ಶಿರ್ವ: ಪದವು ಮೈದಾನದ ಬಳಿ ಬೆಂಕಿ; ಮರ ಗಿಡಗಳು ಬೆಂಕಿಗಾಹುತಿ
Team Udayavani, Mar 5, 2023, 9:14 PM IST
ಶಿರ್ವ: ಇಲ್ಲಿನ ಗ್ರಾ.ಪಂ.ವ್ಯಾಪ್ತಿಯ ಪದವು ಎಂಎಸ್ ಆರ್ ಎಸ್ ಕಾಲೇಜಿನ ಸಮೀಪದ ಮೈದಾನದ ಬಳಿ ರವಿವಾರ ಸಂಜೆಯ ವೇಳೆ ಬೆಂಕಿ ಬಿದ್ದು ಮರ ಗಿಡಗಳು ಸುಟ್ಟು ಹೋಗಿದ್ದು ಹಾನಿ ಸಂಭವಿಸಿದೆ.
ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಯುವಕರ ತಂಡ ಸಣ್ಣ ಪ್ರಮಾಣದಲ್ಲಿದ್ದ ಬೆಂಕಿಯನ್ನು ನಂದಿಸಲು ಕಡೆಗಣಿಸಿ ತೆರಳಿದ್ದು ಬೆಂಕಿ ವ್ಯಾಪಕವಾಗಿ ಹರಡಿ ಹಾನಿಯಾಗಿದೆ.
ಶಿರ್ವ ಪೊಲೀಸ್ ಏಎಸ್ ಐಗಳಾದ ವಿವೇಕಾನಂದ, ಶ್ರೀಧರ್ ಕೆ.ಜೆ,ಹೆಡ್ ಕಾನ್ ಸ್ಟೇಬಲ್ ಗಳಾದ ಜ್ಯೋತಿ, ಭಾಸ್ಕರ್, ಧರ್ಮ , ಮುದರಂಗಡಿ ಗ್ರಾಮ ಪಂ.ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜಾ ಮತ್ತು ಸ್ಥಳೀಯರಾದ ಶೈಲೇಶ್ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಯುಪಿಸಿಎಲ್ ಅದಾನಿಯ ಅಗ್ನಿಶಾಮಕ ದಳದ ತಂಡ ಮತ್ತು ಉಡುಪಿಯ ಅಗ್ನಿಶಾಮಕ ದಳದ ಅಧಿಕಾರಿ ಹೆಚ್ ಎಂ. ವಸಂತ್ ನೇತ್ರತ್ವದ ತಂಡದಿಂದ ಬೆಂಕಿಯನ್ನು ತಹಬಂದಿಗೆ ತರಲಾಗಿದೆ.
ಇದನ್ನೂ ಓದಿ: ಬಿಜೆಪಿಯಿಂದ ಇಡಿ-ಸಿಬಿಐ ಇಲಾಖೆ ದುರ್ಬಳಕೆ: ಕೊರಟಗೆರೆಯಲ್ಲಿ ಖರ್ಗೆ ಆರೋಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.