ಟ್ರಾಫಿಕ್ ಸಮಸ್ಯೆಯೊಂದಿಗೆ ಅಪಘಾತದ ಭಯ
ಕಟಪಾಡಿ ಬಸ್ ತಂಗುದಾಣ
Team Udayavani, Mar 31, 2019, 6:30 AM IST
ಕಟಪಾಡಿ: ಇಲ್ಲಿ ಬಸ್ ತಂಗುದಾಣವೇನೋ ಇದೆ. ಆದರೆ ಬಸ್‌ಗಳು ಆ ಸ್ಥಳದಲ್ಲೇ ನಿಲ್ಲುತ್ತಿಲ್ಲ. ಇದರಿಂದ ಅಪಘಾತದ ಭಯ ಕಾಡಿದೆ.
ಈ ಮೊದಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿದ್ದರಿಂದ ಟ್ರಾಫಿಕ್ ಕಿರಿಕಿರಿ, ಅಪಘಾತಕ್ಕೆ ಕಾರಣವಾಗುತ್ತಿತ್ತು. ಬಳಿಕ ಪೊಲೀಸ್ ಅಧಿಕಾರಿಗಳು ಎಕ್ಸ್‌ಪ್ರೆಸ್, ಸರ್ವಿಸ್ ಬಸ್‌ಗಳು ಸರ್ವಿಸ್ ರಸ್ತೆ ಯನ್ನು ಬಳಸುವಂತೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದು, ಹೆಚ್ಚಿನ ಅಪಘಾತಗಳು ನಿಯಂತ್ರಣಕ್ಕೆ ಬಂದಿತ್ತು.
ಆದರೆ ಕಳೆದ ಎರಡು ತಿಂಗಳುಗಳಿಂದ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್, ಸರ್ವಿಸ್, ಸಿಟಿ ಬಸ್‌ಗಳು ಕಟಪಾಡಿ ಗ್ರಾ.ಪಂ. ನಿರ್ಮಿಸಿದ ಬಸ್ ತಂಗುದಾಣದಲ್ಲಿ ನಿಲ್ಲದೆ ಸಮಸ್ಯೆ ಒಡ್ಡುತ್ತಿವೆ. ಹೆಚ್ಚು ಜನಸಂಚಾರ ಇರುವ ಪಂಚಾಯತ್, ವಾಣಿಜ್ಯ ಕಟ್ಟಡ, ಪೊಲೀಸ್ ಹೊರಠಾಣೆಯ ಮುಂಭಾಗದಲ್ಲಿಯೇ ಬಸ್‌ಗಳನ್ನು ನಿಲ್ಲಿಸುವುದರಿಂದ ಎದುರು ಭಾಗದಿಂದ ಬರುವ ವಾಹನವು ಕಾಣದೆ ಸಣ್ಣ ಪುಟ್ಟ ಅಪಘಾತಗಳೂ ಸಂಭವಿಸಿವೆ. ವಾಹನಗಳ ಮಧ್ಯೆ ತೂರಿಕೊಂಡೇ ಪ್ರಯಾಣಿಕರೂ ಬಸ್ ಹತ್ತಬೇಕಾಗಿದೆ.
ಇವೆಲ್ಲಕ್ಕೂ ಶಾಶ್ವತವಾಗಿ ಮುಕ್ತಿ ಹಾಡಲು ಹೊಸ ಬಸ್ ತಂಗುದಾಣದ ಎದುರೇ ಬಸ್ ನಿಲ್ಲುವಂತಾಗಬೇಕೆಂದು ಜನತೆ ಆಗ್ರಹಿಸಿದ್ದಾರೆ.
ಬಸ್‌ಗಳ ಕಾನೂನು ಉಲ್ಲಂಘನೆ
ಈ ಸಮಸ್ಯೆಯ ಬಗ್ಗೆ ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಗಮನಕ್ಕೆ ತರಲಾಗಿದೆ. ಪೊಲೀಸ್ ಕ್ರಮ ಕೈಗೊಂಡ ಅರ್ಧ ತಾಸಿನೊಳಗೆ ಬಸ್‌ಗಳು ಮತ್ತೆ ಬೇಕಾಬಿಟ್ಟಿ ನಿಲ್ಲಿಸಿ ಕಾನೂನು ಉಲ್ಲಂ ಸುತ್ತಿವೆ. ಚಾಲಕರು ಬಸ್ ತಂಗುದಾಣವನ್ನೇ ಬಳಸಬೇಕು.
– ರವಿ ಕೋಟ್ಯಾನ್, ಸದಸ್ಯ, ಉದ್ಯಾವರ ಗ್ರಾ.ಪಂ.
ಕಾನೂನು ಕ್ರಮ ಅಗತ್ಯ
ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಬಸ್ ನಿಲುಗಡೆ ಸರಿಯಲ್ಲ. ಚಾಲಕರು ತಂಗುದಾಣದಲ್ಲಿಯೇ ಬಸ್ಸನ್ನು ನಿಲುಗಡೆಗೊಳಿಸಬೇಕು. ಪೊಲೀಸರು ಇದರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾದಲ್ಲಿ ಅನಾಹುತ ತಪ್ಪಿಸಲು ಸಾಧ್ಯ.
-ಅಶೋಕ್ ಶೆಟ್ಟಿ, ಜಲಶ್ರೀ ಕಟಪಾಡಿ
ಶೀಘ್ರ ಕ್ರಮ ಈ ಅವ್ಯವಸ್ಥೆ ಬಗ್ಗೆ
ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಗೆ ಆದಷ್ಟು ಶೀಘ್ರದಲ್ಲಿ ಮುಕ್ತಿ ನೀಡಲಾಗುವುದು.
– ನವೀನ್ ಎಸ್. ನಾೖಕ್, ಪಿ.ಎಸ್.ಐ. ಕಾಪು ಪೊಲೀಸ್ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.