ಶಿಥಿಲಾವಸ್ಥೆಯಲ್ಲಿ ಮೀನು ಮಾರುಕಟ್ಟೆ , ರಸ್ತೆ ಬದಿಯಲ್ಲೆ ವ್ಯಾಪಾರ

ಕೊಳಲಗಿರಿ ಹಸಿ ಮೀನು ಮಾರಾಟಕ್ಕೆ ಸ್ಥಳದ ಕೊರತೆ

Team Udayavani, Jan 21, 2020, 5:03 AM IST

2001UDBB1A

ಉಡುಪಿ: ಮೀನು ವ್ಯಾಪಾರ ಇವರ ಬದುಕಿಗೆ ಆಧಾರ. ಅದನ್ನು ನಡೆಸಲು ಈಗ ಸಂಚಕಾರ ಬಂದಿದೆ. ಸ್ಥಳದ ಕೊರತೆಯಿಂದ ಕೊಳಲಗಿರಿಯ ಮೂರು ಮಂದಿ ಹಸಿ ಮೀನು ಮಾರಾಟ ಬಡ ಮಹಿಳೆಯರು ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದು, ಅವರ ಬದುಕು ದುಸ್ಥಿತಿಗೆ ತಲುಪಿದೆ.

ಕೊಳಲಗಿರಿ ಪೇಟೆ ಬಳಿ ಹಸಿಮೀನು ಮಾರುಕಟ್ಟೆಯಿದೆ. ಮೀನು ಮಾರಾಟಕ್ಕೆ ಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಮೂರು ಮಂದಿ ಬಡ ಮಹಿಳೆಯರು ಕಟ್ಟೆಯಲ್ಲಿ ಕುಳಿತು ಮೀನು ಮಾರಾಟ ನಡೆಸುತ್ತಿದ್ದರು. ಗ್ರಾಹಕರು ಮಾರುಕಟ್ಟೆಗೆ ಬಂದು ಇವರ ಬಳಿಯಿಂದ ಮೀನು ಖರೀದಿಸುತ್ತಿದ್ದರು. ವ್ಯಾಪಾರ ಉತ್ತಮವಾಗಿತ್ತು.

ಶಿಥಿಲ ಮಾರುಕಟ್ಟೆ
ಕಳೆದ ಮಳೆಗಾಲ ಸುರಿದ ಭಾರಿ ಗಾಳಿಮಳೆಗೆ ಕುಸಿದಿದೆ. ಛಾವಣಿಯ ಹೆಂಚುಗಳು ಬಿದ್ದು ಪುಡಿಪುಡಿಯಾಗಿವೆ. ಕಟ್ಟಡದ ಗೋಡೆಗಳು ನೆಲಕ್ಕೆ ಉರುಳಿ ಬಿದ್ದಿದೆ.

ಪೀಠೊಪಕರಣಗಳು ಒಂದೊಂದೇ ನೆಲಕ್ಕೆ ಉರುಳು ಬೀಳುತ್ತಿವೆ. ಮಾರುಕಟ್ಟೆ ಒಳಗೆ ಕುಳಿತು ವ್ಯಾಪಾರ ನಡೆಸಲು ಅಸಾಧ್ಯ ಸ್ಥಿತಿಯಿದೆ. ವ್ಯಾಪಾರಕ್ಕೆ ಯೋಗ್ಯವಿಲ್ಲದ ಮತ್ತು ಅಭದ್ರತೆಯ ಕಟ್ಟೆಯಲ್ಲಿ ವ್ಯಾಪಾರ ನಡೆಸಲಾಗದೆ ಮೂರು ಮಂದಿ ಮಹಿಳೆಯರು ಕಟ್ಟಡದಿಂದ‌ ಹೊರ ಬಂದರು.

