ಅವಧಿ ಮುಗಿಯುತ್ತಾ ಬಂದರೂ ನಡೆಯದ ನಾಡದೋಣಿ ಮೀನುಗಾರಿಕೆ


Team Udayavani, Jul 15, 2018, 6:00 AM IST

1407mle3.gif

ಮಲ್ಪೆ: ಕಡಲಲ್ಲಿ ಎದ್ದ ತೂಫಾನ್‌ ಇನ್ನೂ ತಗ್ಗಿಲ್ಲ. ಬಿರುಸಾದ ಸಮುದ್ರ ಸಹಜಸ್ಥಿತಿಗೆ ಬರದೇ ಇದ್ದರಿಂದ ನಾಡದೋಣಿ ಮೀನುಗಾರಿಕೆಗೆ ಈ ಬಾರಿ ಕಾಲ ಕೂಡಿ ಬರಲೇ ಇಲ್ಲ. 

ಹಿಂದೆಲ್ಲ ಇದೇ ಅವಧಿಯಲ್ಲಿ ಮೀನುಗಾರರು ಬಲೆ ತುಂಬ ಮೀನು ಹಿಡಿದು ತರುತ್ತಿದ್ದರು. ಈ ಬಾರಿ ದೋಣಿ ಇಳಿಸಲೇ ಆಗಿಲ್ಲ.  ಇದೀಗ ಮಳೆಗಾಲದ ನಾಡದೋಣಿ ಮೀನುಗಾರಿಕೆ ಅವಧಿಯೂ ಮುಗಿಯುತ್ತಾ ಬಂದಿದ್ದು, ಸಾಲದ ಹೊರೆಯಲ್ಲಿರುವ ನಾವು ದಿಕ್ಕೇ ತೋಚದಂತಾಗಿದ್ದೇವೆ ಎನ್ನುತ್ತಾರೆ ಸಾಂಪ್ರದಾಯಿಕ ನಾಡ ಟ್ರಾಲ್‌ದೋಣಿ ಮೀನುಗಾರ ಪುರಂದರ ಕೋಟ್ಯಾನ್‌.

ಮುಗಿಯದ ಮಳೆಯಬ್ಬರ
ಈ ಬಾರಿ ಕರಾವಳಿ ತೀರದುದ್ದಕ್ಕೂ ನಿರಂತರವಾಗಿ ಸುರಿಯುತ್ತಿರುವ ಮಳೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರನ್ನು ಕಂಗಾಲಾಗಿಸಿವೆ.  ನಾಡದೋಣಿ ಮೀನುಗಾರರಿಗೆ ಕಡಲಿಗಿಳಿಯಲು ಸಾಧ್ಯವಾಗುತ್ತಿಲ್ಲ. ಜೂನ್‌ 1ರಿಂದ ಜು.31ರವರೆಗೆ 60 ದಿನಗಳು ನಾಡದೋಣಿ ಮೀನುಗಾರಿಕೆಗೆ ಅವಕಾಶವಿದ್ದರೂ ಈಗಾಗಲೇ 45ದಿನಗಳು ಕೈತಪ್ಪಿ ಹೋಗಿವೆ. ಆ. 1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳುತ್ತಿರುವುದರಿಂದ ಇನ್ನು ಕೇವಲ ಬೆರಳೆಣಿಕೆ ದಿನಗಳು ಮಾತ್ರ ಉಳಿದಿದೆ. 

ಸಾಮಾನ್ಯವಾಗಿ ಪುನರ್ವಸು, ಪುಷ್ಯ ಮಳೆ ಆರಂಭಗೊಂಡಾಗ ನಾಡದೋಣಿ ಗಳಿಗೆ ಉತ್ತಮ ಮೀನುಗಾರಿಕೆ ಆಗುತ್ತಿತ್ತು. ಕಳೆದ ವರ್ಷದಲ್ಲಿ ಜುಲೈ ತಿಂಗಳ ಪ್ರಥಮ ವಾರದಲ್ಲೇ ಹೇರಳ ಪ್ರಮಾಣದಲ್ಲಿ ಸಿಗಡಿ ಮೀನುಗಳು ನಾಡದೋಣಿ ಬಲೆ ಬಿದ್ದಿದ್ದವು. ಈಗ ಕಡಲಿಗಿಳಿದರೆ  ಮೀನು ಸಿಗುವ ಲಕ್ಷಣ ಇದೆ. ಆದರೆ ಮಳೆಗಾಳಿಯಿಂದಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ಸಂಕ್ರಮಣದ ಬಳಿಕ ಮೀನುಗಾರಿಕೆಗೆ ಪೂರಕವಾಗಬಹುದು ಎನ್ನುತ್ತಾರೆ ಮೀನುಗಾರರಾದ ಕೃಷ್ಣ ಸುವರ್ಣ. 

