ಡಾಮರು ಕಾಮಗಾರಿ, ಕಸ ಸಮಸ್ಯೆ,ಸೋಲಾರ್ ದೀಪ ಸರಿಪಡಿಸಿ
Team Udayavani, Feb 20, 2020, 5:17 AM IST
ಡಾಮರು ಕಾಮಗಾರಿ ನಡೆಸಿ
ಕುಂದಾಪುರ ಪುರಸಭೆ ವ್ಯಾಪ್ತಿಯ ಪಂಚಗಂಗಾವಳಿ ನದಿ ಬಳಿ ಇರುವ ರಿಂಗ್ ರೋಡ್ ಕಾರ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ಇದ್ದು ರಸ್ತೆಯನ್ನು ಜೆಲ್ಲಿ ಮೂಲಕ ಗಟ್ಟಿ ಮಾಡಿ ಆದರ ಮೇಲೆ ಕ್ರಶರ್ ಹುಡಿ ಹಾಕಿದ್ದಾರೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ತುಂಬಾ ಅನನುಕೂಲವಾಗಿದ್ದು ಡಾಮರು ಕಾಮಗಾರಿ ನಡೆಸಿದರೆ ಪಂಚಾಗಂಗಾವಳಿ ನದಿ ಬಳಿ ಇರುವ ರಿಂಗ್‌ರೋಡ್ ಪ್ರವಾಸೋದ್ಯಮಕ್ಕೂ ಒಂದು ಸುಂದರ ಸ್ಥಳವಾಗಲಿದೆ ಹಾಗೂ ಸಂಜೆಯ ಹೊತ್ತಿಗೆ ವಿಹಾರಕ್ಕೆ ಬರುವ ಜನರಿಗೂ ಉಪಯೋಗವಾಗಲಿದೆ. ರಿಂಗ್ ರೋಡ್‌ನ ಕೆಲವು ಕಡೆ ಸಂಜೆ ಸಮಯ ತಿರುಗಲು ಬರುವ ಜನರಿಗೆ ಪುರಸಭೆಯಿಂದ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಮಾಡಿದರೆ ಇನ್ನೂ ಹೆಚ್ಚು ಪ್ರವಾಸಿಗರು ಪಂಚಗಂಗಾವಳಿ ಬಳಿ ಬರುತ್ತಾರೆ.
– ಚೇತನ್ ಖಾರ್ವಿ, ಕುಂದಾಪುರ
ಆಜ್ರಿ : ಸೋಲಾರ್ ದೀಪವೇ ಉರಿಯುತ್ತಿಲ್ಲ
ಆಜ್ರಿಹರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಜ್ರಿ ಪೇಟೆಯಲ್ಲಿರುವ ರಿಕ್ಷಾ ನಿಲ್ದಾಣ ಸಮೀಪದ ಸೋಲಾರ್ ಬೀದಿ ದೀಪವು ಹಲವು ಸಮಯಗಳಿಂದ ಉರಿಯುತ್ತಲೇ ಇಲ್ಲ. ಈಗ ಇದು ಇದ್ದೂ, ಇಲ್ಲದಂತಾಗಿದೆ. ಗ್ರಾಮ ಪಂಚಾಯತ್ ವತಿಯಿಂದ 3-4 ವರ್ಷಗಳ ಹಿಂದೆ ಈ ಸೋಲಾರ್ ದೀಪವನ್ನು ಅಳವಡಿಕೆ ಮಾಡಲಾಗಿತ್ತು. ಆದರೆ 1 ಕಳೆದ ವರ್ಷದಿಂದ ಈ ಬೀದಿ ದೀಪ ಉರಿಯುತ್ತಲೇ ಇಲ್ಲ. ಈ ಸೋಲಾರ್ ದೀಪ ಅಳವಡಿಸಿದ 2 ವರ್ಷ ಮಾತ್ರ ಜನರ ಬಳಕೆಗೆ ಬಂದಿದ್ದು, ಆ ಬಳಿಕ ಮಾತ್ರ ನಿಷ್ಪ್ರಯೋಜಕವಾದಂತಾಗಿದೆ.
ಈ ಬಗ್ಗೆ ಅಲ್ಲಿನ ಗ್ರಾಮಸ್ಥರು, ಆಜ್ರಿಯ ವರ್ತಕರು, ರಿಕ್ಷಾ ಚಾಲಕರೆಲ್ಲ ಅನೇಕ ಬಾರಿ ಪಂಚಾಯತ್‌ಗೆ ಈ ಸೋಲಾರ್ ಬೀದಿ ದೀಪವನ್ನು ದುರಸ್ತಿ ಮಾಡಿ ಎಂದು ಮನವಿ ಮಾಡಿಕೊಂಡರು ಮಾತ್ರ ಈವರೆಗೆ ಯಾವುದೇ ಪ್ರಯೋಜನವೇ ಆಗಿಲ್ಲ.
– ಆಜ್ರಿ ಗ್ರಾಮಸ್ಥರು
ಈ ಹೊಂಡ- ಗುಂಡಿಗಳ ರಸ್ತೆ ಸಂಚಾರಕ್ಕೆಂದು ಮುಕ್ತಿ
ಕಟ್ಟು ಮೂಲಕವಾಗಿ ಹಕ್ಲಾಡಿ, ಬಂಟ್ವಾಡಿ ಸಹಿತ ಹತ್ತಾರು ಊರುಗಳಿಗೆ ಸಂಪರ್ಕ ಕಲ್ಪಿಸುವ ಹೆಮ್ಮಾಡಿ - ಕಟ್ಟು ಸಂಪರ್ಕ ರಸ್ತೆ ಹದಗೆಟ್ಟು ಹಲವು ವರ್ಷಗಳೇ ಕಳೆದಿದೆ. ಈ ರಸ್ತೆಗೆ ಡಾಮರೀಕರಣವಾಗಿದ್ದು ಸುಮಾರು 8 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ಈ ರಸ್ತೆಗೆ ಮರು ಡಾಮರೀಕರಣವಾಗಲಿ ಅಥವಾ ತೇಪೆ ಹಾಕುವ ಕಾರ್ಯವಾಗಲಿ ನಡದೇ ಇಲ್ಲ.
