ಧ್ವನಿ ?
ಕರಾವಳಿ ಭಾಗದಲ್ಲಿ ಡೀಮ್ಡ್ ಫಾರೆಸ್ಟ್ ಎನ್ನುವ ವಿಚಾರ ಬರಲೇ ಬಾರದು ರೈತರ ಆದ್ಯತೆಯ ನೆಲೆಯಲ್ಲಿ ವ್ಯವಸ್ಥೆಗೊಂದು ರೂಪಕೊಡಿ . ಕರಾವಳಿಯ ಕೋಡಿ ಕನ್ಯಾಣದಿಂದ ಕುಂದಾಪುರದ ವರೆಗೆ ಕಡಲ ತೀರದ ತೋಡುಗಳನ್ನು ಸಮರ್ಪಕವಾಗಿ ಹೂಳು ತೆಗೆದು ದಂಡೆ ನಿರ್ಮಿಸಬೇಕಾದ ಅಗತ್ಯತೆ ಇದೆ ಎಂದು ಹಲವು ಸಮಸ್ಯೆಗಳ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಹಿರಿಯಣ್ಣ ಮೈಕ್ ಹಿಡಿದು ಹತ್ತು ನಿಮಿಷ ವಿವರಣೆ ನೀಡಿ ಜನಪ್ರತಿನಿಧಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಂತೆ ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳು ನಿಮ್ಮ ಧ್ವನಿ ನಮಗೆ ಕೇಳಲೇ ಇಲ್ಲ …! ಎಂದು ಪ್ರತಿಕ್ರಿಯಿಸಿದಾಗ ಮಾತಾಡುವುದು ಬೇಡ ಅಂತ ಇದ್ರೆ ಹೇಳಿ ಎದ್ದು ಹೋಗುವೆ …! ಎಂದು ಹೇಳುತ್ತಿದ್ದಂತೆ ಅನಂತರ ವೇದಿಕೆಗೆ ಕರೆದು ಸಮಸ್ಯೆಗಳ ಬಗ್ಗೆ ಪುನಃ ವಿವರಿಸುವಂತೆ ಹೇಳಿದ ಘಟನೆ ಕೂಡ ನಡೆಯಿತು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.