ಹೆಚ್ಚಿನ ಕಾಲಾವಕಶಕ್ಕೆ ಆಗ್ರಹ 
ಮಲ್ಪೆ ಬಂದರು ವ್ಯಾಪ್ತಿಯಲ್ಲಿ 650ಕ್ಕೂ ಹೆಚ್ಚು ಸಾಂಪ್ರದಾಯಿಕ ನಾಡ ಟ್ರಾಲ್‌ದೋಣಿಗಳು ಮಳೆಗಾಲದ ಮೀನುಗಾರಿಕೆ ನಡೆಸುತ್ತಿವೆ.  ಬಹುತೇಕ ದೋಣಿಗಳು ಸಾಲ ಮಾಡಿ ಮೀನುಗಾರಿಕೆಗೆ ತೊಡಗಿದ್ದು ಸಾಲ ಮರುಪಾವತಿ ಹೇಗೆ ಎಂಬ ಚಿಂತೆಯಲ್ಲಿದೆ.  ಈ ಹಿನ್ನೆಲೆಯಲ್ಲಿ ಆಗಸ್ಟ್‌ ತಿಂಗಳಲ್ಲಿ 15 ದಿನ ಹೆಚ್ಚುವರಿಯಾಗಿ ಮೀನುಗಾರಿಕೆಗೆ ಅವಕಾಶ ನೀಡಬೇಕು. ಅಲ್ಲಿವರೆಗೆ ಯಾಂತ್ರೀಕೃತ ಮೀನುಗಾರಿಕೆ ಬೇಡ ಎನ್ನುವುದು ಮೀನುಗಾರರ ಸಂಘದ ಆಗ್ರಹವಾಗಿದೆ.  

ಸ್ಥಿತಿ ದುಸ್ತರ 
ಮೊದಲೇ ಮೀನಿಗೆ ಕೆಮಿಕಲ್‌ ಬಳಸಿದ್ದಾರೆ ಎಂಬ ಭಯದಿಂದ ಗ್ರಾಹಕರು ದೂರ ಸರಿದಿದ್ದಾರೆ. ಅದಕ್ಕೆ ಸರಿಯಾಗಿ ಮೀನುಗಾರಿಕೆಗೆ ಹೋಗಲು ಸಮುದ್ರ ಬಿಡುತ್ತಿಲ್ಲ. ಒಟ್ಟಿನಲ್ಲಿ ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ನಮ್ಮ ಸ್ಥಿತಿ ದುಸ್ತರವಾಗಿದೆ.
– ಆನಂದ ಸಾಲ್ಯಾನ್‌,ಮಲ್ಪೆ

ಮಲ್ಪೆಯಲ್ಲಿ ಮತ್ಸ್ಯಮೇಳ
ಒಂದೆಡೆ ನಾಡದೋಣಿ ಕಡಲಿಗೆ ಇಳಿಯದೆ ಮೀನಿಗೆ ಬರ. ಇನ್ನೊಂದೆಡೆ ಮೀನು ಕೊಳ್ಳುವ ಗ್ರಾಹಕರು ಕೆಮಿಕಲ್‌ ಭಯದಿಂದ ಹಿಂದೇಟು ಹಾಕುತ್ತಿರುವುದು ಮೀನು ಮಾರಾಟಗಾರರನ್ನು ಆತಂಕಕ್ಕೀಡು ಮಾಡಿವೆ. ಭಯ ಹೋಗಲಾಡಿಸಲು ಮುಂದಿನ ದಿನದಲ್ಲಿ ಮಲ್ಪೆಯಲ್ಲಿ ಮತ್ಸéಮೇಳ ಆಯೋಜಿಸಲಾಗುವುದು. 
– ಯಶಪಾಲ್‌ ಸುವರ್ಣ
ಅಧ್ಯಕ್ಷ , ಮೀನುಮಾರಾಟ ಫೆಡರೇಶನ್‌ 

ಟಾಪ್ ನ್ಯೂಸ್

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.