ಇಲಾಖೆಯಿಂದಲೇ ಕಡಂದಲೆ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ
ಪ್ರಥಮ ಬಾರಿ ಫೈಬರ್ ಹಲಗೆ ಬಳಕೆ ; ಅಕ್ಕಪಕ್ಕದ ಗದ್ದೆಗಳು ಜಲಾವೃತ
Team Udayavani, Dec 20, 2019, 6:18 AM IST
ವಿಶೇಷ ವರದಿ –ಬೆಳ್ಮಣ್: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮೂಡಬಿದಿರೆ ಮಾಜಿ ಶಾಸಕ ಅಭಯಚಂದ್ರ ಜೈನ್ ಅವರ ಮುತುವರ್ಜಿಯಲ್ಲಿ ಕಡಂದಲೆ ಕಲ್ಲೋಳಿಯಲ್ಲಿ ನವೀಕರಣಗೊಂಡು ಹಿಂದಿನ ಕಿಂಡಿ ಆಣೆಕಟ್ಟುವಿನ ಪಕ್ಕ ದಲ್ಲೇ ನಿರ್ಮಾಣಗೊಂಡ ನೂತನ ಕಿಂಡಿ ಆಣೆಕಟ್ಟುವಿಗೆ ಈ ಬಾರಿ ಸಣ್ಣ ನೀರಾವರಿ ಇಲಾಖೆಯಿಂದಲೇ ಹಲಗೆ ಅಳವಡಿಸಲಾಗಿ ಶಾಂಭವಿ ನದಿ ತುಂಬಿ ತುಳುಕಿದೆ.
ಉತ್ತಮ ಗುಣಮಟ್ಟದ ಫೈಬರ್ ಹಲಗೆ ಮೂಲಕ ಅಣೆಕಟ್ಟುವಿನ ನಿರ್ವಹಣೆ ನಡೆದಿದ್ದು ಗುರುವಾರ ನೀರು ಉಕ್ಕಿ ಹರಿದಿದ್ದು ಪಕ್ಕದ ಗದ್ದೆಗಳು ಜಲಾವೃತವಾಗಿ ಹಳೆ ಕಿಂಡಿ ಅಣೆಕಟ್ಟುವಿನ ಕಿರು ಸೇತುವೆಯೂ ಮುಳುಗಿದ ಪರಿಣಾಮ ಅಣೆಕಟ್ಟುವಿನ ಒಂದು ಕಿಂಡಿ ತೆರೆಯಲಾಯಿತು. ಇತ್ತೀಚೆಗಿನವರೆಗೂ ಮಳೆ ನಿರಂತರವಾಗಿದ್ದರಿಂದ ನೀರಿನ ಪ್ರಮಾಣ ಅಧಿಕವಾಗಿ ಶಾಂಭವಿ ನದಿಯಲ್ಲಿ ಇನ್ನೂ ನೀರಿನ ಹರಿವು ಇದೆ ಎಂದು ಈ ಭಾಗದ ಕೃಷಿಕರು ತಿಳಿಸಿದ್ದಾರೆ. ಕಾರ್ಕಳ ತಾ.ಪಂ. ಮಾಜಿ ಸದಸ್ಯೆ ಶಕುಂತಳಾ ಶೆಟ್ಟಿಯವರ ಗದ್ದೆ ಜಲಾವೃತಗೊಂಡಿದೆ.
ಮುಂಡ್ಕೂರು ಪಂ. ಮುತುವರ್ಜಿ
ಈ ಅಣೆಕಟ್ಟು ನಿರ್ವಹಣೆಯ ಬಗ್ಗೆ ಸಣ್ಣ ನೀರಾವರಿ ಇಲಾಖೆ ಜವಾಬ್ದಾರಿ ವಹಿಸಿದ್ದರೂ ಮುಂಡ್ಕೂರು ಗ್ರಾಮ ಪಂಚಾಯತ್ ಸಂಪೂರ್ಣ ಜವಾಬ್ದಾರಿ ವಹಿಸಿದೆ ಎಂದು ಪಂಚಾಯತ್ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ತಿಳಿಸಿದ್ದಾರೆ.
ನೂರಾರು ಎಕರೆ ಕೃಷಿ ಭೂಮಿ ಹಸಿರು
ಕಲ್ಲೋಳಿ ಅಣೆಕಟ್ಟುವಿನ ಸಮರ್ಪಕ ನಿರ್ವಹಣೆಯಿಂದ ಶಾಂಭವಿ ನದಿ ತುಂಬಿ ತುಳುಕಿದ ಪರಿಣಾಮ ಕಡಂದಲೆ, ಬೋಳ ಭಾಗದ ಕೃಷಿಕರಿಗೆ ಬಹಳಷ್ಟು ಅನುಕೂಲವಾಗಲಿದ್ದು ಈ ಭಾಗದಲ್ಲಿ ಸುಮಾರು 500 ಎಕರೆಗಳಷ್ಟು ಕೃಷಿ ಭೂಮಿ ಹಸಿರಾಗಲಿದೆ.
ನಿರ್ವಹಣೆ ಮಾಡಲಾಗುವುದು
ಈ ಕಿಂಡಿ ಅಣೆಕಟ್ಟುವಿನ ನಿರ್ವಹಣೆಯ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್ ಕಾಳಜಿ ವಹಿಸಲಿದೆ.
-ಶುಭಾ ಪಿ. ಶೆಟ್ಟಿ. ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ
ಜನರಿಗೆ ಪ್ರಯೋಜನವಾಗಲಿ
ಜನರಿಗೆ ಉಪಕಾರವಾಗುವುದಾದರೆ ನನ್ನ ಕೃಷಿ ಭೂಮಿ ಮುಳುಗಿದರೂ ತೊಂದರೆ ಇಲ್ಲ.
-ಶಕುಂತಳಾ ಶೆಟ್ಟಿ ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಸದಸ್ಯೆ
ನೀಗಿದ ನೀರಿನ ಬವಣೆ
ಈ ಅಣೆಕಟ್ಟು ನಿರ್ವಹಣೆಯಿಂದ ಈ ಭಾಗದ ಕೃಷಿಕರ ನೀರಿನ ಬವಣೆ ನೀಗಿದೆ.
-ಶರತ್ ಶೆಟ್ಟಿ ಸಚ್ಚೇರಿಪೇಟೆ,ಉದ್ಯಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.