ಬಂಟಕಲ್ಲು ಕಾಲೇಜು ಬಳಿ ಕಾಡಿಗೆ ಬೆಂಕಿ
Team Udayavani, Mar 2, 2019, 12:35 AM IST
ಶಿರ್ವ: ಬಂಟಕಲ್ಲು ಎಂಜಿನಿಯರಿಂಗ್ ಕಾಲೇಜು ಬಳಿ ಪೆಟ್ರೊಲ್ ಪಂಪ್‌ನ ಎದುರುಗಡೆ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ತಗಲಿದ್ದು ಉಡುಪಿ ಅಗ್ನಿಶಾಮಕ ದಳದವರ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ಹತೋಟಿಗೆ ಬಂದಿದೆ.
ಉರಿ ಬಿಸಿಲಿನ ತಾಪಕ್ಕೆ ವಿದ್ಯುತ್ ಟ್ರಾನ್ಸ್‌ಫೋರ್ಮರ್‌ನಲ್ಲಿ ಶಾರ್ಟ್ ಸರ್ಕ್ನೂಟ್‌ನಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಹಲವು ಎಕರೆ ಪ್ರದೇಶಕ್ಕೆ ಬೆಂಕಿ ತಗಲಿತ್ತು. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೇಮಾರು ಸಾಂದೀಪನೀ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಅಗ್ನಿಶಾಮಕದಳದವರಿಗೆ ಕರೆ ಮಾಡಿದ್ದು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು. ಪರಿಸರದಲ್ಲಿಯೇ ಪೆಟ್ರೋಲ್ ಪಂಪ್ ಇದ್ದು ಸಕಾಲಿಕ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ಭಾರೀ ಅನಾಹುತ ಸ್ವಲ್ಪದರಲ್ಲಿಯೇ ತಪ್ಪಿದೆ.
ಉಡುಪಿ ಅಗ್ನಿಶಾಮಕ ದಳದ ಅಧಿಕಾರಿ ವಿ.ಎಲ್.ನಾಯಕ್ ಮತ್ತು ಸಿಬಂದಿ, ಶಿರ್ವ ಪೊಲೀಸ್ ಠಾಣೆಯ ಎಎಸ್‌ಐ ಭೋಜ ಮತ್ತು ಸಿಬಂದಿ, ಬಂಟಕಲ್ಲು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ|ಡಾ| ತಿರುಮಲೇಶ್ವರ ಭಟ್, ಕಾಲೇಜಿನ ವಿದ್ಯಾರ್ಥಿಗಳು ಶಿರ್ವ ಗ್ರಾ.ಪಂ.ಸದಸ್ಯ ಕೆ.ಆರ್. ಪಾಟ್ಕರ್,ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು.
ಬೇಕಿದೆ ಅಗ್ನಿ ಶಾಮಕ ಠಾಣೆ
ಶಿರ್ವವನ್ನು ಕೇಂದ್ರೀಕರಿಸಿಕೊಂಡು ಸುತ್ತಮುತ್ತಲಿನ ಮಜೂರು, ಕುತ್ಯಾರು,ಕಳತ್ತೂರು, ಮುದರಂಗಡಿ, ಬೆಳ್ಮಣ್, ಸೂಡ,ಪಳ್ಳಿ, ಬೆಳ್ಳೆ ಪ್ರದೇಶಗಳಿಗೆ ಅನುಕೂಲವಾಗುವಂತೆ ಅಗ್ನಿಶಾಮಕ ದಳದ ಠಾಣೆಯ ಅಗತ್ಯವಿದೆ. ಶಿರ್ವ ಆಸುಪಾಸಿನ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ 25 ಕಿ.ಮೀ. ದೂರದ ಉಡುಪಿಯಿಂದ ಅಗ್ನಿಶಾಮಕದಳ ದವರು ಬರುವಾಗ ಎಲ್ಲವೂ ಸುಟ್ಟು ಹೋಗಿರುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು,ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದ್ದು ತುರ್ತು ಅಗ್ನಿಶಾಮಕ ದಳದ ಅವಶ್ಯಕತೆಯಿದೆ ಎಂದು ಶಿರ್ವ ಗ್ರಾ.ಪಂ.ಸದಸ್ಯ ಕೆ.ಆರ್.ಪಾಟ್ಕರ್ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.