ಮೀನುಗಾರರ ಕಿಸಾನ್ ಕ್ರೆಡಿಟ್ ಕಾರ್ಡ್; ಉಡುಪಿ ಜಿಲ್ಲೆಗೆ ಅತೀ ಹೆಚ್ಚು ಮಂಜೂರು
Team Udayavani, Mar 2, 2020, 5:31 AM IST
ಉಡುಪಿ: ಕೇಂದ್ರ ಸರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಮೀನುಗಾರರು ಮತ್ತು ಮೀನು ಕೃಷಿಕರಿಗೆ ವಿಸ್ತರಿಸಿದ್ದು, ರಾಜ್ಯಕ್ಕೆ ಇದುವರೆಗೆ ಮಂಜೂರಾದ 1,140 ಕಾರ್ಡ್‌ಗಳಲ್ಲಿ 528 ಉಡುಪಿ ಜಿಲ್ಲೆಗೆ ಲಭಿಸಿವೆ.
ಈ ಯೋಜನೆಯನ್ನು 2020ರ ಜ. 2ರಂದು ತುಮಕೂರಿನಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಾಗಿತ್ತು. ಉಡುಪಿಯಲ್ಲಿ ಒಟ್ಟು 1,98,759 ಮೀನುಗಾರರಿದ್ದು, ಅವರಲ್ಲಿ 1,05,260 ಮಂದಿ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ 39,960 ಮೀನುಗಾರರಿದ್ದಾರೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ 698 ಮೀನುಗಾರರು ಕಿಸಾನ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿದ್ದಾರೆ. ಉಭಯಜಿಲ್ಲೆಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಕೋರಿ ಸುಮಾರು
3,500 ಅರ್ಜಿಗಳು ಬಂದಿವೆ. ಇಲಾಖೆ ಸೂಚಿಸಿದ ಸಮರ್ಪಕ ದಾಖಲೆಗಳಿದ್ದರೆ ಸಾಲ ಸೌಲಭ್ಯಕ್ಕೆ ಅರ್ಹರೆಂದು ಶಿಫಾರಸು ಮಾಡುತ್ತಾರೆ. ಮೀನುಗಾರರು ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ದಾಖಲೆ ನೀಡಬೇಕು. ಭೂಮಿ ಇದ್ದರೆ ಅದರ ಪಹಣಿ ಬೇಕು.
ಗರಿಷ್ಠ 3.80 ಲ.ರೂ. ಸಾಲ
ಮೀನುಗಾರಿಕೆ ಅಭಿವೃದ್ಧಿಗೆ ಈ ಯೋಜನೆ ವರದಾನವಾಗಿದ್ದು, ಈ ವೃತ್ತಿಯಲ್ಲಿ ಇರುವವರಿಗೆ ಗರಿಷ್ಠ 3.80 ಲ.ರೂ.ವರೆಗೆ ಸಾಲಸೌಲಭ್ಯ ದೊರೆಯಲಿದೆ. ಮೀನುಗಾರಿಕೆಗೆ ಸಂಬಂಧಪಟ್ಟ ಯಾವುದೇ ವೃತ್ತಿಯಲ್ಲಿ ತೊಡಗಿದವರಿಗೂ ಈ ಯೋಜನೆ ಅನ್ವಯವಾಗುತ್ತದೆ.
ಪ್ರೋತ್ಸಾಹಧನವೂ ಲಭ್ಯ
ಮೀನುಗಾರಿಕೆಯಲ್ಲಿ ತೊಡಗಿರುವವರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲಸೌಲಭ್ಯ ಪಡೆದು ಅದನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ಪ್ರೋತ್ಸಾಹಧನ (ಸಬ್ಸಿಡಿ)ವೂ ದೊರಕಲಿದೆ.
ಮೀನುಗಾರರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಲಾಸಲಾಗುತ್ತದೆ. ಕರಾವಳಿಯಲ್ಲಿ ಉತ್ತಮ ಸ್ಪಂದನೆ ಇದೆ.
-ಡಿ. ತಿಪ್ಪೇಸ್ವಾಮಿ,
ಕೆ. ಗಣೇಶ್, ಮೀನುಗಾರಿಕೆ
ಇಲಾಖೆ ಜಿಲ್ಲಾ ಉಪ ನಿರ್ದೇಶಕರು, ದ.ಕ., ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.