ಪಡುಬಿದ್ರಿ: ಮತ್ತೆ ಮೀನು ಸುಗ್ಗಿ !
Team Udayavani, Sep 28, 2018, 9:54 AM IST
ಪಡುಬಿದ್ರಿ: ಕೆಲವು ದಿನಗಳ ಹಿಂದೆ ಬೊಳಿಂಜೀರ್ (ಸಿಲ್ವರ್ ಫಿಶ್) ಮೀನುಗಳ ಸುಗ್ಗಿಯಾಗಿದ್ದ ಪಡುಬಿದ್ರಿ- ಎರ್ಮಾಳು ಕಡಲತೀರದಲ್ಲಿ ಇಂದು ಮತ್ತೆ ಬಗೆಬಗೆಯ ಮೀನುಗಳು ಸಮೃದ್ಧವಾಗಿ ಕೈರಂಪಣಿ ಮೀನುಗಾರರಿಗೆ ದೊರಕಿವೆ.
ಎರ್ಮಾಳು ತೆಂಕ ಪಂಢರಿನಾಥ ಮತ್ತು ವೀರಾಂಜನೇಯ ಕೈರಂಪಣಿ ಫಂಡುಗಳು ಸಮುದ್ರದಲ್ಲಿ ಬೀಸಿದ ಬಲೆಗಳಲ್ಲಿ ಮಾಂಜಿ (ಪಾಂಫ್ರೆಟ್), ಕೊಡ್ಡಾಯಿ, ಕಲ್ಲೂರು, ಬತ್ತ ಅಥವಾ ಕಡುವಾಯಿ, ಎರೆಬಾಯಿ, ಮಣಂಗು ಸಹಿತ ಹಲವು ಬಗೆಯ ಮೀನುಗಳು ವಿಪುಲವಾಗಿ ದೊರಕಿದ್ದು, ದೂರದ ಊರುಗಳಿಂದ ಮತ್ಸಪ್ರಿಯರು ಎರ್ಮಾಳಿನತ್ತ ಧಾವಿಸುತ್ತಿದ್ದಾರೆ.
ಬೆಳಗ್ಗೆ ಸಮುದ್ರಕ್ಕಿಳಿದ ಕೈರಂಪಣಿಗೆ ಪ್ರಥಮ ಯತ್ನದಲ್ಲಿ ಯಾವುದೇ ಮೀನುಗಳು ದೊರಕಿರಲಿಲ್ಲ. 8 ಗಂಟೆ ಸುಮಾರಿಗೆ ತೀರ ಸಮುದ್ರದಲ್ಲಿ ಮೀನಿನ ತೆಪ್ಪಗಳನ್ನು ಕಂಡ ಅವರು ಎರಡನೇ ಬಾರಿ ಬಲೆಗಳನ್ನು ಬೀಸಿದ್ದು, ಊಹೆಗೂ ನಿಲುಕದಷ್ಟು ಸಿಲುಕಿಕೊಂಡವು. ರಾತ್ರಿ ವರೆಗೂ ಬಲೆಗಳಿಂದ ತೆಗೆದರೂ ಮುಗಿಯದಷ್ಟು ಹೇರಳವಾಗಿತ್ತು.
ಸೆ. 5ರಂದು ಹೆಜಮಾಡಿಯಿಂದ ಎರ್ಮಾಳು ತನಕ ಬೊಳಿಂಜೀರ್ ಕೈರಂಪಣಿಗಳಿಗೆ ಹೇರಳವಾಗಿ ದೊರ ಕಿತ್ತು. ಸೆ. 24ರ ವರೆಗೂ ಮೂಲ್ಕಿಯ ಶಾಂಭವಿ ಹೊಳೆಯಲ್ಲಿಯೂ ಇದೇ ರೀತಿ ಮುಂದು ವರಿದಿತ್ತು. ಇದೀಗ ಹಲವು ಬಗೆಯ ಮೀನುಗಳು ಲಭಿಸುತ್ತಿರುವುದರಿಂದ ಸಾಂಪ್ರದಾಯಿಕ ಮೀನುಗಾರರು ಭಾರೀ ಖುಷಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.