ಅಂಚೆ ಕ.ಸಾ. ಸಮ್ಮೇಳನಕ್ಕೆ ಸ್ಟಾಂಪ್, ಲಕೋಟೆಗಳ ತೋರಣ
Team Udayavani, Jul 2, 2018, 6:00 AM IST
ಉಡುಪಿ: ಸೈನಿಕರ ಅಂಚೆ ಚೀಟಿ, ಅಳಿವಿನಂಚಿನಲ್ಲಿರುವ ಹಕ್ಕಿಗಳು, ಪ್ರಾಣಿಗಳ ಅಂಚಿ ಚೀಟಿ, ಸಾಧಕರ ಅಂಚೆ ಚೀಟಿ… ಹೀಗೆ ಹತ್ತು ಹಲವು ವಿಧದ ಅಪರೂಪದ ಅಂಚೆಚೀಟಿಗಳು. ಮಾತ್ರವಲ್ಲ ಈ ಅಂಚೆ ಚೀಟಿಗಳ ಪಕ್ಕದಲ್ಲೇ ಕವನಗಳ ಸಾಲು. ಆ ಸಾಲುಗಳಲ್ಲಿ ಆಯಾ ಅಂಚೆಚೀಟಿಯ ಮಹತ್ವ ಪ್ರಸ್ತುತಿ.
ಅಂಬಲಪಾಡಿಯಲ್ಲಿ ರವಿವಾರ ಜರಗಿದ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇ ಳನದಲ್ಲಿ ಅಂಚೆಚೀಟಿಗಳು, ಲಕೋಟೆಗಳು ಮತ್ತು ಅದರೊಂದಿಗೆ ಲಗತ್ತಿಸಿದ ಕನ್ನಡದ ಕವನಗಳ ಸಾಲು ಗಮನ ಸೆಳೆದವು.
ಯೋಗ, ಭೇಟಿ ಬಚಾವೊ, ದೀಪಾವಳಿ, ವಾರ್ಲಿ ಕಲೆ, ಕ್ರಿಸ್‌ಮಸ್, ಸೈನಿಕರು, ಆಭರಣಗಳು, ವಿನಾಶದ ಅಂಚಿನಲ್ಲಿರುವ ಗುಬ್ಬಚ್ಚಿ, ರೋಟರಿ ಕ್ಲಬ್, ಸಂಗೀತ, ಭಾರತದ ಪ್ರವಾಸೋದ್ಯಮ, ಪೋಸ್ಟಲ್ ಹೆರಿಟೇಜ್ ಬಿಲ್ಡಿಂಗ್, ಮುಂಡಾಸು, ಮಹಿಳಾ ಸಬಲೀಕರಣ, ರಾಮಾಯಣ, ಪೇಜಾವರ ಶ್ರೀ ವಿಶ್ವೇಶ ತೀರ್ಥರು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರು ಹೀಗೆ ವಿವಿಧ ವಿಚಾರ, ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಟಾಂಪ್‌ಗ್ಳ ಜತೆಗೆ ಅಂಚೆ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಅವರು 30ಕ್ಕೂ ಅಧಿಕ ಕವನಗಳನ್ನು ರಚಿಸಿ ಲಗತ್ತಿಸಿದ್ದರು. “ಕ್ರಿಸ್‌ಮಸ್’ ಸ್ಟಾಂಪ್ ಬಳಿ ಇದ್ದ ಕವನದ ಶೀರ್ಷಿಕೆ “ದೇವದೂತ’. ಗುಬ್ಬಚ್ಚಿ ಪಕ್ಕದಲ್ಲಿ “ಎಲ್ಲಿರುವ ಗುಬ್ಬಚ್ಚಿ?’ ಶೀರ್ಷಿಕೆಯ ಕವನ, ಎರಡು ದೇಶಗಳು ಒಂದಾಗಿ ಹೊರತಂದಿದ್ದ ಸ್ಟಾಂಪ್‌ನ ಪಕ್ಕದಲ್ಲಿ “ಒಂಟಿ ಅಲ್ಲ, ಜಂಟಿ’ ಶೀರ್ಷಿಕೆಯ ಕವನ ಲಗತ್ತಿಸಿದ್ದರು.
ಅಂಚೆ ಇಲಾಖೆ ಇತ್ತೀಚೆಗೆ ಹೊರತಂದಿರುವ “ಕಾಫಿ’ ಅಂಚೆ ಚೀಟಿ ಕಾಫಿಯ ಪರಿಮಳವನ್ನೇ ಹೊಂದಿದೆ. ಇದರ ಮೌಲ್ಯ 100 ರೂಪಾಯಿ. ಈ ಅಂಚೆ ಚೀಟಿಯ ಪಕ್ಕ “ಕಾಫಿಯ ಘಮ’ ಎಂಬ ಕವನವಿತ್ತು. ಕನ್ನಡ ಅಕ್ಷರಮಾಲೆಯ ಮಿನಿಯೇಚರ್ ಶೀಟ್(ಅಂಚೆ ಚಿಕಣಿ ಹಾಳೆ) ಕೂಡ ಪ್ರದರ್ಶನದಲ್ಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.