ಬೊಬ್ಬರ್ಯಗುಡ್ಡೆ ಬಳಿ ಸಂಪರ್ಕ ರಸ್ತೆ ಕುಸಿತದ ಭೀತಿ
Team Udayavani, Jul 31, 2018, 6:00 AM IST
ಮಲ್ಪೆ: ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಗ್ರಾಮದ ಸಸಿತೋಟ ಎಂಬಲ್ಲಿ ನದಿ ಕೊರೆತದ ಪರಿಣಾಮವಾಗಿ ಇಲ್ಲಿನ ಹೊಳೆ ತೀರದ ನಿವಾಸಿಗಳು ಬವಣೆ ಪಡುವಂತಾಗಿದೆ.
ನದಿ ಕೊರೆತದ ಪರಿಣಾಮ ಇಲ್ಲಿ ವಿದ್ಯುತ್ ಕಂಬ ನೀರು ಉರುಳಿ ಬೀಳುವ ಸ್ಥಿತಿಯಲ್ಲಿದೆ. ಮಾತ್ರವಲ್ಲದೆ ಸಂಪರ್ಕ ರಸ್ತೆಯೂ ಕೂಡ ಕಡಿತಗೊಳ್ಳುವ ಸಾಧ್ಯತೆ ಇದೆ. ನದಿ ಕೊರೆತ ಉಂಟಾಗದಂತೆ ಈ ಭಾಗದಲ್ಲಿ ಶಾಶ್ವತವಾದ ಕಲ್ಲುದಂಡೆಯನ್ನು ನಿರ್ಮಿಸದೇ ಇರುವುದರಿಂದಾಗಿ ಸಮಸ್ಯೆ ಉದ್ಭವಿಸಿದೆ.
ಮಳೆಗಾಲದಲ್ಲಿ ಭಾರಿ ಮಳೆ ಸುರಿದಾಗ ಹೊಳೆ ನೀರು ತುಂಬಿಕೊಂಡು ನದಿ ಕೊರತದ ಭೀಕರತೆ ಅತಿಯಾಗುತ್ತದೆ.
ಈಗಾಗಲೇ ರಸ್ತೆಯ ಅಂಚಿನವರೆಗೆ ಕೊರೆತ ಉಂಟಾಗಿದ್ದು ಸಮೀಪದ ಮನೆಗಳಿಗೂ ಭೀತಿ ಉಂಟಾಗುತ್ತಿದೆ. ಶಾಲಾ ಮಕ್ಕಳ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಅಪಾಯಕ್ಕೆ ಅಹ್ವಾನ ನೀಡುವಂತಿದೆ.
ಸುಮಾರು 7-8 ವರ್ಷಗಳ ಹಿಂದೆ ಇಲ್ಲಿನ ಅಣೆಕಟ್ಟು ವರೆಗೆ ಶಾಶ್ವತ ತಡೆಗೋಡೆ ರಚನೆ ಮಾಡಲಾಗಿದೆ. ಅಲ್ಲಿಂದ ಮುಂದೆ ಸುಮಾರು 200 ಮೀ. ಉದ್ದಕ್ಕೆ ತಡೆಗೋಡೆ ನಿರ್ಮಾಣ ಆಗಬೇಕಾಗಿದ್ದು ಈ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ಸಂಬಂಧಪಟ್ಟ ಎಲ್ಲ ಇಲಾಖೆಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಹೋರಾಟ ಮಾಡುತ್ತಾ ಬಂದಿದ್ದೇವೆ
ಕಳೆದ ಮೂರು ವರ್ಷದಿಂದ ಈ ಬಗ್ಗೆ ನಾವು ಹೋರಾಟವನ್ನು ಮಾಡುತ್ತಾ ಬಂದಿದೇªವೆ. ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿಯನ್ನು ಮಾಡಿದೇªವೆ ಯಾವ ಪ್ರಯೋಜನವೂ ಇಲ್ಲ. ನದಿ ಕೊರೆತದಿಂದ ರಸ್ತೆ ಜರಿದು ಸಮೀಪದ ಮನೆಗಳಿಗೆ ಅಪಾಯ ಕಾದಿದೆ.
– ಪ್ರಶಾಂತ್ ಕಾಂಚನ್ , ಕುತ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.