ಎನ್‌ಐಒಎಸ್ ಶಿಕ್ಷಣದ ಮೂಲಕ ಮೈಸ್ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ
Team Udayavani, Jul 12, 2017, 12:25 AM IST
ಉಡುಪಿ: ಉಡುಪಿಯ ಮೈಸ್ ಸಂಸ್ಥೆಯಲ್ಲಿ ಕಳೆದ 3 ವರ್ಷಗಳಿಂದ ಎನ್‌ಐಒಎಸ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿ ಜಾಹ್ನವಿ ಉಪಾಧ್ಯ ಇಂಗ್ಲಿಷ್, ಸಮಾಜಶಾಸ್ತ್ರ, ಪೈಂಟಿಂಗ್, ಹೋಮ್‌ಸೈನ್ಸ್, ಡೇಟಾ ಎಂಟ್ರಿ ಮುಂತಾದ ಐದು ಪಠ್ಯ ವಿಷಯಗಳನ್ನು ಆಯ್ಕೆ ಮಾಡಿ ಎನ್‌ಐಒಎಸ್ ಪರೀûಾ ಕೇಂದ್ರ ಮಂಗಳೂರಿನ ಸೈಂಟ್ ಆ್ಯನ್ಸ್ ಹೈಸ್ಕೂಲ್‌ನಲ್ಲಿ ಪರೀಕ್ಷೆ ಬರೆದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿ¨ªಾರೆ.
ಸಂಸ್ಥೆಯ ಇನ್ನೋರ್ವ ಮೈಸ್ ವಿದ್ಯಾರ್ಥಿ ಅದಿತ್ ಮಧುಕರ್ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ¨ªಾರೆ. ಭಾರತ ಸರಕಾರದ ಮಾನ್ಯತೆ ಪಡೆದ ಎನ್‌ಐಒಎಸ್ (ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ಶಿಕ್ಷಣ ಸಂಸ್ಥೆ 1991ರಲ್ಲಿ ಆರಂಭಗೊಂಡಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಇದರ ಸಹ ಸಂಸ್ಥೆಗಳಿವೆ. ಇದರ ಮೂಲಕ ದೇಶದ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ (ಸೆಕೆಂಡರಿ), 12ನೇ ತರಗತಿ (ಸೀನಿಯರ್ ಸೆಕೆಂಡರಿ) ಪರೀಕ್ಷೆಯನ್ನು ಎನ್‌ಐಒಎಸ್ ಮೂಲಕ ಬರೆದು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಿದೆ.
ಕಾರಣಾಂತರಗಳಿಂದ ಶಾಲೆಯಿಂದ ದೂರವಿರುವ ಮಕ್ಕಳಿಗೆ ಮತ್ತು ವಯಸ್ಕರಿಗೂ ತಮ್ಮ ಶಿಕ್ಷಣವನ್ನು ಮುಂದುವರಿಸಲು ಇದೊಂದು ಸುವರ್ಣಾವಕಾಶ. ವಿದ್ಯಾರ್ಥಿಗಳಲ್ಲಿ ಸಣ್ಣಪುಟ್ಟ ದೈಹಿಕ, ಮಾನಸಿಕ, ಆರೋಗ್ಯ ಸಮಸ್ಯೆಗಳಿದ್ದರೆ, ಶಾಲೆಗೆ ಹೋಗಿ ಕಲಿಯಲು ಸಾಧ್ಯವಿಲ್ಲ. ಅಂತೆಯೇ ಗಣಿತ, ವಿಜ್ಞಾನ ಪಠ್ಯ ವಿಷಯಗಳು ಹಲವು ವಿದ್ಯಾರ್ಥಿ ಗಳಿಗೆ ಕಬ್ಬಿಣದ ಕಡಲೆಯಾಗಿದ್ದು ಇದರಿಂದ ತುಂಬಾ ಮಾನಸಿಕ ವೇದನೆ ಉಂಟಾಗುತ್ತದೆ, ಹೀಗಿದ್ದಲ್ಲಿ ಅವರ ಇಚ್ಛೆಯ ಪಠ್ಯ ವಿಷಯವನ್ನು ಇಲ್ಲಿ ಆಯ್ಕೆ ಮಾಡಬಹುದು.
