ಮರಳಿಗಾಗಿ ಹೋರಾಟ: ಶಾಸಕ ರಘುಪತಿ ಭಟ್
Team Udayavani, Sep 16, 2018, 10:37 AM IST
ಉಡುಪಿ: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮರಳು ಸಮಸ್ಯೆ ಮುಂದುವರಿದಿದೆ. ಮುಖ್ಯಮಂತ್ರಿಗಳ ಆದೇಶವೂ ಪಾಲನೆಯಾಗುತ್ತಿಲ್ಲ. ಹಾಗಾಗಿ ಮುಂದಿನ ವಾರದಿಂದ ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.
ಶನಿವಾರ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್Õ ವತಿಯಿಂದ ಜರಗಿದ ಎಂಜಿನಿಯರ್ ಡೇ ಉದ್ಘಾಟಿಸಿ ಅವರು ಮಾತನಾಡಿದರು.
ಮರಳು ಸಮಸ್ಯೆಯಿಂದಾಗಿ ನಿರ್ಮಾಣ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಿದೆ. ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಈ ಭಾಗದ ಶಾಸಕರ ನಿರಂತರ ಶ್ರಮದ ಫಲವಾಗಿ ಉಡುಪಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2 ತಾಸು ಕಾಲ ಮರಳು ಸಮಸ್ಯೆ ಬಗ್ಗೆ ಚರ್ಚಿಸಿ ಅಂತಿಮವಾಗಿ ಮರಳು ದಿಬ್ಬಗಳನ್ನು ಗುರುತಿಸಲು ಎನ್‌ಐಟಿಕೆಗೆ ಪತ್ರಬರೆಯುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ ಜಿಲ್ಲಾಧಿಕಾರಿ ಅದನ್ನು ಪಾಲಿಸುತ್ತಿಲ್ಲ. ಅಂತಿಮವಾಗಿ ಮತ್ತೂಮ್ಮೆ ಉಡುಪಿ ಜಿಲ್ಲೆಯ ಎಲ್ಲ ಶಾಸಕರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಅನಂತರ ಪ್ರತಿಭಟನೆಯ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದರು.
ರಾಜಕೀಯ ಭ್ರಷ್ಟಾಚಾರ ಕೊನೆ
ಉಡುಪಿ ನಗರಸಭೆಯಲ್ಲಿ ನಿರ್ಮಾಣ ಸಂಬಂಧ ಯಾವುದೇ ಕಡತಗಳನ್ನು ಉದ್ದೇಶಪೂರ್ವಕ ತೆಗೆದಿರಿಸಿ ವಿಳಂಬಿಸಲು ಅವಕಾಶ ನೀಡುವುದಿಲ್ಲ. ಕಂಪ್ಲೀಷನ್ ಸರ್ಟಿಫಿಕೇಟ್‌ನ್ನು ಆಯುಕ್ತರ ಮಟ್ಟದಲ್ಲಿಯೇ ನೀಡಲು ಕ್ರಮ ಕೈಗೊಂಡು ರಾಜಕೀಯ ಭ್ರಷ್ಟಾಚಾರ ನಿಲ್ಲಿಸಲಾಗುವುದು ಎಂದು ರಘುಪತಿ ಭಟ್ ತಿಳಿಸಿದರು.
ತೂಗು ಸೇತುವೆಗಳ ನಿರ್ಮಾತೃ
ಗಿರೀಶ್ ಭಾರದ್ವಾಜ್, ಅಸೋಸಿ ಯೇಶನ್ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ಉಪಾಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಅಮಿತ್ ಅರವಿಂದ್ ಉಪಸ್ಥಿತರಿದ್ದರು.
ಸಮ್ಮಾನ
ಅವಿಭಜಿತ ದ.ಕ. ಜಿಲ್ಲೆಯ ಮೊದಲ ಮಹಿಳಾ ಎಂಜಿನಿಯರ್, ಕರಾವಳಿಯ ಪ್ರಮುಖ ಸೇತುವೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಮಹಿಳಾ ಎಂಜಿನಿಯರ್ ಜಯಂತಿ ಪ್ರಭು, ಜಿ.ಪಂ. ನಿವೃತ್ತ ಸಹಾಯಕ ಕಾರ್ಯ
ನಿವಾರ್ಹಕ ಎಂಜಿನಿಯರ್ ಎಂ. ಪಾಲಚಂದ್ರ ರಾವ್ ಹಾಗೂ ಸಿದ್ದರಾಜು ಅವರನ್ನು ಸಮ್ಮಾನಿಸಲಾಯಿತು.
ಅಧ್ಯಕ್ಷ ಎಂ. ಗೋಪಾಲ್ ಭಟ್ ಸ್ವಾಗತಿಸಿದರು. ಯೋಗೀಶ್ ಚಂದ್ರ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.