ಯಾವ ಕಾರಣಕ್ಕೂ ಬೆಳಕು ಮೀನುಗಾರಿಕೆ ನಿಷೇಧಿಸಕೂಡದು
Team Udayavani, Mar 15, 2018, 6:10 AM IST
ಮಲ್ಪೆ: ಕೇಂದ್ರ ಸರಕಾರದ ಮೀನುಗಾರಿಕೆ ಅಭಿವೃದ್ಧಿ ಸಂಸ್ಥೆಯಾದ ಎಂಪಿಇಡಿಎ ವಿಧಿಸಿರುವ ಷರತ್ತುಗಳನ್ನು ಪಾಲನೆ ಮಾಡಿ ಬೆಳಕು ಮೀನುಗಾರಿಕೆ ನಡೆಸಲಾಗುತ್ತಿದೆ. ಇನ್ನು ಬೇರೆ ವೈಜ್ಞಾನಿಕ ಷರತ್ತು ವಿಧಿಸಿದರೂ ಅದನ್ನು ಪಾಲನೆ ಮಾಡಲಾಗುವುದು, ಯಾವ ಕಾರಣಕ್ಕೂ ಲೈಟ್ ಮೀನುಗಾರಿಕೆಯನ್ನು ನಿಷೇಧಿಸಬಾರದು ಎಂದು ಅಖೀಲ ಕರ್ನಾಟಕ ಪಸೀìನ್ ಮೀನುಗಾರ ಸಂಘದ ಉಪಾಧ್ಯಕ್ಷ ನವೀನ್ ಬಂಗೇರ ಮಂಗಳೂರು ಅವರು ಆಗ್ರಹಿಸಿದರು.
ಅಖೀಲ ಕರ್ನಾಟಕ ಪಸೀìನ್ ಮೀನುಗಾರರ ಸಂಘ (ಮಂಗಳೂರಿನಿಂದ ಕಾರವಾರದವರೆಗಿನ) ಮತ್ತು ಮಲ್ಪೆ ಪಸೀìನ್ ಮೀನುಗಾರರ ಸಂಘದ ನೇತೃತ್ವದಲ್ಲಿ ಮಂಗಳವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಪಸೀìನ್ ಮೀನುಗಾರರು ನಡೆಸಿದ ನ್ಯಾಯಯುತ ಹೋರಾಟದಲ್ಲಿ ಅವರು ಮಾತನಾಡಿ ಬೆಳಕು ಮೀನುಗಾರಿಕೆ ದೇಶ ಹಾಗೂ ನಮ್ಮ ರಾಜ್ಯದ ಎಲ್ಲ ಬಂದರುಗಳಲ್ಲೂ ಚಾಲ್ತಿಯಲ್ಲಿದ್ದರೂ ಮೀನಿನ ಕ್ಷಾಮ ಎದುರಾಗುತ್ತಿದೆ ಎಂದು ಇಲ್ಲಿನ ಬಂಡವಾಳಶಾಹಿ ಡೀಪ್‌ಸೀ ಟ್ರಾಲ್‌ಬೋಟ್ ಸಂಘದವರು ಆರೋಪಿಸಿ, ಮಲ್ಪೆ ವಲಯದಲ್ಲಿ ಮಾತ್ರ ನಿಷೇಧಿಸುವ ಮೂಲಕ ಪಸೀìನ್‌ಇಲ್ಲಿನ ಮೀನುಗಾರರನ್ನು ಮತ್ತು ಮೀನುಗಾರಿಕೆಯನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ಲಾಸ್ಟಿಕ್ ಬಲೆ ನಿಷೇಧ
