ಶಿರ್ವ ಭೂತಬೆಟ್ಟು ಬಳಿ ಮೈದಾನಕ್ಕೆ ಬೆಂಕಿ
Team Udayavani, Mar 28, 2019, 6:30 AM IST
ಶಿರ್ವ: ಶಿರ್ವ ಭೂತಬೆಟ್ಟು ಲಚ್ಚಿಲ್‌ನ ಮೈದಾನದ ಬಳಿ ಬುಧವಾರ ಮಧ್ಯಾಹ್ನ ಬೆಂಕಿ ತಗಲಿದ್ದು ಉಡುಪಿ ಅಗ್ನಿಶಾಮಕ ದಳದವರ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ಹತೋಟಿಗೆ ಬಂದಿದೆ.
ಉರಿಬಿಸಿಲಿನ ತಾಪಕ್ಕೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಹಲವು ಎಕರೆ ಪ್ರದೇಶಕ್ಕೆ ಬೆಂಕಿ ತಗಲಿ ಪರಿಸರದ ಗಿಡ ಮರಗಳು ಬೆಂಕಿಗಾಹುತಿಯಾಗಿವೆ.
ಉಡುಪಿ ಅಗ್ನಿಶಾಮಕ ದಳದ ಅಧಿಕಾರಿ ಎಂ.ಗೋಪಾಲ್ ನೇತೃತ್ವದಲ್ಲಿ ಸಿಬಂದಿಗಳಾದ ವಿ.ಎಲ್.ನಾಯಕ್, ಕುಮಾರ ಗೌಡ, ಉಮೇಶ್,ಸುಜೇಶ್, ವಿನಾಯಕ, ಶಂಕರ್ ಮತ್ತು ಶಿರ್ವ ಪೊಲೀಸ್ ಠಾಣೆಯ ಸಿಬಂದಿ, ಶಿರ್ವ ಗ್ರಾ.ಪಂ.ಸದಸ್ಯ ಪ್ರವೀಣ್ ಸಾಲಿಯಾನ್,ಗ್ರಾಮಸ್ಥರಾದ ಆನಂದ ಶೆಟ್ಟಿ ಭೂತಬೆಟ್ಟು, ನೆಲ್ಸನ್ ಡಿ‡ಸೋಜಾ, ಪ್ರೇಮನಾಥ ಶೆಟ್ಟಿ,ಭಾಸ್ಕರ ಶೆಟ್ಟಿ, ನಾರಾಯಣ ಶೆಟ್ಟಿ,ದಯಾನಂದ, ಮಾಜಿ ಗ್ರಾ.ಪಂ. ಸದಸ್ಯೆ ಮೇರಿ ಡಿ’ಸೋಜಾ ಮೊದಲಾದವರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು.
ಬೇಕಿದೆ ಶಿರ್ವಕ್ಕೆ ಅಗ್ನಿ ಶಾಮಕ ಠಾಣೆ
ಶಿರ್ವವನ್ನು ಕೇಂದ್ರೀಕರಿಸಿಕೊಂಡು ಸುತ್ತಮುತ್ತಲಿನ ಮಜೂರು,
ಕುತ್ಯಾರು,ಕಳತ್ತೂರು,ಮುದರಂಗಡಿ, ಬೆಳ್ಮಣ್, ಸೂಡ, ಪಳ್ಳಿ, ಬೆಳ್ಳೆ ಪ್ರದೇಶಗಳಿಗೆ ಅನುಕೂಲವಾಗುವಂತೆ ಅಗ್ನಿಶಾಮಕ ದಳದ ಠಾಣೆಯ ಅಗತ್ಯವಿದೆ. ಶಿರ್ವ ಆಸುಪಾಸಿನ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ 25 ಕಿ.ಮೀ. ದೂರದ ಉಡುಪಿಯಿಂದ ಅಗ್ನಿಶಾಮಕದಳದವರು ಬರುವಾಗ ಎಲ್ಲವೂ ಸುಟ್ಟು ಹೋಗಿರುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದ್ದು ತುರ್ತು ಅಗ್ನಿಶಾಮಕ ದಳದ ಅವಶ್ಯಕತೆಯಿದೆ ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.