ಎನ್‌ಐಒಎಸ್‌ನಲ್ಲಿ ಆನ್‌ಲೈನ್ ಮೂಲಕ ಪ್ರವೇಶ, ಸಿಬಿಎಸ್‌ಇ ಮಾದರಿ ಪಠ್ಯಪುಸ್ತಕ, ಅತಿ ಕಡಿಮೆ ವೆಚ್ಚದಲ್ಲಿ ಪ್ರವೇಶ ಹಾಗೂ ಪರೀûಾ ಶುಲ್ಕ, ಗಣಿತ, ವಿಜ್ಞಾನ ಅಲ್ಲದೆಯೂ ಇತರ ಪಠ್ಯ ವಿಷಯಗಳಾದ ಅರ್ಥಶಾಸ್ತ್ರ, ಮನಃಶಾಸ್ತ್ರ,
ಬಿಸಿನೆಸ್ ಸ್ಟಡೀಸ್, ಭಾರತದ ಸಂಸ್ಕೃತಿ ಮತ್ತು ನಾಗರಿಕತೆ, ಅಕೌಂಟೆನ್ಸಿ, ಸಮಾಜಶಾಸ್ತ್ರ, ಪೈಂಟಿಂಗ್, ಹೋಮ್‌ಸೈನ್ಸ್, ಡೇಟಾ ಎಂಟ್ರಿ ಇವುಗಳಲ್ಲಿ ಕನಿಷ್ಠ 4 ವಿಷಯ ಮತ್ತು ಭಾಷಾ ವಿಷಯದಲ್ಲಿ ಕನಿಷ್ಠ 1 ವಿಷಯ ಆಯ್ಕೆ ಮಾಡಿ ಒಟ್ಟಿಗೆ 5 ಪಠ್ಯ ವಿಷಯಗಳಲ್ಲಿ ಮೆಟ್ರಿಕ್ ಶಿಕ್ಷಣವನ್ನು ಸುಲಭದಲ್ಲಿ ಪೂರ್ತಿಗೊಳಿಸಬಹುದು. ಇದೇ ರೀತಿಯಲ್ಲಿ 12ನೇ ತರಗತಿಯಲ್ಲಿ ಸಹ ಕನಿಷ್ಠ 5 ವಿಷಯ ಆಯ್ಕೆ ಮಾಡಬಹುದು. ಇಲ್ಲಿಯೂ ಕೂಡ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಬಹುದು. ಭಾಷಾ ಮಾಧ್ಯಮದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ ಮತ್ತಿತರ ಭಾಷೆಗಳಲ್ಲೂ ಬರೆಯುವ ಅವಕಾಶವಿದೆ. ಈ ಎಲ್ಲ ಅನುಕೂಲತೆಗಳು ಇಲ್ಲಿ ಲಭ್ಯ. ಎನ್‌ಐಒಎಸ್ ಸರ್ಟಿಫಿಕೆಟ್‌ನಿಂದ ದೇಶ-ವಿದೇಶದ ಎಲ್ಲ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯಬಹುದು.
ಮೆಟ್ರಿಕ್ ಅನಂತರ ಮನೆಯಲ್ಲಿ ಕುಳಿತು ಎನ್‌ಐಒಎಸ್‌ನಲ್ಲಿ ಪ್ರವೇಶ ಪಡೆದು 2 ವರ್ಷದಲ್ಲಿ ಪರೀಕ್ಷೆ ಬರೆಯಬಹುದು. ಹಾಗೇಯೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಐಐಟಿ-ಜೆಇಇ-ಮೈನ್, ಜೆಇಇ-ಅಡ್ವಾನ್ಸ್x, ನೀಟ್, ಸಿಇಟಿಯಂತಹ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಶ್ರೇಷ್ಠ ರ್‍ಯಾಂಕ್ ಪಡೆಯಲು ಉತ್ತಮ ಅವಕಾಶ. ಇದರ ಮೂಲಕ ಕಲಿತ ವಿದ್ಯಾರ್ಥಿಗಳಿಗೂ ಮುಂದೆ ತಾಂತ್ರಿಕ, ವೈದ್ಯಕೀಯ ಮತ್ತಿತರ ಪದವಿ ಶಿಕ್ಷಣ ಕಾಲೇಜುಗಳಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯ. ಎನ್‌ಐಒಎಸ್ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ.
ವಿದ್ಯೆ ಎಲ್ಲರ ಹಕ್ಕು, ಎಲ್ಲ ಮಕ್ಕಳಿಗೆ ಅವರ ಇಚ್ಛಾನುಸಾರವಾಗಿ ಕಲಿಯಲು ಅವಕಾಶ ಕಲ್ಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಮಕ್ಕಳು ಮಾನಸಿಕವಾಗಿ ನೊಂದು ಶಾಲೆ ಬಿಟ್ಟರೆ ಅವರ ವಿದ್ಯಾಭ್ಯಾಸ ಕುಂಠಿತವಾಗಬಾರದು. ಈ ಉದ್ದೇಶದಿಂದ ಉಡುಪಿ ಪರಿಸರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಂಸ್ಥೆ ಈ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಉಡುಪಿಯ ಮೈಸ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲೆ ಸುಪ್ರೀತಾ ಅಮೀನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.