ಮಾರುಕಟ್ಟೆಗೆ ಇನ್ನೂ ಬಂದಿಲ್ಲ ಪ್ರಥಮ ಪಿಯುಸಿ ಪಠ್ಯಪುಸ್ತಕ
Team Udayavani, Jun 17, 2019, 10:27 AM IST
ಕಾರ್ಕಳ: ಪ್ರಥಮ ಪಿಯುಸಿ ತರಗತಿ ಮೇ 20ರಂದು ಪ್ರಾರಂಭಗೊಂಡಿದ್ದರೂ ವಿದ್ಯಾರ್ಥಿ ಗಳಿಗೆ ಇನ್ನೂ ಪಠ್ಯಪುಸ್ತಕ ದೊರೆತಿಲ್ಲ. ಇದರಿಂದ ಜೆರಾಕ್ಸ್ ಮಾಡಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಕಾಲೇಜು ಪ್ರಾರಂಭವಾಗಿ 27 ದಿನ ಗಳು ಕಳೆದರೂ ಪಠ್ಯಪುಸ್ತಕ ಲಭಿಸ ದಿರುವುದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಕಷ್ಟಕ್ಕೀಡು ಮಾಡಿದೆ.
ಪಿಯುಸಿ ಪಠ್ಯಪುಸ್ತಕವನ್ನು ಸರಕಾರದ ವತಿಯಿಂದಲೇ ಮುದ್ರಿಸಿ, ಪುಸ್ತಕ ಮಳಿಗೆಗಳಿಗೆ ವಿತರಿಸ ಲಾಗುತ್ತದೆ. 2014ರ ಬಳಿಕ ಪಠ್ಯಕ್ರಮ ಬದಲಾಗದೆ ಪುಸ್ತಕ ಮುದ್ರಣ ವಾಗುತ್ತಿತ್ತು. ಈ ಬಾರಿ ಮಾತ್ರ ಪಠ್ಯಪುಸ್ತಕ ಪೂರೈಕೆಯಾಗದೆ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತಿಲ್ಲ.
ಸ್ಪಷ್ಟತೆಯಿಲ್ಲ
ಪುಸ್ತಕ ಮಳಿಗೆಗಳಲ್ಲಿ ವಿಚಾರಿಸಿದರೆ, ಭಾಷಾ ವಿಷಯ ಹೊರತುಪಡಿಸಿ ಉಳಿದ ಪುಸ್ತಕ ಬಂದಿಲ್ಲ ಎನ್ನುತ್ತಾರೆ. ಯಾವಾಗ ಬರಲಿದೆ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಅವರಲ್ಲಿ ಇಲ್ಲ.
ವಿಜ್ಞಾನ ವಿದ್ಯಾರ್ಥಿಗಳಿಗೆ ಕಷ್ಟ
ಪಠ್ಯಪುಸ್ತಕ ಇಲ್ಲದೆ ಹೆಚ್ಚು ತೊಂದರೆಗೆ ಒಳಗಾಗುವವರು ವಿಜ್ಞಾನ ವಿದ್ಯಾರ್ಥಿಗಳು. ಅವರಿಗೆ ಹಳೆ ವಿದ್ಯಾರ್ಥಿಗಳ ಪಠ್ಯ ಪುಸ್ತಕ ದೊರೆಯುವ ಸಾಧ್ಯತೆ ಕಡಿಮೆ. ಸಿಇಟಿ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅವುಗಳ ಅಗತ್ಯ ಇರುತ್ತದೆ. ಹೀಗಾಗಿ ಪಥಮ ಪಿಯುಸಿ ಸೈನ್ಸ್‌ಗೆ ದಾಖಲಾದ ವಿದ್ಯಾರ್ಥಿಗಳು ಕಷ್ಟಪಡುವಂತಾಗಿದೆ.
ವಸತಿಯುತ ಕಾಲೇಜುಗಳಿಗೆ ತೊಂದರೆ
ವಸತಿಯುತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿ ಯಿಂದಲೇ ಪಠ್ಯಪುಸ್ತಕ ನೀಡುವುದು ರೂಢಿ. ಈ ಕಾಲೇಜುಗಳಲ್ಲಿ ಹೊರ ಜಿಲ್ಲೆಯ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿರುವುದರಿಂದ ಅಂತಹ ಕಾಲೇಜುಗಳಿಗೆ ಪುಸ್ತಕ ಹೊಂದಿಸುವುದು ತ್ರಾಸದಾಯಕ. ಉದಾಹರಣೆಗೆ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ 350 ವಿದ್ಯಾರ್ಥಿಗಳಿದ್ದಲ್ಲಿ ಅಷ್ಟೊಂದು ಪಠ್ಯಪುಸ್ತಕ ಹೊಂದಿಸುವುದು ಕಷ್ಟಸಾಧ್ಯ.
ರಾಜ್ಯದ ನಾಲ್ಕು ಕಡೆಗಳಲ್ಲಿ ಪಿಯುಸಿ ಪಠ್ಯಪುಸ್ತಕ ಮುದ್ರಣವಾಗುತ್ತಿದೆ. ಪುಸ್ತಕ ಮಳಿಗೆಗಳಿಗೆ ಪುಸ್ತಕ ಪೂರೈಕೆಯೂ ಆಗುತ್ತಿದೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದರೂ ವಿದ್ಯಾರ್ಥಿಗಳು, ಪೋಷಕರು ಆತಂಕ ಪಡಬೇಕಾಗಿಲ್ಲ.
ಸುಬ್ರಹ್ಮಣ್ಯ ಜೋಷಿ, ಜಿಲ್ಲಾ ಉಪನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ, ಉಡುಪಿ
ಕಾಲೇಜಿಗೆ ಪೂರೈಕೆಯಾಗಲಿ
ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಸರಕಾರದಿಂದ ಪಠ್ಯಪುಸ್ತಕ ಪೂರೈಕೆಯಾದಂತೆ ಕಾಲೇಜುಗಳಿಗೂ ದಾಖಲಾತಿಗೆ ಅನುಗುಣವಾಗಿ ಸರಕಾರವೇ ಪಠ್ಯ ಪುಸ್ತಕಒದಗಿಸಲಿ ಎನ್ನುತ್ತಾರೆ ವಿದ್ಯಾರ್ಥಿನಿ ರಕ್ಷಾ ಸಂಪ್ಯ.
ರಾಮಚಂದ್ರ ಬರೆಪ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.