10 ಲಕ್ಷ ರೂ. ಮೀನು ಎಸೆದ ಗೋವಾ ಅಧಿಕಾರಿಗಳು
Team Udayavani, Dec 13, 2018, 9:42 AM IST
ಕುಂದಾಪುರ: ಗೋವಾ ಹಾಗೂ ಕರ್ನಾಟಕ ಮೀನುಗಾರರ ನಡುವಿನ ಗೊಂದಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ರವಿವಾರ ಗೋವಾ ಗಡಿಯಲ್ಲಿ ಅನುಮತಿ ಪಡೆದೇ ಕಾರವಾರದಿಂದ ತೆರಳಿದ ಮೀನಿನ ವಾಹನ ಅಡ್ಡಗಟ್ಟಿ, ಸುಮಾರು 10 ಲಕ್ಷ ರೂ. ಮೌಲ್ಯದ ಒಂದೂವರೆ ಟನ್ ಮೀನುಗಳನ್ನು ಪಣಜಿ ಪಾಲಿಕೆಯ ಕಸದ ತೊಟ್ಟಿಗೆ ಎಸೆದು ಗೋವಾ ಅಧಿಕಾರಿಗಳು ಉದ್ಧಟತನ ಮೆರೆದ ಬಗ್ಗೆ ವರದಿಯಾಗಿದೆ.
ಕರಾವಳಿ ಹಾಗೂ ಉತ್ತರ ಕನ್ನಡ ಸಹಿತ ರಾಜ್ಯದ ಮೀನುಗಳನ್ನು ಗೋವಾ ರಾಜ್ಯಕ್ಕೆ ಸಾಗಿಸುವ ಸಂಬಂಧ ಮತ್ತೆ ಗೋವಾ ಸರಕಾರ ತಕರಾರು ತೆಗೆದಿದ್ದು, ಇದರಿಂದ ಮತ್ತೆ ಗೋವಾಕ್ಕೆ ರಾಜ್ಯದ ಮೀನು ಸಾಗಾಟಕ್ಕೆ ತೊಡಕು ಉಂಟಾಗಿದೆ.
ಕಾರವಾರದಿಂದ ರಾಮಣ್ಣ ಅವರಿಗೆ ಸೇರಿದ ಮೀನುಗಳನ್ನು ಎಫ್‌ಡಿಎ ಪರವಾನಿಗೆ ಪಡೆದು, ಇನ್ಸುಲೇಟರ್ ವಾಹನದಲ್ಲಿ ಗೋವಾದ ಆಹಾರ ಇಲಾಖೆಯ ಅನುಮತಿ ಪಡೆದು ಪಣಜಿಯಲ್ಲಿರುವ ಅಟ್ಲಾಸ್ ಕಂಪೆನಿಗೆ ಕೊಂಡೊಯ್ಯುವ ವೇಳೆ ಗಡಿಯಲ್ಲಿ ತಡೆ ಹಿಡಿಯಲಾಯಿತು. ಆಹಾರ ಇಲಾಖೆ ಅಧಿಕಾರಿಗಳು ಪಣಜಿಯ ಅಟ್ಲಾಸ್ ಕಚೇರಿಗೆ ಕೊಂಡೊಯ್ದು ಎರಡು ದಿನ ಇಟ್ಟು ಫಾರ್ಮಾಲಿನ್ ಇಲ್ಲವೆಂದು ದೃಢಪಟ್ಟರೂ ಗಾಡಿಯನ್ನು ಬಿಡದೇ ಪಣಜಿಯ ನಗರಸಭೆಯ ಕಸದ ತೊಟ್ಟಿಗೆ 10 ಲಕ್ಷ ಮೌಲ್ಯದ ಮೀನನ್ನು ಎಸೆದಿದ್ದಾರೆ.
