ನರೇಗಾದಡಿ ಕಾಲುಸಂಕ ನಿರ್ಮಾಣಕ್ಕೆ ಸಿದ್ಧತೆ : ಕಾಮಗಾರಿಗೆ ಮಳೆ ಅಡ್ಡಿ
Team Udayavani, Sep 11, 2022, 12:32 PM IST
ಉಡುಪಿ: ಕಾಲು ಸಂಕಗಳನ್ನು ನರೇಗಾದಡಿ ನಿರ್ಮಿಸಲು ಈಗಾಗಲೇ ಜಿ.ಪಂ.ನಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೂ ನಿರಂತರ ಮಳೆ ಹಾಗೂ ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ನಿರ್ಮಾಣ ಸಾಧ್ಯ ವಾಗುತ್ತಿಲ್ಲ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ದುಃಸ್ಥಿತಿಯಲ್ಲಿರುವ ಕಾಲುಸಂಕ ಹಾಗೂ ಕಾಲುಸಂಕ ಅಗತ್ಯ ಇರುವ ಗ್ರಾ.ಪಂ.ಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಎಲ್ಲ ಗ್ರಾ.ಪಂ.ಗಳ ಪಿಡಿಒಗಳು ಈ ಸಂಬಂಧ ವರದಿಯನ್ನು ಜಿ.ಪಂ. ಸಿಇಒ ಅವರಿಗೆ ಸಲ್ಲಿಸಿದ್ದಾರೆ. ಸಾಧ್ಯವಾದ ಎಲ್ಲ ಕಡೆಗಳಲ್ಲೂ ನರೇಗಾ ಯೋಜನೆಯಡಿ ಕಾಲುಸಂಕ ನಿರ್ಮಿಸಲು ಸೂಚನೆಯನ್ನು ನೀಡಲಾಗಿದೆ. ಅದರಂತೆ ಗ್ರಾ.ಪಂ. ಹಂತದಲ್ಲಿ ನರೇಗಾದಡಿ ಕಾಲು ಸಂಕಗಳ ನಿರ್ಮಾಣಕ್ಕೆ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಈವರೆಗೂ ಕಾಲುಸಂಕ ನಿರ್ಮಾಣವನ್ನು ನರೇಗಾದಡಿ ಮಾಡುತ್ತಿರಲಿಲ್ಲ. ಈ ವರ್ಷ ಸುಮಾರು 3.50 ಲಕ್ಷ ರೂ. ವರೆಗಿನ ಕಾಮಗಾರಿಯನ್ನು ನರೇಗಾದ ಅಡಿ ಮಾಡಲು ಅವಕಾಶ ನೀಡಿರುವ ಜತೆಗೆ ಕಾಮಗಾರಿಗೆ ಸಂಬಂಧಿಸಿದ ಪರಿಕರಗಳ ಬಿಲ್ ಪಾವತಿಯನ್ನೂ ಶೀಘ್ರ ಮಾಡುವ ಬಗ್ಗೆ ಸರಕಾರದ ಹಂತದಲ್ಲಿ ಚಿಂತನೆ ನಡೆಯುತ್ತಿದೆ. ಕೂಲಿ ಹಣ ಶೀಘ್ರ ಉದ್ಯೋಗ ಕಾರ್ಡ್ ಹೊಂದಿದವರ ಖಾತೆಗೆ ನೇರ ಜಮಾ ಆಗಲಿದೆ. ಪರಿಕರ ಬಿಲ್ ವಿಳಂಬವಾಗುತ್ತಿದೆ. ಅದನ್ನೂ ಶೀಘ್ರ ನೀಡಬೇಕು ಎಂಬ ಆಗ್ರಹವೂ ಇದೆ.
ಮಾನವ ದಿನ ಸೃಜನೆಗೆ ಅನುಕೂಲ
ಉಭಯ ಜಿಲ್ಲೆಯಲ್ಲಿ 20 ಲಕ್ಷಕ್ಕೂ ಅಧಿಕ ಮಾನವದಿನ ಸೃಜನೆಯ ಗುರಿ ಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾಮಗಾರಿ ಅಡಿಯಲ್ಲಿ ಕಾಲುಸಂಕಗಳ ನಿರ್ಮಾಣವೂ ನಡೆಯಲಿರುವುದರಿಂದ ಮಾನವದಿನ ಸೃಜನೆಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ನರೇಗಾದಡಿಯಲ್ಲಿ ಕಾಲುಸಂಕ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಮಳೆ ಹಾಗೂ ನೀರು ಹೆಚ್ಚಿರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗು ತ್ತಿಲ್ಲ. ಮಳೆ ಕಡಿಮೆ ಆಗುತ್ತಿದಂತೆ ಹಂತಹಂತವಾಗಿ ಕಾಮಗಾರಿ ಆರಂಭಿಸಲಿದ್ದೇವೆ.
– ಪ್ರಸನ್ನ ಎಚ್., ಜಿ.ಪಂ. ಸಿಇಒ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.