Feb 11: 6ನೇ ಆವೃತ್ತಿಯ ಮಣಿಪಾಲ ಮ್ಯಾರಾಥಾನ್
15 ಸಾವಿರಕ್ಕೂ ಅಧಿಕ ಆ್ಯತ್ಲೀಟ್‌ಗಳ ನಿರೀಕ್ಷೆ
Team Udayavani, Sep 29, 2023, 11:53 PM IST
ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯವು ಜಿಲ್ಲಾ ಅಮೆ ಚೂರ್ ಆ್ಯತ್ಲೆಟಿಕ್ ಅಸೋಸಿಯೇಶನ್ ಹಾಗೂ ವಿವಿಧ ಸಂಘಟನೆಗಳ ಸಹ ಯೋಗದೊಂದಿಗೆ ಮಣಿಪಾಲ್ ಮ್ಯಾರಾಥಾನ್ 6ನೇ ಆವೃತ್ತಿಯನ್ನು 2024 ರ ಫೆ.11 ರಂದು ಹಮ್ಮಿಕೊಂಡಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜೀವನ್ಮರಣ (ಪ್ರಾಣಾಂತಿಕ) ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ (ಹೋಸ್ಪಿಸ್ ಕೇರ್) ಎಂಬ ಉದಾತ್ತ ಧ್ಯೇಯ ಹಾಗೂ “ನಾವು ನಿಮ್ಮೊಂದಿಗೆ ಸದಾ ಇದ್ದೇವೆ’ ಎಂಬ ಘೋಷವಾಕ್ಯ ಈ ಬಾರಿಯದ್ದು. ರಾಜ್ಯದ ವಿವಿಧ ಜಿಲ್ಲೆ, ಹೊರರಾಜ್ಯ ಹಾಗೂ ಇಥಿಯೋ ಪಿಯಾ, ಕೀನ್ಯಾ, ಇಂಗ್ಲೆಂಡ್, ನೇಪಾಲ, ಮಲೇಷ್ಯಾ, ಅಮೆರಿಕ, ಶ್ರೀಲಂಕಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆ್ಯತ್ಲೀಟ್‌ಗಳು ಭಾಗವಹಿಸುವರು ಎಂದರು.
ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಜೀವನ್ಮರಣ ಕಾಯಿಲೆಯಿಂದ ಬಳಲುತ್ತಿರುವವರ ಆರೈಕೆಗಾಗಿ 100 ಬೆಡ್‌ಗಳ ಆಸ್ಪತ್ರೆ ಯನ್ನು ನಿರ್ಮಿಸುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಸೇವೆಗೆ ಲಭ್ಯವಾ ಗಲಿದೆ ಎಂದು ಹೇಳಿದರು.
ಅ.15ರಿಂದ ನೋಂದಣಿ
ಮಾಹೆ ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ| ವಿನೋದ್ ನಾಯಕ್ ಮಾತನಾಡಿ, http://www.manipalmarathon.in ನಲ್ಲಿ ಅ.15ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. 42 ಕಿ.ಮೀ , 21 ಕಿ.ಮೀ ಹಾಫ್ ಮ್ಯಾರಾಥಾನ್, 5 ಕಿ.ಮೀ. ಓಟ, 10 ಕಿ.ಮೀ ಓಟ ಪ್ರತ್ಯೇಕವಾಗಿರಲಿದ್ದು, ಸುಮಾರು 15 ಲಕ್ಷ ರೂ. ವರೆಗೂ ಬಹುಮಾನ ವಿತರಿಸ ಲಿದ್ದೇವೆ ಎಂದು ವಿವರ ನೀಡಿದರು.
ಅಸೋಸಿಯೇಷನ್ ನ ಜಿಲ್ಲಾ ಗೌರವ ಸಲಹೆಗಾರ ರಘುಪತಿ ಭಟ್, ಕೆಎಂಸಿಸಹ ಡೀನ್ ಡಾ. ನವೀನ್ ಸಾಲಿನ್ಸ್ ಮಾತನಾಡಿದರು.
ರಾಜ್ಯ ಆ್ಯತ್ಲೆಟಿಕ್ ಅಸೋಸಿಯೇಶನ್ ಉಪಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾಧ್ಯಕ್ಷ ಕೆಂಪರಾಜ್, ಮಾಹೆ ಹಿರಿಯ ಅಧಿಕಾರಿಗಳಾದ ಡಾ| ಶರತ್ ಕುಮಾರ್ ರಾವ್, ಡಾ| ನಾರಾಯಣ ಸಭಾಹಿತ್, ಡಾ| ಗಿರಿಧರ ಕಿಣಿ, ಡಾ| ಅವಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.