ಉದ್ದಿನಹಿತ್ಲು: ಪುತ್ರಿ ಸಹಿತ ಬಾವಿಗೆ ಹಾರಿ ತಂದೆ ಆತ್ಮಹತ್ಯೆ
Team Udayavani, Sep 1, 2017, 8:50 AM IST
ಮಲ್ಪೆ: ಎಂಟು ವರ್ಷದ ಪುತ್ರಿಯೊಂದಿಗೆ ತಂದೆ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೊಡವೂರು ಗ್ರಾಮದ ಉದ್ದಿನಹಿತ್ಲು ಎಂಬಲ್ಲಿ ಸಂಭವಿಸಿದೆ.
ಕೊಡವೂರು ಉದ್ದಿನಹಿತ್ಲು ನಿವಾಸಿ ಶರತ್ ಕುಮಾರ್ (40) ಪುತ್ರಿ ಕನ್ನಿಕಾ (8) ಮೃತಪಟ್ಟವರು. ಗುರುವಾರ ಮುಂಜಾನೆ ಇವರಿಬ್ಬರ ಮೃತದೇಹ ಮನೆ ಸಮೀಪದ ತೋಟದ ಬಾವಿಯಲ್ಲಿ ಪತ್ತೆಯಾಗಿದೆ.
ಮಾನಸಿಕ ಖನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದರೂ ಸ್ಪಷ್ಟ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ.
ಮಂಗಳವಾರ ರಾತ್ರಿಯೇ ನಾಪತ್ತೆ
ಮಂಗಳವಾರ ರಾತ್ರಿ ಮನೆ ಯಲ್ಲಿಯೇ ಇದ್ದ ಶರತ್ ತನ್ನ ಪತ್ನಿ ಮಗಳೊಂದಿಗೆ ಊಟ ಮಾಡಿ ಮಲಗಿದ್ದರು. ಮಧ್ಯೆ ರಾತ್ರಿ ಪತ್ನಿಗೆ ಎಚ್ಚರವಾದಾಗ ಇವರಿಬ್ಬರು ಹಾಸಿಗೆ ಯಲ್ಲಿ ಇಲ್ಲದ್ದನ್ನು ಕಂಡು ಪತ್ನಿ ಹಾಗೂ ಮನೆಯವರು ರಾತ್ರಿಯೇ ಹುಡುಕಾಟ ನಡೆಸಿದ್ದರು. ಬುಧವಾರ ಬೆಳಗ್ಗೆ ಪೊಲೀಸರಿಗೂ ಈ ಬಗ್ಗೆ ಮೌಖೀಕವಾಗಿ ದೂರು ನೀಡಿ ಅವರ ಸಹಕಾರದಿಂದ ಹುಡು ಕಾಟ ನಡೆಸಿ ದ್ದಾರೆ. ಬುಧವಾರ ರಾತ್ರಿವರೆಗೂ ಇಬ್ಬರ ಪತ್ತೆಯೂ ಆಗಿರಲಿಲ್ಲ. ಗುರು ವಾರ ಬೆಳಗ್ಗೆ ಇಬ್ಬರ ಮೃತದೇಹ ಮನೆ ಸಮೀಪದ ತೋಟದ ಬಾವಿಯಲ್ಲಿ ತೇಲುವ ರೀತಿಯಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಶರತ್ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು ಕೌಟುಂಬಿಕ ಕಾರಣವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ವಿದೇಶದಲ್ಲಿ ಉದ್ಯೋಗ ದಲ್ಲಿದ್ದ ಶರತ್ ಅವರು ಕಳೆದ ಹಲವು ವರ್ಷದಿಂದ ಊರಿನಲ್ಲಿ ನೆಲೆಸಿದ್ದು ಪ್ರಸ್ತುತ ಮಲ್ಪೆ ಬಂದರಿನಲ್ಲಿ ಪಾಲುದಾರಿಕೆಯಲ್ಲಿ ಮೀನುಗಾರಿಕೆ ಉದ್ಯಮವನ್ನು ನಡೆಸುತ್ತಿದ್ದರು. ಮಗಳು ಕನ್ನಿಕಾ ಮಲ್ಪೆಯ ಆಂಗ್ಲಮಾದ್ಯಮ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿ.
ಮುದ್ದಿನ ಮಗಳು
ಶರತ್‌ಗೆ ಮಗಳು ಕನ್ನಿಕಳ ಮೇಲೆ ಅಪಾರ ಪ್ರೀತಿ. ಅವಳನ್ನು ಶಾಲೆಗೂ ಅವರೇ ಕರೆದುಕೊಂಡು ಹೋಗುವುದು, ಊಟ ತಿಂಡಿ ಯನ್ನು ತಾನೇ ತಿನ್ನಿಸಿ ಅತೀ ಮುದ್ದಾಗಿ ಸಾಕುತ್ತಿದ್ದರು. ಒಂದು ಘಳಿಗೆಯೂ ಅವಳನ್ನು ಬಿಟ್ಟು ಇರುತ್ತಿರಲಿಲ್ಲ.
ಹೊರಗೆ ಎಲ್ಲಾದರೂ ಹೋಗು ವಾಗಲೂ ತನ್ನ ಜತೆಯಲ್ಲಿಯೇ ಕರೆದು ಕೊಂಡು ಹೋಗುತ್ತಿದ್ದರು. ಇದೀಗ ಸಾವಿನಲ್ಲೂ ಮಗಳನ್ನು ಜತೆಯಲ್ಲೇ ಕರೆದುಕೊಂಡು ಹೋದಂತಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿನಿ
ಕನ್ನಿಕಾ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ. ಓದಿನಲ್ಲಿ ಮಾತ್ರವಲ್ಲ ಪ್ರತಿಯೊಂದು ಚಟು ವಟಿಕೆಯಲ್ಲೂ ಬಹಳ ಆಸಕ್ತಿ. ಶಾಲೆಯಲ್ಲಿ ಯಾವುದೇ ಸ್ಪರ್ಧೆ ನಡೆಸಿದರೂ ಅದರಲ್ಲಿ ಒತ್ತಾಯವಾಗಿ ತನ್ನ ಹೆಸರನ್ನು ಸೇರಿಸಿ ಅದರಲ್ಲಿ ಭಾಗವಹಿಸುತ್ತಿದ್ದಳು. ಶಿಕ್ಷಕರ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದ ಅವಳು ಪ್ರತೀದಿನ ಅವಳ ಹಿಂದಿನ ವರ್ಷದ ಕ್ಲಾಸ್ ಟೀಚರ್‌ಗೆ ಹೂ ಕೊಡುವ ಪರಿಪಾಠ ಬೆಳೆಸಿಕೊಂಡಿದ್ದಳು. ಆದರಂತೆ ಮಂಗಳವಾರವೂ ನನಗೆ ಹೂ ಕೊಟ್ಟು ಹೋಗಿದ್ದಾಳೆ ಎಂದು ರೋಸ್ಲಿ ಟೀಚರ್ ದುಃಖೀತರಾಗಿ ಹೇಳುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.