ಡೀಪ್ ಸೀ ಬೋಟಿನವರು ಪ್ಲಾಸ್ಟಿಕ್ ಬಲೆಯನ್ನು ಉಪಯೋಗಿಸಿ ಮೀನುಗಾರಿಕೆ ಮಾಡುವಾಗ ಕಲ್ಲು ಬಂಡೆಗಳ ಮಧ್ಯೆ ಮರಿ ಇಡುವ ಮೀನನ್ನು ಹಿಡಿಯುವ ಸಮಯದಲ್ಲಿ ಕಲ್ಲಿಗೆ ಬಲೆ ಸಿಕ್ಕಿಕೊಂಡಾಗ ಕನಿಷ್ಟ 100 ಕೆ.ಜಿಯಷ್ಟು ಬಲೆ ನಾಶವಾಗಿ ಸಮುದ್ರ ಸೇರುತ್ತದೆ. ರಾಜ್ಯದಲ್ಲಿರುವ ಸುಮಾರು 5 ಸಾವಿರ ಬೋಟುಗಳಲ್ಲಿ 100 ಕೆ ಜಿ ಯಂತೆ 5 ಲಕ್ಷ ಕೆ.ಜಿ. ಯಷ್ಟು ಪ್ಲಾಸ್ಟಿಕ್ ಬಲೆ ಸಮುದ್ರ ಗರ್ಭ ಸೇರಿ ಸಮುದ್ರ ಮಾಲಿನ್ಯಕ್ಕೂ ಕಾರಣರಾಗುತ್ತಾರೆ ಎಂದು ನವೀನ್ ಬಂಗೇರ ತಿಳಿಸಿದರು. ನಾಡದೋಣಿ ಮೀನುಗಾರಿಕೆಗೆ 9.9 ಅಶ್ವಶಕ್ತಿ ಎಂಜಿನ್ ಬಳಸಿ ಮೀನುಗಾರಿಕೆ ನಡೆಸಲು ಅವಕಾಶವಿದ್ದು ಇಲ್ಲಿನ 40 ಅಶ್ವಶಕ್ತಿ ಎಂಜಿನ್ ಬಳಸಲಾಗುತ್ತದೆ. ಎರಡು ದೋಣಿ ಉಪಯೋಗಿಸಿ ಬಲೆ ಹಾಕಿ ಕಾನೂನನ್ನು ಉಲ್ಲಂಘನೆ ಮಾಡುತ್ತಾರೆ ಎಂದರು.
ಕಳ್ಳ ಮೀನುಗಾರರು ಯಾರು?
ಅಖೀಲ ಕರ್ನಾಟಕ ಪಸೀìನ್ ಮೀನುಗಾರರ ಸಂಘದ ಉಪಾಧ್ಯಕ್ಷ ಶೇಖರ್ ತಿಂಗಳಾಯ ಅವರು ಮಾತನಾಡಿ ಡೀಪ್ ಸೀ ಅವರು ನಮಗೆ ಕಳ್ಳ ಮೀನುಗಾರಿಕೆ ಮಾಡುವವರು ಎಂಬ ಹಣೆಪಟ್ಟಿಯನ್ನು ಕಟ್ಟಿದ್ದಾರೆ. ನಾವು ಲೈಟ್ ಹಾಕಿ ಮೀನು ಹಿಡಿದು ತೋರ್ಪಡಿಸಿದ್ದೇವೆ. ಆದರೆ ಡೀಪ್‌ಸೀ ಬೋಟಿನವರು ರಾತ್ರಿ ವೇಳೆಯಲ್ಲಿ ಲೈಟ್ ಆಫ್ ಮಾಡಿ ತೀರ ಪ್ರದೇಶಕ್ಕೆ ಬಂದು ಮೀನುಗಾರಿಕೆ ಮಾಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದು ದಂಡ ಕಟ್ಟಿದ ಇವರಲ್ಲವೇ ನಿಜವಾದ ಕಳ್ಳ ಮೀನುಗಾರರು. 1002 ಅಶ್ವಶಕ್ತಿಯ (501ರ ಎರಡು ಬೋಟ್‌ಗಳು) ಎಂಜಿನ್ ಬಳಸಿಕೊಂಡು ಲಕ್ಷಗಟ್ಟಲೆ ಮರಿ ಮೀನುಗಳನ್ನು ನಾಶ ಮಾಡುತ್ತಿದ್ದಾರೆ. ಹಿಂದೆ ಬೂತಾಯಿ ಮೀನಿನ ಎಣ್ಣೆ ತೆಗೆಯುವ ಘಟಕ ಫಿಶ್‌ಮೀಲ್‌ಗಳು ಇಂದು ಡೀಪ್‌ಸೀ ಮೂಲಕ ಬರುವ ಮರಿಮೀನು (ಚಲ್ಟ್) ಹುಡಿ ಮಾಡುವ ಘಟಕವಾಗಿ ಪರಿವರ್ತನೆ ಗೊಂಡಿದೆ. ಪ್ರತಿನಿತ್ಯ ಸಾವಿರ ಟನ್ ಚಲ್ಟ್ ಮೀನುಗಳು ಫಿಶ್‌ಮೀಲ್ ಸೇರುತ್ತಿದೆ. ಇದರಿಂದ ಮತ್ಸÂಸಂತತಿ ನಾಶವಾಗುತ್ತಿದೆಎಂದರು.
