ಐದು ಕೆರೆಗಳಿದ್ದರೂ ಒಂದೂ ಉಪಯೋಗಕ್ಕೆ ಬರುತ್ತಿಲ್ಲ !

ಕೆರೆ ಅಭಿವೃದ್ಧಿಯಾಗದೆ ಬೇಸಗೆಯಲ್ಲಿ ನಿರಂತರ ಸಮಸ್ಯೆ

Team Udayavani, Feb 4, 2020, 5:33 AM IST

0302kdlm10ph-dodda-kere-new

ಕುಂದಾಪುರ: ಈ ವಾರ್ಡ್‌ನಲ್ಲಿ ಐದು ಕೆರೆಗಳಿವೆ. ಆದರೆ ಎಲ್ಲದರಲ್ಲೂ ಹೂಳು, ಗಿಡಗಂಟಿಗಳು ಹಬ್ಬಿವೆ. ಹೂಳು ತೆಗೆದು ಸ್ವಚ್ಛಗೊಳಿಸಿದರೆ ಧಾರಾಳ ನೀರು ದೊರೆಯುವುದು ಖಚಿತ. ಈ ಬಗ್ಗೆ ಅನೇಕ ವರ್ಷಗಳಿಂದ ಜನರು ಹೇಳುತ್ತಿದ್ದರೂ ಬೇಡಿಕೆ ಮಾತ್ರ ಈಡೇರಿಲ್ಲ.

ವಾರ್ಡ್‌ನಲ್ಲಿ “ಸುದಿನ’ ಸುತ್ತಾಟ ಸಂದರ್ಭ ಕುಂದೇಶ್ವರ ವಾರ್ಡ್‌ನ ನಾವಡರ ಕೇರಿ, ವಿಠಲವಾಡಿ, ಬರೆಕೆರೆ, ಗಣಪತಿ ದೇವಸ್ಥಾನ ಮೊದಲಾದೆಡೆ ಜನರಿಂದ ಕೇಳಿ ಬಂದ ಸಮಸ್ಯೆಗಳಲ್ಲಿ ಪ್ರಮುಖವಾಗಿ ಕೇಳಿ ಬಂದದ್ದೇ ಕೆರೆ ಅಭಿವೃದ್ಧಿ. ಅನಂತರದ ಬೇಡಿಕೆ ರಸ್ತೆ ದುರಸ್ತಿ ಕುರಿತು.

ಐದು ಕೆರೆಗಳು
ಚಟೆRರೆ, ಹುಣಸೆಕೆರೆ, ದೊಡ್ಡಕೆರೆ, ಹಂದೆಯವರ ಕೆರೆ, ಬರೆಕಟ್ಟು ಬಳಿ ಸಣ್ಣಕೆರೆ ಹೀಗೆ ಐದು ಪ್ರಮುಖವಾದ ಕೆರೆಗಳಿವೆ. ಇವುಗಳಲ್ಲೆಲ್ಲಾ ಹೂಳು ತುಂಬಿದೆ. ನೀರಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಸನಿಹದಲ್ಲಿ ಕೃಷಿಭೂಮಿ ಇದ್ದರೂ ಅವುಗಳಿಗೆ ಪ್ರಯೋಜನಕ್ಕಿಲ್ಲ. ಕೆಲವಕ್ಕೆ ಸರಿಯಾದ ತಡೆಗೋಡೆ ಇಲ್ಲದ ಕಾರಣ ಮಳೆಗಾಲದಲ್ಲಿ ನೀರು ತುಂಬಿ ಮನೆಗಳ ಅಂಗಳ ಕೆರೆನೀರಿನಿಂದ ಆವೃತವಾಗಿರುತ್ತದೆ. ರಸ್ತೆ, ಗದ್ದೆ ಎಂದು ಕೆರೆ ನೀರಿನಿಂದ ತುಂಬಿರುತ್ತದೆ. ವಿಠಲವಾಡಿಯ ಕೆರೆ ರಸ್ತೆ ಬದಿಯೇ ಇದ್ದು ಆವರಣ ಗೋಡೆಯೂ ಇಲ್ಲ. ರಾತ್ರಿ ವೇಳೆ ವಾಹನ ಸವಾರರು, ಸಾರ್ವಜನಿಕರು, ಪಾದಚಾರಿಗಳು ಆತಂಕದಿಂದ ಚಲಿಸುವಂತಾಗಿದೆ. ಜಾನುವಾರುಗಳು ಬಿದ್ದರೆ ಎನ್ನುವ ಆತಂಕ ಕೂಡಾ ಇಲ್ಲಿನವರಿಗಿದೆ.