ಮಹಿಳೆಯರಿಗೆ ಈಗ ಮೀನು ಮಾರಾಟಕ್ಕೆ ಸೂಕ್ತ ಜಾಗವಿಲ್ಲ. ಪಕ್ಕದಲ್ಲಿ ರಸ್ತೆ ಬದಿ ಕುಳಿತು ವ್ಯಾಪಾರ ನಡೆಸುತ್ತಿದ್ದಾರೆ. ಬಿಸಿಲಿಗೆ ಮೈಯೊಡ್ಡಿ ವ್ಯಾಪಾರ ನಡೆಸುತ್ತಿದ್ದಾರೆ. ಹತ್ತಾರು ಸಮಸ್ಯೆಗಳು ಇವರನ್ನು ಕಾಡುತ್ತಿವೆೆ. ಶಿಥಿಲ ಮಾರುಕಟ್ಟೆ ಉಪ್ಪೂರು ಗ್ರಾ.ಪಂ ವ್ಯಾಪ್ತಿಯಲ್ಲಿದೆ. ಮೀನು ಮಾರಾಟಕ್ಕೆ ಸೂಕ್ತ ಜಾಗವಿಲ್ಲದೆ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿರುವು ದನ್ನು ಮನಗಂಡ ಗ್ರಾ.ಪಂ. 10 ವರ್ಷಗಳ ಹಿಂದೆ ಮಾರುಕಟ್ಟೆ ನಿರ್ಮಿಸಿತ್ತು, ಬಳಿಕ ನಿರ್ವಹಣೆ ಮಾಡಿಲ್ಲ. ದುರಸ್ತಿಯೂ ನಡೆಸಿಲ್ಲ. ಹೀಗಾಗಿ ಮಾರುಕಟ್ಟೆ ದುಸ್ತಿತಿಗೆ ತಲುಪಿತ್ತು.

ಜಾಗ ಗುರುತಿಸಲಾಗಿದೆ
ಶೌಚಾಲಯ ನಿರ್ಮಿಸಲೆಂದು ಪಂಚಾಯತು ಬಸ್‌ ತಂಗುದಾಣದ ಹಿಂಭಾಗ ಸ್ಥಳ ಗುರುತಿಸಿದೆ. ಆದರೆ ಶೌಚಾಲಯ ನಿರ್ಮಿಸುವಲ್ಲಿ ಹಿಂದೆ ಬಿದ್ದಿದೆ. ಪೇಟೆಯಲ್ಲಿ ಸಮಸ್ಯೆ ತಾಂಡವಾಡುತ್ತಿದೆ. ಮೀನುಗಾರರ ಅಭಿವೃದ್ಧಿಗಾಗಿ ಲಕ್ಷಗಟ್ಟಲೆ ಖರ್ಚು ಮಾಡುವ ಸರಕಾರ ಬಡ ಮೀನುಗಾರರನ್ನು ನಿರ್ಲಕ್ಷಿಸುತ್ತಿದೆ. ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಅಲಕ್ಷ್ಯ ವಹಿಸುತ್ತಿದೆ ಎನ್ನುವುದಕ್ಕೆ ನಮ್ಮ ಸ್ಥಿತಿಯೇ ನಿದರ್ಶನ ಎಂದು ಹಸಿ ಮೀನು ವ್ಯಾಪಾರ ನಿರತ ಬೇಬಿ ಪುತ್ರನ್‌ ಮತ್ತು ಗೋದನ್‌ ಮೈನಾ ಅಳಲು ತೋಡಿಕೊಳ್ಳುತ್ತಿದ್ದಾರೆ.