ಏಕಪಕ್ಷೀಯ ನಿರ್ಧಾರ
ಬೆಳಕು ಮೀನುಗಾರಿಕೆಯ ಬಗ್ಗೆ ಜನವರಿ 24ರಂದು ಮೀನುಗಾರ ಸಂಘದ ನೇತೃತ್ವದಲ್ಲಿ ಮೀನುಗಾರಿಕ ಸಚಿವ ಪ್ರಮೋದ್ ಮಧ್ವರಾಜ್ ಸಮ್ಮುಖದಲ್ಲಿ ಆದ ಸಭೆಯಲ್ಲಿ ಮೀನುಗಾರರ ಸಂಘವು ಪರ್ಸಿನ್ ಮೀನುಗಾರರಿಗೆ ಫೆ. 28ರ ವರೆಗೆ ಅವಕಾಶವನ್ನು ನೀಡಿ, ಇತರ ಎಲ್ಲ ರೀತಿಯ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಲ್ಲಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಆ ಬಳಿಕವೂ ಬುಲ್‌ಟ್ರಾಲ್, ಚಲ್ಟ್, ಪಚ್ಚಿಲೆ ಮೀನುಗಾರಿಕೆ ,ಚೌರಿ ಹಾಕಿ ಕಪ್ಪೆ ಬೊಂಡಸ ಹಿಡಿಯುವಂತದ್ದು ನಿರಂತರ ನಡೆಯುತ್ತಲೇ ಇತ್ತು. ಈ ಬಗ್ಗೆ ಫೆ. 5ರಂದು ನಡೆದ ಸಭೆಯಲ್ಲಿ ಪರ್ಸಿನ್ ಸಂಘ, ಮೀನುಗಾರರ ಸಂಘಕ್ಕೆ ದೂರನ್ನು ನೀಡಿದರೂ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ. ಈ ರೀತಿಯ ಅಕ್ರಮ ಮೀನುಗಾರಿಕೆ ನಿಲ್ಲದಿದ್ದರೆ ನಾವು ಮತ್ತೆ ಬೆಳಕು ಮೀನುಗಾರಿಕೆ ನಡೆಸುತೇ¤ವೆ ಎಂದು ಪತ್ರ ಮುಖೇನ ತಿಳಿಸಿ ಆರಂಭಿಸಿದ್ದೇವೆ. ಸಂಘದ ನಿರ್ಧಾರವನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ಒಡ್ಡಿ ಬೆಳಕು ಮೀನುಗಾರಿಕೆಯಲ್ಲಿ ತಂದ ಮೀನನ್ನು ವ್ಯಾಪಾರಸ್ಥರು ಖರೀದಿಸಂತೆ ಸೂಚನೆ ನೀಡಿ ಮೀನುಗಾರ ಸಂಘವು ಕೈಗೊಂಡಿರುವ ಏಕ ಪಕೀÒಯ ನಿರ್ಧಾರವನ್ನು ಖಂಡಿಸುತೇ¤ವೆ ಎಂದು ಮಲ್ಪೆ ಪಸೀìನ್ ಮೀನುಗಾರರ ಸಂಘದ ಕಾರ್ಯದರ್ಶಿ ಕೃಷ್ಣ ಸುವರ್ಣ ಹೇಳಿದರು.
