ಗ್ಯಾಸ್ ಸಿಲಿಂಡರ್ ಲಾರಿಯಲ್ಲಿ ಅಗ್ನಿ ಅವಘಡ: ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Team Udayavani, May 12, 2022, 9:02 PM IST
ಪಡುಬಿದ್ರಿ: ಮಂಗಳೂರಿನಿಂದ ಉಡುಪಿಯತ್ತ ಎಚ್‌ಪಿ ಗ್ಯಾಸ್ ತುಂಬಿದ ಸಿಲಿಂಡರ್‌ಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯ ಚಾಲಕ ಚಹಾ ಸವಿಯಲು ಹೆಜಮಾಡಿಯ ನವಯುಗ ಟೋಲ್‌ಪ್ಲಾಝಾ ಸಮೀಪ ಇಳಿದಿದ್ದ ವೇಳೆ ಲಾರಿಯಲ್ಲಿ ಅನಿರೀಕ್ಷಿತ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಗುರುವಾರ ರಾತ್ರಿಯ ವೇಳೆ ಹೆಜಮಾಡಿಗೆ ಬಂದಿದ್ದ ಸಂದರ್ಭದಲ್ಲಿ ಲಾರಿ ಚಾಲಕನು ಪೂರ್ಣ ನಿಲುಗಡೆಗೊಳಿಸಿ ಕೆಳಗಿಳಿದು ಚಹಾ ಸವಿಯಲು ತೆರಳುತ್ತಿದ್ದರು. ಆ ವೇಳೆಗೆ ಚಾಲಕನ ಸೀಟಿನ ಹಿಂಬದಿಯ ತಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಲ್ಲೇ ಹತ್ತಿರದ ಗೂಡಂಗಡಿಗಳ ಮಂದಿ, ಟೋಲ್ ಪ್ಲಾಝಾ ಸಿಬಂದಿ ಹಾಗೂ ಸ್ಥಳೀಯರು ಬಕೆಟ್‌ಗಳಲ್ಲೇ ನೀರನ್ನು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಆ ಹೊತ್ತಿಗಾಗಲೇ ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಹಾಗೂ ಸಿಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಉಡುಪಿಯ ಅಗ್ನಿ ಶಾಮಕ ದಳದ ತುಕುಡಿಯೊಂದೂ ಕೂಡಾ ಸ್ಥಳದಲ್ಲಿ ಬೀಡು ಬಿಟ್ಟಿದೆ.
ಸ್ಥಳಕ್ಕೆ ಈಗಾಗಲೇ ಎಲೆಕ್ಟ್ರಿಷಿಯನ್‌ಗಳೂ ಆಗಮಿಸಿದ್ದು ವಿದ್ಯುತ್ ಶಾರ್ಟ್ ಸರ್ಕ್ನೂಟನ್ನು ಪತ್ತೆ ಹಚ್ಚಲಾಗಿದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದ್ದು ನಾಳೆ ಎಚ್‌ಪಿ ಕಂಪೆನಿಯ ಎಲೆಕ್ಟ್ರಿಷಿಯನ್‌ಗಳು ಆಗಮಿಸಿ ವಯರಿಂಗ್ ಕೆಲಸವು ಪೂರ್ಣಗೊಂಡ ಬಳಿಕಷ್ಟೇ ಲಾರಿಯನ್ನು ಉಡುಪಿಯತ್ತ ಕೊಂಡೊಯ್ಯಬೇಕಿದೆ ಎಂದು ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.