ಗುಡಿಸಲಿಗೆ ಬೆಂಕಿ, ಸಿಲಿಂಡರ್ ಸ್ಫೋಟ
Team Udayavani, May 23, 2017, 3:33 PM IST
ಉಡುಪಿ: ನಿಟ್ಟೂರು ಅಡ್ಕದಕಟ್ಟೆ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ಅನ್ಯ ಜಿಲ್ಲೆಯ ಕೂಲಿ ಕಾರ್ಮಿಕರು ವಾಸ್ತವ್ಯ ಮಾಡಿಕೊಂಡಿದ್ದ ಸುಮಾರು 15 ಗುಡಿಸಲಿಗೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಮನೆಯಲ್ಲಿ ಯಾರೂ ಇಲ್ಲದಿದ್ದ ಪರಿಣಾಮ ಪ್ರಾಣಹಾನಿ ಸಂಭವಿಸಿಲ್ಲ. ಪಕ್ಕದ ಪಾಳುಬಾವಿ ಯೊಂದರಲ್ಲಿ ಕಸ ಹಾಕಲಾಗುತ್ತಿತ್ತು. ಸೋಮವಾರ ಅದಕ್ಕೆ ಬೆಂಕಿ ಕೊಡಲಾಗಿತ್ತು. ಆ ಬೆಂಕಿಯು ಗುಡಿಸಲಿಗೆ ತಾಗಿ ಬೆಂಕಿ ವ್ಯಾಪಿಸಿಕೊಂಡಿತ್ತು. ಬೆಂಕಿ ಹಬ್ಬಿದ ಪರಿಣಾಮ ಗುಡಿಸಲಿನ ಒಳಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸ್ಥಳೀಯರ ಆತಂಕಕ್ಕೂ ಕಾರಣವಾಗಿತ್ತು. ಸ್ಥಳೀಯ ನಿವಾಸಿ ಬಾಲಕೃಷ್ಣ ಶೆಟ್ಟಿಯವರು ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ತೆರಳಿ ಸಾರ್ವಜನಿಕರೊಂದಿಗೆ ಸೇರಿಕೊಂಡು ಬೆಂಕಿಯನ್ನು ನಂದಿಸಿದ್ದಾರೆ.
ಗುಡಿಸಲು ವಾಸಿಗಳಾದ ಮೇನಪ್ಪ, ವೆಂಕಪ್ಪ, ಉಳ್ಳಪ್ಪ, ಪರಶುರಾಮ, ಚಿನ್ನಸ್ವಾಮಿ, ಸಿದ್ಧಪ್ಪ, ಕಾಲಿಯಪ್ಪ, ಅಪ್ಪಾದೊರೈ, ಶೇಖರ, ಲಕ್ಷ್ಮೀ ಮತ್ತಿತರರ ಮನೆಗಳು ಬೆಂಕಿಗಾಹುತಿಯಾಗಿವೆ. ಮನೆಯ ಪಾತ್ರೆ ಇನ್ನಿತರ ಸೊತ್ತುಗಳು, ಮರಮಟ್ಟು ಗಳು, ನಗದು, ಬಟ್ಟೆಬರೆಗಳ ಸಹಿತ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.