ನಾಟಿ ವೈದ್ಯೆ ಯಡ್ತಾಡಿ ಬೆಳ್ಳಿ ಬಾೖಗೆ ಜಾನಪದ ಅಕಾಡೆಮಿ ಪ್ರಶಸ್ತಿ
Team Udayavani, Feb 23, 2017, 11:20 AM IST
ಕೋಟ: ನಾಟಿ ವೈದ್ಯೆ, ಜಾನಪದ ಕಲಾವಿದೆ ಉಡುಪಿ ತಾಲೂಕು ಸಾೖಬ್ರಕಟ್ಟೆ ಸಮೀಪದ ಯಡ್ತಾಡಿ ನಿವಾಸಿ 70ರ ಹರೆಯದ ಬೆಳ್ಳಿ ಬಾೖ ಅವರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಫೆ. 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಬೆಳ್ಳಿ ಬಾೖ ಅವರು ನಾಟಿ ವೈದ್ಯೆಯಾಗಿ ಚಿಕ್ಕ ಮಕ್ಕಳಿಗೆ ಔಷಧ ನೀಡುವಲ್ಲಿ ಸಾಕಷ್ಟು ಹೆಸರು ಗಳಿಸಿದವರು ಹಾಗೂ ನಾಲ್ಕೈದು ದಶಕದ ಹಿಂದೆ ಗ್ರಾಮಾಂತರ ಭಾಗದಲ್ಲಿ ಆಸ್ಪತ್ರೆಗಳು, ವೈದ್ಯರ ಕೊರತೆ ಇದ್ದ ಸಂದರ್ಭ ಸುತ್ತಲಿನ ಹಲವಾರು ಗ್ರಾಮಗಳಿಗೆ ತೆರಳಿ ಸುಮಾರು 500ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದರು. ಜಾನುವಾರುಗಳಿಗೆ ಅನಾರೋಗ್ಯದ ಸಂದರ್ಭ ಔಷಧ ನೀಡುತ್ತಿದ್ದರು. ಹೋಳಿ ಹಾಡು ಮುಂತಾದ ಜಾನಪದ ಪ್ರಕಾರದ ಪದ್ಯಗಳನ್ನು ಹಾಡುತ್ತಿದ್ದರು.