ರೈತ ಸಂಘದ ನಿಯೋಗ ಭೇಟಿ; ಪರಿಶೀಲನೆ
ಹರೇಗೋಡು: ಗದ್ದೆಗೆ ನುಗ್ಗಿದ ಉಪ್ಪು ನೀರು
Team Udayavani, Nov 22, 2020, 12:15 PM IST
ಕುಂದಾಪುರ, ನ. 21: ಹರೇಗೋಡು ಪರಿಸರದಲ್ಲಿ ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಹಿಂಗಾರು ಹಂಗಾಮಿಗೆ ಅಡ್ಡಿಯಾಗಿದ್ದಲ್ಲದೆ, ಈಗಾಗಲೇ ಬಿತ್ತನೆ ಮಾಡಲಾದ ಉದ್ದು ನೀರುಪಾಲಾಗಿ ನಷ್ಟ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ನ. 21ರಂದು ಉಡುಪಿ ಜಿಲ್ಲಾ ರೈತ ಸಂಘದ ತ್ರಾಸಿ ವಲಯದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಉಪ್ಪು ನೀರು ನುಗ್ಗಿದ ಹರೇಗೋಡು ಪರಿಸರದ ಗದ್ದೆಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿದ ರೈತ ಸಂಘದ ತ್ರಾಸಿ ವಲಯದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಇದಕ್ಕೂ ಮೊದಲೇ ರಾಜಾಡಿ ಕಳುವಿನಬಾಗಿಲಿನಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಬೇಕಿತ್ತು. ಆದರೆ ಈವರೆಗೆ ಹಲಗೆ ಹಾಕಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಹಲಗೆ ಅಳವಡಿಸಲಿ. ಜತೆಗೆ ಹರೇಗೋಡು ಸಮೀಪದ ನದಿ ದಂಡೆ ನಿರ್ಮಿಸಬೇಕು ಎನ್ನುವುದಾಗಿ ಅವರು ಆಗ್ರಹಿಸಿದರು.
ರಾಜಾಡಿ ಕಳುವಿನಬಾಗಿಲಿನ ಕಿಂಡಿ ಅಣೆಕಟ್ಟಿಗೆ ಇನ್ನೂ ಕೂಡ ಗೇಟು ಅಳವಡಿಸದ ಕಾರಣ ಹರೇಗೋಡು, ಕೋಟೆಬಾಗಿಲು, ಕನ್ಯಾನ, ತೋಟಬೈಲು, ಗುಬ್ಬುಕೋಣ, ಕಲ್ಕೇರಿ ಮತ್ತಿತರ ಭಾಗಗಳ ಗದ್ದೆಗಳಿಗೆ ಉಪ್ಪು ನೀರು ನುಗ್ಗಿದ್ದು, ಇದರಿಂದ ಉದ್ದು ಬಿತ್ತನೆ ಮಾಡಲಾದ ಗದ್ದೆಗೂ ನೀರು ನುಗ್ಗಿ, ಹಾನಿಯಾಗಿದೆ. ಹಿಂಗಾರು ಹಂಗಾಮಿನ ಭತ್ತದ ಕೃಷಿ ಕಾರ್ಯಕ್ಕೂ ತೊಂದರೆಯಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ತ್ರಾಸಿ ವಲಯದ ಸದಸ್ಯರಾದ ಚಂದ್ರ ನಾಯ್ಕ, ನರಸಿಂಹ ಗಾಣಿಗ, ವಿಶ್ವನಾಥ ಗಾಣಿಗ, ಶ್ರೀಕಾಂತ ಆಚಾರ್ಯ, ಬಚ್ಚ ದೇವಾಡಿಗ, ಸಚ್ಚಿಂದ್ರ ದೇವಾಡಿಗ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!
Udupi: ಶ್ರೀ ಕೃಷ್ಣ ಮಠದಲ್ಲಿ ವೈಭವದ ಮಕರ ಸಂಕ್ರಾಂತಿ ಉತ್ಸವ ಸಂಪನ್ನ
Kerala: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಶವಾಗಾರದಲ್ಲಿ ಜೀವಂತವಾದ!
Cast Census: ಜಾತಿಗಣತಿ ವರದಿ ಚರ್ಚೆಯ ಈಗಿನ ವಿಚಾರ, ಅಂಕಿ-ಅಂಶಗಳೆಲ್ಲ ಊಹಾಪೋಹವಷ್ಟೇ: ಸಿಎಂ
Maha Kumbh Mela 2025: ಯಾರು ಈ ನಾಗಾ ಸಾಧ್ವಿಗಳು…ನಿಗೂಢ, ಕಠಿಣ ಸವಾಲಿನ ಹಾದಿ ಇವರದ್ದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.