ಕೊನೆಗೂ ಸಂಗಂ ತಡೆ ತೆರವು
Team Udayavani, Jun 13, 2019, 6:10 AM IST
ಕುಂದಾಪುರ: ಕೊನೆಗೂ ಇಲ್ಲಿನ ಸಂಗಂನಲ್ಲಿ ಹೆದ್ದಾರಿ ಗುತ್ತಿಗೆದಾರರು ಅಳವಡಿ ಸಿದ್ದ ತಡೆ ತೆರವುಗೊಳಿಸಿದ್ದಾರೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಎಸಿ ಡಾ| ಮಧುಕೇಶ್ವರ್, ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಅವರು ತಡೆ ತೆರವಿಗೆ ಸೂಚಿಸಿದ್ದರು.
ಇಲ್ಲಿ ತಡೆ ಇದ್ದರೆ ಅಪಘಾತ ಕಡಿಮೆಯಾಗುತ್ತದೆ ಎಂದು ಇಲಾಖೆಗಳು ಅಭಿಪ್ರಾಯಪಟ್ಟಿದವು. ಆದರೆ ಬೈಂದೂರು ಕಡೆಯಿಂದ ಬರುವಾಗ ಕುಂದಾಪುರ ಪೇಟೆಗೆ ಬರುವ ದಾರಿ ಸಂಗಂನಿಂದ ಚಿಕ್ಕನಸಾಲು ಮೂಲಕ ರಸ್ತೆಯೇ ಪ್ರಮುಖ. ಇದಕ್ಕೇ ತಡೆ ಯೊಡ್ಡಿದರೆ ನಗರದೊಳಗೆ ಬರುವವರ ಸಂಖ್ಯೆ ವಿರಳವಾಗುತ್ತದೆ. ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ ಸಹಿತ ಇತರ ವಾಹನಗಳ ಓಡಾಟಕ್ಕೆ ಕಷ್ಟವಾಗುತ್ತದೆ. ಆನಗಳ್ಳಿ ರಸ್ತೆಯಲ್ಲಿರುವ ಶ¾ಶಾನಕ್ಕೆ ಹೋಗಲು, ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಡೆ ತೆರವಿಗೆ ಸೂಚಿಸಿದ್ದಾರೆ. ಬುಧವಾರ ಸಿಮೆಂಟ್‌ನ ತಲಾ 5 ಟನ್ ತೂಕದ 16 ತಡೆಗೋಡೆಗಳನ್ನು ಕ್ರೇನ್ ಮೂಲಕ ತೆರವುಗೊಳಿಸಲಾಯಿತು.
ಸಂಗಂನಲ್ಲಿ ಹೆದ್ದಾರಿ ಕಾಮಗಾರಿ ಆಗಿರಲಿಲ್ಲ. ಇದರಿಂದಾಗಿ ಸದಾ ಟ್ರಾಫಿಕ್ ತೊಂದರೆಯಾಗುತ್ತಿತ್ತು. ಈ ಕುರಿತು ಉದಯವಾಣಿ ಸತತ ವರದಿ ಮಾಡಿತ್ತು. ವರದಿಯ ಪರಿಣಾಮ ಎಸಿ, ಡಿವೈಎಸ್‌ಪಿ, ಗುತ್ತಿಗೆದಾರ ಸಂಸ್ಥೆಯವರು ಭೇಟಿ ನೀಡಿ ಪರಿಶೀಲಿಸಿದ್ದರು. ತತ್‌ಕ್ಷಣ ಕಾಮಗಾರಿ ಮುಗಿಸಲು ಆಡಳಿತ ಸೂಚಿಸಿತ್ತು. ಇದೀಗ ಅಲ್ಲಿ ಕಾಮಗಾರಿ ಆಗಿದೆ. ಇನ್ನೊಂದಷ್ಟು ಕೆಲಸ ಬಾಕಿಯಿದ್ದರೂ ಅಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಆದ್ದರಿಂದ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಚರಂಡಿ ಕಾಮಗಾರಿ ಕೂಡಾ ನಡೆದಿದ್ದು ಬಸ್ ಬೇ ಪ್ರತ್ಯೇಕ ರಚಿಸಲಾಗಿದೆ. ಇಲ್ಲಿ ಬಸ್‌ಗಳು ನಿಂತಲ್ಲಿ ಹೆದ್ದಾರಿಯಲ್ಲಿನ ಟ್ರಾಫಿಕ್ ಗೊಂದಲಗಳಿಗೆ ಒಂದಷ್ಟು ತೆರೆ ಬೀಳಲಿದೆ. ಇಲ್ಲಿ ಬಸ್ ತಂಗುದಾಣ ಕೂಡಾ ರಚನೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.