ಶಿರ್ವದ ಫಾದರ್ ಆತ್ಮಹತ್ಯೆ ಪ್ರಕರಣ; ಮುದರಂಗಡಿ ಗ್ರಾ.ಪಂ. ಅಧ್ಯಕ್ಷ ಸೆರೆ
ಆರೋಪಿಗೆ ಮುಳುವಾದ ವಿಧಿವಿಜ್ಞಾನ ವರದಿ
Team Udayavani, Feb 27, 2020, 1:38 AM IST
ಶಿರ್ವ: ಸುಮಾರು ನಾಲ್ಕು ತಿಂಗಳ ಹಿಂದೆ ಇಲ್ಲಿನ ಡಾನ್‌ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾಗಿದ್ದ ಫಾ| ಮಹೇಶ್ ಡಿ’ ಸೋಜಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಧಿವಿಜ್ಞಾನ ವರದಿ ಆಧರಿಸಿ ಓರ್ವನನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಇವರಿಗೆ ಜೀವ ಬೆದರಿಕೆ, ಆತ್ಮಹತ್ಯೆಗೆ ದುಷೆøàರಣೆ ನೀಡಿದ ಆರೋಪದಲ್ಲಿ ಪಿಲಾರು ಪೆರ್ನಾಲಿನ ನಿವಾಸಿ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿ’ ಸೋಜಾ (49) ಎಂಬಾತನನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಕಾಪು ಸಿಐ ಮಹೇಶ್ ಪ್ರಸಾದ್ ಅವರ ನಿರ್ದೇಶನದಂತೆ ಶಿರ್ವ ಠಾಣಾಧಿಕಾರಿ ಶ್ರೀಶೈಲಂ ಅವರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾ. 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಫಾ| ಮಹೇಶ್ ಡಿ’ ಸೋಜಾ ಅವರು 2019ರ ಅ. 11ರಂದು ರಾತ್ರಿ ತನ್ನ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದಕ್ಕೆ ಡೇವಿಡ್ ಡಿ’ ಸೋಜಾನ ದುಷೆøàರಣೆ ಹಾಗೂ ಬೆದರಿಕೆಯೇ ಕಾರಣ ಎಂಬುದು ಫಾ| ಮಹೇಶ್‌ಅವರ ಮೊಬೈಲ್‌ನ ವಿಧಿವಿಜ್ಞಾನ ಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ತನಿಖೆಯ ವಿವರ
ಫಾದರ್ ಮಹೇಶ್ ಡಿ’ ಸೋಜಾ ಅವರ ಮೊಬೈಲ್‌ನಿಂದ ಡೇವಿಡ್‌ನ ಪತ್ನಿ ಪ್ರಿಯಾ ಡಿ’ ಸೋಜಾರಿಗೆ ಮೆಸೇಜ್ ಹೋಗಿತ್ತು. ಇದನ್ನು ಆಕ್ಷೇಪಿಸಿ ಡೇವಿಡ್ ಮೊಬೈಲ್ ಮೂಲಕವೇ ಮಹೇಶ್ ಡಿ’ಸೋಜಾರಿಗೆ ಹಾಗೂ ಅವರ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ. ಅಲ್ಲದೆ ಅರ್ಧ ಗಂಟೆಯ ಒಳಗೆ ಚರ್ಚ್‌ಗೆ ನುಗ್ಗಿ ನಿನ್ನನ್ನು ಕತ್ತರಿಸಿ ಹಾಕುತ್ತೇನೆ, ಜನ ಸೇರಿಸಿ ಮರ್ಯಾದೆ ತೆಗೆಯುತ್ತೇನೆ ಎಂದೆಲ್ಲ ಬೆದರಿಕೆ ಒಡ್ಡಿದ್ದ. ಜತೆಗೆ ಇವತ್ತೇ ನೇಣು ಬಿಗಿದುಕೊಳ್ಳಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳಲು ದುಷೆøàರಣೆ ನೀಡಿದ್ದಾನೆ. ಇದೇ ಕಾರಣದಿಂದ ಮಹೇಶ್ ಡಿ’ ಸೋಜಾ ಅವರು ಶಾಲೆಯ ಪ್ರಾಂಶುಪಾಲರ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಆರೋಪಿಯು ಘಟನೆ ಬಳಿಕ ಈ ಪ್ರಕರಣಕ್ಕೆ ಸಂಬಂಧಪಟ್ಟು ತನ್ನ ಪತ್ನಿಯ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಅಳಿಸಿ ಸಾಕ್ಷ್ಯ ನಾಶ ಮಾಡಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬಂದಿರುವುದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ.
ಆರಂಭದಲ್ಲೇ ಆರೋಪಿ ಬಗ್ಗೆ ಅನುಮಾನ ಮೂಡಿದ್ದ ರಿಂದ ಮೊಬೈಲ್ ಫೋನ್ ಹಾಗೂ ಇತರ ಕೆಲವು ಸೊತ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸ ಲಾಗಿತ್ತು. ಅದರ ವರದಿಯಲ್ಲಿ ಆರೋಪಿಯು ಫಾದರ್‌ಗೆ ಬೆದರಿಕೆ ಹಾಕಿದ್ದ ವಿಷಯಗಳೆಲ್ಲವೂ ದಾಖಲಾಗಿವೆೆ.
ಆರೋಪಿ ಹಲವರ ಮೇಲೆ ಕೇಸು ದಾಖಲಿಸಿದ್ದ
ಇದೇ ಪ್ರಕರಣದಲ್ಲಿ ಆರೋಪಿಯೂ ಕೆಲವರ ವಿರುದ್ಧ ಕೇಸು ದಾಖಲಿಸಿದ್ದಾನೆ. ಫಾದರ್ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲದಿದ್ದರೂ, ಕೆಲವರು ತನ್ನ ವಿರುದ್ಧ ಮಾನಹಾನಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರು ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.