ಮಲತಾಯಿ ಧೋರಣೆ
ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಮೀನುಗಳಿಗೆ ತೊಂದರೆ ಮಾಡದ ಗೋವಾ, ಕರ್ನಾಟಕದ ಮೀನಿನ ವಾಹನ ಬಂದರೆ ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ತಡೆ ಹಿಡಿಯುತ್ತದೆ. ಉಳಿದ ರಾಜ್ಯಗಳ ಮೀನುಗಳನ್ನು ಬಿಡುವ ಮೂಲಕ ಮಲತಾಯಿ ಧೋರಣೆ ತೋರುತ್ತಿದೆ. ಆದರೆ ನಮ್ಮ ಸರಕಾರ ಮಾತ್ರ ಇದು ಯಾವುದರ ಬಗ್ಗೆಯೂ ಗಂಭೀರವಾಗಿ ಪರಿಗಣಿಸದೇ ನಿರಾಳವಾಗಿದೆ ಎಂದು ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರು ಆರೋಪಿಸಿದ್ದಾರೆ.
ಮೀನಿನ ಸಾಗಾಟವೇ ಇಲ್ಲ
ಇಲ್ಲಿಂದ ಹೋಗುವ ಮೀನುಗಳನ್ನು ಗಂಟೆಗಟ್ಟಲೆ ಗಡಿಯಲ್ಲಿ ನಿಲ್ಲಿಸಿ ತಪಾಸಣೆ ಮಾಡುವುದಲ್ಲದೆ, ಎಲ್ಲ ದಾಖಲೆ, ಅನುಮತಿ ಪಡೆದ ಬಳಿಕವೂ ವಶಕ್ಕೆ ಪಡೆದ ಘಟನೆ ನಂತರ ಈಗ ಗೋವಾ ಕಡೆಗೆ ಮಲ್ಪೆ, ಮಂಗಳೂರು, ಕಾರವಾರದಿಂದ ಮೀನುಗಾರರು ಮೀನು ಸಾಗಾಟಕ್ಕೆ ಹಿಂಜರಿಯುತ್ತಿದ್ದಾರೆ.
ಪರಿ ಪರಿಯಾಗಿ ಬೇಡಿದರೂ ಬಿಟ್ಟಿಲ್ಲ
ಫಾರ್ಮಾಲಿನ್ ಇಲ್ಲದಿದ್ದರೂ ನಮಗೆ ಆರೋಗ್ಯ ಸಚಿವರಿಂದ ಆದೇಶ ಬಂದಿದೆ. ಈ ಮೀನುಗಳನ್ನು ಕಸದ ತೊಟ್ಟಿಗೆ ಹಾಕುತ್ತೇವೆ ಎಂದು ಅಧಿಕಾರಿಗಳು ವಾಹನದ ಚಾಲಕ ಹಾಗೂ ಮೀನು ಕೊಂಡು ಹೋದ ರಾಮಣ್ಣ ಅವರಲ್ಲಿ ಹೇಳಿದ್ದರು. ಈ ವೇಳೆ ಮೀನು ನಮಗೆ ಕೊಡಿ ನಾವು ನಮ್ಮ ರಾಜ್ಯಕ್ಕೆ ಕೊಂಡು ಹೋಗುತ್ತೇವೆ. ಬಿಸಾಡುವುದು ಬೇಡ ಎಂದು ಪರಿ ಪರಿ ವಿನಿಂತಿಸಿದರೂ ಬಿಡದೇ ಚಾಲಕನ ಕೈಯಲ್ಲಿಯೇ ಒಂದೂವರೆ ಟನ್ ಮೀನುಗಳನ್ನು ಅಲ್ಲಿನ ಅಧಿಕಾರಿಗಳು ಮಣ್ಣು ಮಾಡಿಸಿದ್ದಾರೆ ಎಂದು ಉತ್ತರ ಕನ್ನಡ ಮೀನುಗಾರರ ವ್ಯಾಪಾರಸ್ಥರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರವೀಣ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.