ವ್ಯಾಪಾರಕ್ಕೆ ತೊಂದರೆ
ಅನೇಕ ವರ್ಷಗಳಿಂದ ಮೀನು ವ್ಯಾಪಾರ ನಡೆಸುತ್ತಿದ್ದೇವೆ. ಮೊದಲು ಮೀನು ಮಾರುಕಟ್ಟೆ ಒಳಗೆ ಕುಳಿತುಕೊಳ್ಳುತ್ತಿದ್ದೆವು. ಕಟ್ಟಡ ಬಿದ್ದು ಅನೇಕ ಸಮಯಗಳಾಗಿವೆ. ಬಳಿಕ‌ ರಸ್ತೆ ಬಿದಿ ಕುಳಿತು ವ್ಯಾಪಾರ ಮಾಡುತ್ತಿದ್ದೇವೆ. ದುರಸ್ತಿಗಾಗಿ ಪಂಚಾಯತಿಗೆ ದೂರು ನೀಡಿದ್ದೇವೆ. ಇದುವರೆಗೆ ದುರಸ್ತಿ ಮಾಡಿಕೊಟ್ಟಿಲ್ಲ. ಮೀನು ಖರೀದಿಸಲು ಬರುವವರಿಗೆ ಮತ್ತು ವ್ಯಾಪಾರ ನಡೆಸುವ ನಮಗೆ ತೊಂದರೆಯಾಗಿದೆ ಎನ್ನುವುದು ಹಸಿ ಮೀನು ಮಾರಾಟ ಮಹಿಳೆ ಶಾರದಾ ಅವರ ಅಂಬೋಣ.

ಕ್ರಿಯ ಯೋಜನೆ
ಮಾರುಕಟ್ಟೆ ದುರಸ್ತಿ ಹಾಗೂ ಶೌಚಾಲಯ ನಿರ್ಮಾಣ ಎರಡಕ್ಕೂ ಕ್ರಿಯಾಯೋಜನೆ ಸಿದ್ದಪಡಿಸಿದ್ದೇವೆ. ಶೀಘ್ರದಲ್ಲಿ ದುರಸ್ತಿ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಎರಡು ಆರಂಭವಾಗುತ್ತದೆ. ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಉಪ್ಪೂರು ಗ್ರಾಪಂನ ಅಧ್ಯಕ್ಷೆ ಆರತಿ ಅವರು ಹೇಳಿದರು. ಇದುವೆರೆಗೆ ಪ್ರಯೋಜವಾಗಿಲ್ಲ
ಪೇಟೆಯಲ್ಲಿ ಮಾರುಕಟ್ಟೆ ಮತ್ತು ಶೌಚಾಲಯ ಎರಡು ಇಲ್ಲದೆ ಸಮಸ್ಯೆ ಗಳಾಗುತ್ತಿವೆ. ಈ ಕುರಿತು ಪಂಚಾಯತು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಲೇಬಂದಿದ್ದೇವೆ. ಇದುವರೆಗೆ ಪ್ರಯೋಜನವಾಗಿಲ್ಲ ಎಂದು ಕೊಳಲಗಿರಿ ವ್ಯಾಪಾರಸ್ಥರಾದ ಅರುಣ್‌ ಅವರ ಅಭಿಪ್ರಾಯ.

ಮೂಗಿಗೆ ಬಡಿತಿದೆ ವಾಸನೆ
ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯವೂ ಇಲ್ಲ. ಅಂಗಡಿ-ಮುಂಗಟ್ಟುಗಳ ಮಂದಿ, ಮಹಿಳೆಯರು, ಮಕ್ಕಳು ಹೀಗೆ ಎಲ್ಲರೂ ರಸ್ತೆ ಬದಿಯ ಪೊದೆಗಳಲ್ಲಿ ಶೌಚ ಮಾಡುತ್ತಿದ್ದಾರೆ. ಪರಿಸರ ದುರ್ನಾತ ಬೀರುತ್ತಿದೆ. ಇದರಿಂದ ಮಹಿಳೆಯರಿಗೆ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ತೆರಳುವವರ ಮೂಗಿಗೂ ವಾಸನೆ ಬಡಿಯುತ್ತಿದೆ.

ಟಾಪ್ ನ್ಯೂಸ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

14-padubidri

Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ

8

Udupi: ಕಲ್ಸಂಕ ಜಂಕ್ಷನ್‌; ಹಗಲು-ರಾತ್ರಿ ಟ್ರಾಫಿಕ್‌ ಕಿರಿಕಿರಿ

7(2

Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.