ಆಗಬೇಕಾದ್ದೇನು?
ಕೆರೆಗಳಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಬೇಕು
ವಿಠಲವಾಡಿಯ ಕೆರೆಗೆ ಆವರಣಗೋಡೆ
ಪ್ರಸನ್ನ ಗಣಪತಿ ದೇವಸ್ಥಾನದ ರಸ್ತೆ ಅಭಿವೃದ್ಧಿ

ತೋಡು ಸರಿಪಡಿಸಿ
ಗಾಂಧಿ ಮೈದಾನದಿಂದ ಜೆಎಲ್‌ಬಿ ರಸ್ತೆ ಮೂಲಕ ವಿಠಲವಾಡಿಯಾಗಿ ಒಂದು ತೋಡು ಹೋಗುತ್ತದೆ. ಗಾಂಧಿ ಮೈದಾನ ಕಡೆಯಿಂದ, ರಾಷ್ಟ್ರೀಯ ಹೆದ್ದಾರಿಯಿಂದ ಬರುವ ನೀರು ಇದರಲ್ಲೇ ಹೋಗಬೇಕು. ಆದರೆ ಇದಿನ್ನೂ ಪೂರ್ಣವಾಗಿ ದುರಸ್ತಿಯಾಗದ ಕಾರಣ ಮಳೆಗಾಲದಲ್ಲಿ ಸದಾ ಸಮಸ್ಯೆ ತಂದೊಡ್ಡುತ್ತಿದೆ. ಇದರ ದುರಸ್ತಿಗೂ ಸ್ಥಳೀಯರ ಒತ್ತಾಯವಿದೆ. ಹೊಳೆ ದಂಡೆ ಒಡೆದು ಮಳೆಗಾಲದಲ್ಲಿ ನೀರೆಲ್ಲ ಮನೆಗಳಿಗೆ ನುಗ್ಗುವ ತಾಪತ್ರಯ ಕಳೆದ ಮಳೆಗಾಲದಲ್ಲೂ ಇತ್ತು ರಸ್ತೆ ಕಥೆ ನಾವಡರ ಕೇರಿಯ ಪ್ರಸನ್ನ ಗಣಪತಿ ದೇವಸ್ಥಾನದ ರಸ್ತೆಯನ್ನು 14ನೇ ಹಣಕಾಸು ಯೋಜನೆಯಡಿ 4 ಲಕ್ಷ ರೂ. ಕಾಮಗಾರಿಯಲ್ಲಿ ಅಭಿವೃದ್ಧಿ ಮಾಡಲಾಗಿದ್ದು ಇಲ್ಲಿಂದ ಶಕ್ತಿಕೃಪಾ ಹಾಲ್‌ತನಕ 11.5 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್‌ ಅಳವಡಿಸಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಯಲಿದೆ. ಗಣಪತಿ ದೇವಸ್ಥಾನ ಬಳಿ ಮದಗವೊಂದಕ್ಕೆ ಪುರಸಭೆಯಿಂದ 4.5 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಕಟ್ಟಲಾಗಿದೆ.

ಇಲ್ಲದಿದ್ದರೆ ಮದಗ
ತುಂಬಿದರೆ ಮನೆಯೊಳಗೆ ನೀರು ನುಗ್ಗುತ್ತಿತ್ತು ಎನ್ನುತ್ತಾರೆ ಸ್ಥಳೀಯರು. ದೇವಸ್ಥಾನದ ಹಿಂದಿನ ರಸ್ತೆಯೊಂದು ಜೆಎಲ್‌ಬಿ ರಸ್ತೆಯನ್ನು ಸಂಪರ್ಕಿಸುತ್ತದೆ. ಇದಕ್ಕೆ 20 ಲಕ್ಷ ರೂ. ಅನುದಾನ ಇಡಲಾಗಿತ್ತು. ಆದರೆ ಯುಜಿಡಿ ಕಾಮಗಾರಿ ಮಾಡಿದ ಮೇಲೆ ರಸ್ತೆ ಅಭಿವೃದ್ಧಿಪಡಿಸಿದರೆ ಉತ್ತಮ ಎಂದು ಕಾಮಗಾರಿ ನಡೆಸಲಿಲ್ಲ. ಯುಜಿಡಿ ನಡೆಯಲಿಲ್ಲ, ರಸ್ತೆ ಅಭಿವೃದ್ಧಿ ಆಗಲಿಲ್ಲ, ಅನುದಾನ ಮರಳಿ ಹೋಯಿತು. ಇನ್ನು ಹೊಸದಾಗಿ ಅನುದಾನ ಇಡಬೇಕಿದೆ.