ಅಖೀಲ ಕರ್ನಾಟಕ ಪಸೀìನ್ ಮೀನುಗಾರರ ಸಂಘದ ಅಧ್ಯಕ್ಷ ಗುರುದಾಸ್ ಬಂಗೇರ, ಉಪಾಧ್ಯಕ್ಷ ಬಾಷಾ ಅಹಮದ್ ಪಟೇಲ್, ಗೌರವಾಧ್ಯಕ್ಷ ಬಾಬು ಕುಬಾಲ ಕುಮಟ, ಕಾರ್ಯದರ್ಶಿ ರಮೇಶ್ ಕುಂದರ್ ಗಂಗೊಳ್ಳಿ, ಮಲ್ಪೆ ಪಸೀìನ್ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್, ಗೌರವಾಧ್ಯಕ್ಷ ಅಚ್ಯುತ್ತ ಬಂಗೇರ, ಉಪಾಧ್ಯಕ್ಷ ನಾಗರಾಜ್ ಸುವರ್ಣ, ಚಂದ್ರ ಸಾಲ್ಯಾನ್, ರಾಮ ಸುವರ್ಣ, ಕಾರ್ಯದರ್ಶಿ ನವೀನ್ ಕೋಟ್ಯಾನ್, ಸಂತೋಷ್ ಸಾಲ್ಯಾನ್, ಕೃಷ್ಣ ಸುವರ್ಣ ಉಪಸ್ಥಿತರಿದ್ದರು.
ಏಕರೂಪದ ನೀತಿ ಜಾರಿಯಾಗಲಿ
ಮೀನುಗಾರಿಕೆಗೆ ಬಳಸುವ ಎಂಜಿನ್ ಅಶ್ವಶಕ್ತಿ ಪ್ರಮಾಣ, ಬಲೆಯ ಗಾತ್ರ, ಸೇರಿದಂತೆ ಎಲ್ಲ ವರ್ಗದ ಮೀನುಗಾರರಿಗೆ ನ್ಯಾಯ ಪ್ರಕಾರವಾಗಿ ಏಕರೂಪದ ನೀತಿಯನ್ನು ಜಾರಿಗೊಳಿಸಬೇಕು. ಸಮುದ್ರದಲ್ಲಿ ಪ್ಲಾಸ್ಟಿಕ್ ಬಲೆಗೆ ನಿಷೇಧ ಹೇರಬೇಕು. ಜೀರ್ಣವಾಗುವ ಬಲೆಯಲ್ಲಿ ಉಪಯೋಗಿಸಬೇಕು, ಮಳೆಗಾಲದಲ್ಲಿನ ಮೀನುಗಾರಿಕಾ ನಿಷೇಧದ ಅವಧಿಯನ್ನು ಕೆಲವರ್ಷಗಳ ಹಿಂದೆ ಇದ್ದಂತೆ 90 ದಿನಕ್ಕೆ ವಿಸ್ತರಿಸಬೇಕು ಎಂದು ಪಸೀìನ್ ಮೀನುಗಾರರ ಸಂಘ ಆಗ್ರಹಿಸಿದೆ.
ಬೆಳಕು ಮೀನುಗಾರಿಕೆ ಸ್ಥಗಿತ
ಮೀನುಗಾರಿಕಾ ಸಚಿವರ ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ ಮಾನ್ಯತೆಯನ್ನು ನೀಡಿ ಮಾ.13ರಿಂದ ಈ ಋತುವಿನ ಅಂತ್ಯದವರೆಗೆ ಬೆಳಕು ಮೀನುಗಾರಿಕೆಯನ್ನು ಮಲ್ಪೆ ವಲಯದಲ್ಲಿ ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಮಲ್ಪೆ ಪಸೀìನ್ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.