ಫೆ.10: ಹಿಂದೂ ರಾಷ್ಟ್ರ ಜಾಗೃತಿ ಸಭೆ
Team Udayavani, Jan 17, 2019, 12:50 AM IST
ಉಡುಪಿ: ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಜಿÇÉೆಯಾದ್ಯಂತ ಈಗಾಗಲೇ ಪುತ್ತೂರು ಅಂಬಾಗಿಲು, ನೇರಳಕಟ್ಟೆ, ಕೆರಾಡಿ, ಪರ್ಕಳದಲ್ಲಿ ಧರ್ಮ ಜಾಗೃತಿ ಸಭೆಗಳು ನಡೆದಿದ್ದು, ಉಡುಪಿಯಲ್ಲಿ ಫೆ.10ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸುವ ಕುರಿತು ಜ. 15 ರಂದು ಉಡುಪಿ ರಥಬೀದಿಯ ಪುತ್ತಿಗೆ ಮಠದಲ್ಲಿ ಪೂರ್ವಭಾವಿ ಸಭೆ ಜರಗಿತು.
ಸಭೆಯಲ್ಲಿ ಭಾಗವಹಿಸಿದ ಸಮಿತಿಯ ವಿಜಯ ಕುಮಾರ ಅವರು ಮಾತನಾಡಿ, ಹಿಂದೂ ಧರ್ಮದ ಮೇಲಾಗುವ ಆಘಾತಗಳನ್ನು ತಡೆಯುವುದು ಪ್ರಸ್ತುತ ಕಾಲದ ಮಹತ್ವದ ಧರ್ಮ ಕಾರ್ಯವಾಗಿದೆ. ಅದಕ್ಕಾಗಿ ಎಲ್ಲರೂ ಸಂಘಟಿತರಾಗಬೇಕಾಗಿದೆ. ಹಿಂದೂ ಸಮಾಜ, ದೇಶದ ಮೇಲೆ ಎರಗಿ ಬಂದ ಎಲ್ಲ ಸಮಸ್ಯೆಗಳಿಗೆ ಹಿಂದೂ ರಾಷ್ಟ್ರದ ಸ್ಥಾಪನೆಯಿಂದ ಶಾಶ್ವತವಾಗಿ ಪರಿಹಾರ ಸಿಗಲಿದೆ. ಅದಕ್ಕಾಗಿ ಎಲ್ಲರೂ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಭಾಗವಹಿಸಬೇಕು ಎಂದರು.
ಸನಾತನ ಸಂಸ್ಥೆಯ ಶೋಭಾ, ಶ್ರೀರಾಮಸೇನೆಯ ಜಿÇÉಾಧ್ಯಕ್ಷ ಜಯರಾಮ ಅಂಬೆಕಲ್ಲು ಮತ್ತು ಇತರ ಸಂಘಟನೆಗಳ ಹಲವರು ಭಾಗವಹಿಸಿದ್ದರು. ಪೂರ್ವಭಾವಿ ಸಭೆಯಲ್ಲಿ ಫೆ.10ರಂದು ಉಡುಪಿಯ ಬೋರ್ಡ… ಹೈಸ್ಕೂಲಿನ ವಠಾರದಲ್ಲಿ ದೊಡ್ಡ ಮಟ್ಟದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲು ನಿರ್ಧರಿಸಲಾಯಿತು. ಇದಕ್ಕಾಗಿ ಜಿÇÉೆಯಾದ್ಯಂತ ದೇವಸ್ಥಾನಗಳು, ಭಜನಾ ಮಂದಿರ, ಧಾರ್ಮಿಕ ಸಂಘಟನೆಗಳು, ಯುವಕ ಮಂಡಲಗಳು, ಜಾತಿ ಸಂಘಟನೆಗಳನ್ನು ಭೇಟಿ ಮಾಡಲು ನಿರ್ಧರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.