ದುರಸ್ತಿ
ಈ ವಾರ್ಡ್‌ನ ಅಷ್ಟೂ ಕೆರೆಗಳನ್ನು ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಬೇಡಿಕೆ ಇಡುತ್ತಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 60 ಲಕ್ಷ ರೂ. ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ 4 ಕೆರೆಗಳನ್ನು ಹೂಳೆತ್ತಿಸಿ ಜೀರ್ಣೋದ್ಧಾರ ಕಾರ್ಯ ಮಾಡಿಸಿದ್ದಾರೆ. ಚಟೆRರೆ ಹಾಗೂ ಗಣಪತಿ ದೇವಸ್ಥಾನ ಬಳಿಯ ದೊಡ್ಡಕೆರೆ ಅಭಿವೃದ್ಧಿಗೆ ತಲಾ 25 ಹಾಗೂ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಸಣ್ಣ ನೀರಾವರಿ ಇಲಾಖೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮನವಿ ಮಾಡಿದ್ದಾರೆ. ಈ ಕುರಿತು ಸದಸ್ಯ ಗಿರೀಶ್‌ ಜಿ.ಕೆ. ಅವರು ಸಚಿವರಿಗೆ ಮನವಿ ಸಲ್ಲಿಸಿದ್ದರು. ಆದರೆ ಸಚಿವರ ಮನವಿಗೆ ಇಲಾಖೆ ಇನ್ನೂ ಸ್ಪಂದಿಸಿದಂತಿಲ್ಲ. ಈ ಮಧ್ಯೆಯೇ ಕೆಲವು ಕೆರೆಗಳ ಒತ್ತುವರಿ ಕೂಡಾ ಸದ್ದಿಲ್ಲದೇ ನಡೆದಿದೆ. 15,20 ಸೆಂಟ್ಸ್‌ನ ಕೆರೆಯ ವಿಸ್ತಾರ ಒಂದೆರಡು ಸೆಂಟ್ಸ್‌ಗೆ ಇಳಿಯುತ್ತಿದೆ.

ಹೇಳಿದರೂ ಆಗಲಿಲ್ಲ
ಕೆರೆಗಳ ಅಭಿವೃದ್ಧಿಗೆ ಎಷ್ಟೇ ಬಾರಿ ಹೇಳಿಕೊಂಡರೂ ಪ್ರಯೋಜನ ಆಗಲಿಲ್ಲ. ಇವುಗಳಲ್ಲಿ ಧಾರಾಳ ನೀರಿದೆ. ಅಂತರ್ಜಲ ಅಭಿವೃದ್ಧಿಯಾದರೆ ಹಾಗೂ ಸ್ಥಳೀಯ ಇತರ ಉಪಯೋಗಕ್ಕೆ ದೊರೆಯುತ್ತದೆ.
– ನಾರಾಯಣ ನಾಯ್ಕ, ವಿಠಲವಾಡಿ

ವ್ಯರ್ಥ ಕಾಮಗಾರಿ
ನಮ್ಮ ಮನೆ ಸಮೀಪ ಹಂದೆಯವರ ಕೆರೆಯಲ್ಲಿ ಬಾವಿತೋಡಿ ಪಂಪ್‌ ಹಾಕಲಾಯಿತು. ಸ್ವಲ್ಪ ಸಮಯ ಟ್ಯಾಂಕ್‌ಗೆ ನೀರು ಹರಿಸಿದರು. ಆದರೆ ಈಗ ಏನೇನೂ ಉಪಯೋಗಕ್ಕೆ ದೊರೆಯುತ್ತಿಲ್ಲ.
– ಪ್ರವೀಣ್‌ ಹಂದೆ, ವಿಠಲವಾಡಿ

ಕುಂದೇಶ್ವರ ವಾರ್ಡ್‌ ಅನುದಾನ ಇಲ್ಲ
ಸದಸ್ಯರಿಗೆ ಅಧಿಕಾರ ಇನ್ನೂ ದೊರೆತಿಲ್ಲ ಎನ್ನುವುದಕ್ಕಿಂತ ಮುಖ್ಯ ಅನುದಾನದ ಕೊರತೆ. ಒಟ್ಟು ಪುರಸಭೆಗೆ ಅನುದಾನದ ಕೊರತೆಯಿದೆ. ಅಭಿವೃದ್ಧಿಗೆ ಸಾಲುತ್ತಿಲ್ಲ. ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರ ನಿಧಿ ಕೂಡಾ ಪುರಸಭೆ ವ್ಯಾಪ್ತಿಗೆ ಬಳಕೆಗೆ ದೊರೆತರೆ ಅನುಕೂಲ.
– ಗಿರೀಶ್‌ ಜಿ.ಕೆ,
ಸದಸ್ಯರು, ಕುಂದೇಶ್ವರ ವಾರ್ಡ್‌

ಟಾಪ್ ನ್ಯೂಸ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

Manipal: ಮಾಹೆ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ರಜತ ಮಹೋತ್ಸವ

Manipal: ಮಾಹೆ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ರಜತ ಮಹೋತ್ಸವ

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.