ಕೊನೆಗೂ ಕಾರ್ಕಳದ ಈಜುಕೊಳ ಸಾರ್ವಜನಿಕರಿಗೆ ಮುಕ್ತ
ಸ್ವಾತಂತ್ರ್ಯೋತ್ಸವದ ಉಡುಗೊರೆಯಾಗಿ 15 ದಿವಸ ಉಚಿತ ಪ್ರವೇಶ
Team Udayavani, Aug 17, 2019, 5:04 AM IST
ವಿಶೇಷ ವರದಿ –ಕಾರ್ಕಳ : ಕೋಟಿ ಚೆನ್ನಯ ಥೀಮ್ ಪಾರ್ಕ್ ಬಳಿಯಿರುವ ತಾಲೂಕು ಕ್ರೀಡಾಂಗಣದಲ್ಲಿ 1.5 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾದ ಈಜುಕೊಳವೀಗ ಸಾರ್ವಜನಿಕ ರಿಗೆ ಮುಕ್ತವಾಗಿದೆ. ಈಜುಕೊಳ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಸಾರ್ವಜನಿಕರ ಉಪ ಯೋಗಕ್ಕೆ ಲಭ್ಯವಾಗದ ಕಾರಣ ಸಾರ್ವಜನಿಕ ವಲಯದಿಂದ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಇದೀಗ ಆ. 15ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಕಾರ್ಕಳದ ಜನತೆಗೆ ಹೊಸ ಕೊಡುಗೆಯಾಗಿ ಮುಕ್ತವಾಗಿದೆ.
ಅಡೆತಡೆಗಳಿತ್ತು
ವಿವಿಧ ಇಲಾಖೆಗಳ ಅನುದಾನ ದಿಂದ ಸುಸಜ್ಜಿತ ಈಜುಕೊಳ ನಿರ್ಮಾಣ ವಾಯಿತಾದರೂ ಬಳಿಕ ಹಲವು ಸಮಸ್ಯೆ ಎದುರಿಸುವಂತಾಯಿತು. ಮೊದಲಾಗಿ ಕೊಳಕ್ಕೆ ನೀರು ಪೂರೈಸುವುದೇ ದೊಡ್ಡ ಸಮಸ್ಯೆಯಾಗಿ ಕಂಡು ಬಂದಿತು. ಬೋರ್‌ವೆಲ್ ಕೊರೆಯಲು ನೀರಿನ ಮೂಲವಿಲ್ಲ ಎಂದು ತಜ್ಞರು ತಿಳಿಸಿದರು. ಆ ಬಳಿಕ ಸಮೀಪದ ರಾಮಸಮುದ್ರ ಜಲಮೂಲ ದಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲಾಯಿತಾದರೂ ಬೇಸಗೆಯಲ್ಲಿ ಕುಡಿಯುವ ನೀರಿನ ಬವಣೆ ತಲೆದೋರಿದ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ವಿಸ್ತೀರ್ಣ
ಪುರಸಭಾ ವ್ಯಾಪ್ತಿಯಲ್ಲಿನ 10.38 ಎಕ್ರೆ ವಿಸ್ತೀರ್ಣದ ತಾಲೂಕು ಕ್ರೀಡಾಂಗಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಈಜುಕೊಳವು 54 ಅಡಿ ಅಗಲ, 82 ಅಡಿ ಉದ್ದ
ದೊಂದಿಗೆ 3-5 ಅಡಿ ಆಳ ಹೊಂದಿದೆ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅನುದಾನದಲ್ಲಿ ನಿರ್ಮಾಣ ಗೊಂಡ ಈ ಈಜುಕೊಳದ ಕಾಮಗಾರಿ ಹೊಣೆ ನಿರ್ಮಿತಿ ಕೇಂದ್ರ ವಹಿಸಿತ್ತು.
ಈಜುಕೊಳಕ್ಕೆ 5 ಲಕ್ಷ ಅನುದಾನ
ಸಾರ್ವಜನಿಕ ಈಜುಕೊಳ ಅಭಿವೃದ್ಧಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 45 ಲಕ್ಷ ರೂ., ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಒಟ್ಟು 91.65 ಲಕ್ಷ ರೂ., ವಿಧಾನ ಪರಿಷತ್ (ಭಾನುಪ್ರಕಾಶ್) ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು.
ಓಸೋನ್ ಐಸ್ ಸ್ಥಾಪನೆ
ಕಾರ್ಕಳ ಜನತೆಯ ಬಹುದಿನಗಳ ಬೇಡಿಕೆಯೊಂದು ಈಡೇರುತ್ತಿದೆ. ಈಜುಕೊಳದ ನೀರಿನ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ 6.5 ಲಕ್ಷ ರೂ. ವೆಚ್ಚದಲ್ಲಿ ಓಝೋನ್ ಐಸ್ ಸ್ಥಾಪನೆಯಾಗಲಿದೆ.
-ಪ್ರವೀಣ್ ಕೆ. ಕೋಟ್ಯಾನ್ , ಕ್ರೀಡಾಂಗಣ ಸಮಿತಿ ಸದಸ್ಯರು
15 ದಿನ ಉಚಿತ
ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಕಾರ್ಕಳದ ಜನತೆಗೆ ಉಡುಗೊರೆಯಾಗಿ 15 ದಿನಗಳ ಕಾಲ ಉಚಿತ ಪ್ರವೇಶವಿದೆ. ಈಜು ಆಸಕ್ತರು ನೈಲಾನ್ ಬಟ್ಟೆ ಧರಿಸುವುದು ಕಡ್ಡಾಯವೆಂದು ಕ್ರೀಡಾಂಗಣ ಸಮಿತಿಯವರು ತಿಳಿಸಿದ್ದಾರೆ.
ಸಮಯ
ಬೆಳಗ್ಗೆ 6ರಿಂದ 11 ಹಾಗೂ ಸಂಜೆ 3ರಿಂದ 7.
ಬೇಬಿ ಪೂಲ್ ಸೇರ್ಪಡೆ
ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹೊಸದಾಗಿ ಬೇಬಿ ಪೂಲ್ ನಿರ್ಮಿಸಲಾಗಿದೆ. ಮಕ್ಕಳಿಗೆ ಅನುಕೂಲಕರವಾಗಿ 2 ಅಡಿ ಆಳದಲ್ಲಿ 12 ಅಡಿ ಅಗಲ ಹಾಗೂ 20 ಅಡಿ ಉದ್ದದಲ್ಲಿ ರಚನೆ ಮಾಡಲಾಗಿದೆ.
ದರ
ಸ್ವಿಮ್ಮಿಂಗ್ ಫೂಲ್ ಪ್ರವೇಶ ಶುಲ್ಕ 25 ರೂ. ನಿಗದಿಗೊಳಿಸಲಾಗಿದೆ. ತಿಂಗಳ ಸದಸ್ಯತ್ವಕ್ಕೆ 600 ರೂ., ವರ್ಷದ ಸದಸ್ಯತ್ವಕ್ಕೆ 6, 000 ರೂ. ಎಂದು ಫಲಕ ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.