ಹೆಮ್ಮಾಡಿಯಿಂದ ಕಟ್ಟು ಮೂಲಕವಾಗಿ ತೋಪುÉ, ಯಳೂರು, ಬಂಟ್ವಾಡಿ, ಹಕ್ಲಾಡಿ, ಆಲೂರು, ಗುಡ್ಡಮ್ಮಾಡಿ, ಹಕ್ಸೂರು ಸಹಿತ ಅನೇಕ ಊರುಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಈ ರಸ್ತೆಯ ಸುಮಾರು 1.5 ಕಿ.ಮೀ. ಉದ್ದಕ್ಕೆ ಅಲ್ಲಲ್ಲಿ ಹೊಂಡ – ಗುಂಡಿಗಳಿದ್ದು, ಅದರಲ್ಲೂ ಸುಮಾರು 500 ಮೀ. ಅಂತೂ ಸಂಪೂರ್ಣ ಹದಗೆಟ್ಟು ಹೋಗಿದೆ.
ಪ್ರತಿ ನಿತ್ಯ ಈ ರಸ್ತೆಯಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಈ ವರ್ಷವಾದರೂ ಈ ರಸ್ತೆಗೆ ಮರು ಡಾಮರೀಕರಣ ಮಾಡಲು ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಕ್ರಮಕೈಗೊಳ್ಳಲಿ.
ಕಟ್ಟು ಭಾಗದ ಸ್ಥಳೀಯರು
ಗುಜ್ಜಾಡಿ ಕಸ ಸಮಸ್ಯೆ ಮುಕ್ತಿ ಕಾಣುವುದು ಎಂದು?
ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯಕವಾಡಿಯ ಅಂಗನವಾಡಿ ಹತ್ತಿರ ಇರುವ ಚರಂಡಿಯಲ್ಲಿ ಕಸ ತುಂಬಿಕೊಂಡಿದ್ದು ಶಾಲೆಯ ಹತ್ತಿರ ವಿದ್ಯಾರ್ಥಿಗಳು ಇರುವ ಕಾರಣ ಆ ಮಕ್ಕಳಿಗೆ ಅನಾರೋಗ್ಯ ಪರಿಸ್ಥಿತಿ ಉಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನಹರಿಸಿಲ್ಲ.
ಕಸ ಎಲ್ಲೆಂದರಲ್ಲಿ ಎಸೆಯುವವರಿಗೆ ದಂಡ ಹಾಕುವ ವ್ಯವಸ್ಥೆ ಜಾರಿ ಮಾಡುವ ಜತೆಗೆ ಕಸ ವಿಲೇವಾರಿಗೆ ಕೂಡ ಸಮರ್ಪಕ ವ್ಯವಸ್ಥೆ ಕಲ್ಪಿಸಿಕೊಡಬೇಕು. ಜನ ಅತಿ ಹೆಚ್ಚು ಕಸ ಹಾಕುವ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ನಾಯಕವಾಡಿ ರಸ್ತೆಯಲ್ಲಿ ಕಸ ವಿಲೇವಾರಿ ಮಾಡದೆ ಇರುವ ಗುಜ್ಜಾಡಿ ಗ್ರಾಮ ಪಂಚಾಯತ್ ಈ ಬಗ್ಗೆ ಗಮನಹರಿಸಬೇಕಿದೆ.
– ಶಿವರಾಜ್ ಖಾರ್ವಿ,
ಗುಜ್ಜಾಡಿ ಸ್ಥಳೀಯರು
ಅಪಾಯಕಾರಿ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸಿ
ಕುಂದಾಪುರ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆ ವಾರ್ಡ್‌ನ ಕಾರಿಕಟ್ಟೆ ಶ್ರೀ ನಾಗಬೊಬ್ಬರ್ಯ ಸಪರಿವಾರ ದೈವಸ್ಥಾನದ ಎದುರು ಅಪಾಯಕಾರಿಯಾದ ದೈತ್ಯ ಗಾತ್ರದ ಟ್ರಾನ್ಸ್‌ಫಾರ್ಮರ್ ರಸ್ತೆಯಲ್ಲೇ ಇದೆ. ಇದು ಹತ್ತಾರು ತಂತಿಗಳಿಂದ ಕೂಡಿದ್ದು ಶಾಲಾ ಮಕ್ಕಳು, ಸೈಕಲ್, ದ್ವಿಚಕ್ರ ವಾಹನಗಳ ಓಡಾಟಕ್ಕೆ ಅಪಾಯಕಾರಿಯಾಗಿದೆ.. ಇದನ್ನು ಬದಿಗೆ ಸರಿಸಿ ಅಥವಾ ನಗರದಲ್ಲಿ ಅಳವಡಿಸಿದಂತೆ ಸಣ್ಣ ಗಾತ್ರದ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕಿದೆ. ಮೆಸ್ಕಾಂ ಹಾಗೂ ಪುರಸಭೆ ಯವರು ಈ ಕುರಿತು ಗಮನಹರಿಸಬೇಕಿದೆ.
– ರಾಘವೇಂದ್ರ, ಮದ್ದುಗುಡ್ಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.