ವಿದೇಶ ಉದ್ಯೋಗ ಭರವಸೆ ನೀಡಿ 35 ಲ.ರೂ.ವಂಚನೆ
Team Udayavani, Sep 15, 2019, 12:40 AM IST
ಹೆಬ್ರಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಜಪೆಯ ಆಸೀಫ್ ಇಸ್ಮಾ ಯಿಲ್, ಆತನ ಪತ್ನಿ ಹಸೀನಾ ಫರ್ವಿನ್ ಹಾಗೂ ಇಸ್ಮಾಯಿಲ್ 35 ಲ. ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆಂದು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ
ಆತ್ರಾಡಿಯ ಜುಬೇದಾ ಎಂಬವರ ಪುತ್ರ ಫರಾನ್‌ಗೆ ವಿದೇಶದಲ್ಲಿ ಕೆಲಸ ತೆಗೆಸಿಕೊಟ್ಟಿದ್ದು, ಇದಕ್ಕಾಗಿ ಜುಬೇದಾ ವೀಸಾಕ್ಕೆಂದು 5 ಲ. ರೂ. ಅನ್ನು ಆರೋಪಿಗಳಿಗೆ ನೀಡಿದ್ದಾರೆ. ಫರಾನ್ ಪ್ರಕರಣದ ಪ್ರಮುಖ ಆರೋಪಿ ಆಸೀಫ್ ಇಸ್ಮಾಯಿಲ್‌ನೊಂದಿಗೆ ಸೌದಿಯಲ್ಲಿ 10 ತಿಂಗಳು ಕೆಲಸ ಮಾಡಿದ್ದು, ಆಗ ಸಂಬಳ ನೀಡದೆ ವಂಚಿಸಲಾಗಿದೆ. ಈ ಬಗ್ಗೆ ಆಸೀಫ್ ಹಾಗೂ ಆತನ ಪತ್ನಿ ಹಸೀನಾ ಪರ್ವಿನ್‌ನಲ್ಲಿ ವಿಚಾರಿಸಿದಾಗ, ಯಾವುದೇ ಹಣ ಬಾಕಿ ಇಲ್ಲ. ನೀವು ಏನೂ ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಫರಾನ್‌ನ ಪಾಸ್‌ಪೋರ್ಟ್ ಆಸೀಫ್ನಲ್ಲಿದೆ. ಅಲ್ಲದೇ ಜುಬೇದಾ ದಂಪತಿ ವಿದೇಶದಲ್ಲಿದ್ದಾಗ ಅವರಲ್ಲಿ ಹಣ ಕ್ಕಾಗಿ ಪೀಡಿ ಸುತ್ತಿದ್ದರು. ಆಪಾದಿತ ದಂಪ ತಿ ಯು ಜುಬೇದಾಳ ಗಂಡ 30 ವರ್ಷ ವಿದೇಶದಲ್ಲಿ ದುಡಿದಿದ್ದ ಕಂಪೆನಿಯ ಸರ್ವಿಸ್ ಹಣವನ್ನು ನೀಡದೆ ವಂಚಿಸಿದ್ದು, ವಿಚಾರಿಸಿದಾಗ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದಿ ದ್ದಾರೆ. ಅಲ್ಲದೆ ಜುಬೇದಾರ ತಂಗಿ ಜೀನತ್‌ನ ಪುತ್ರ ಅರ್ಫಾನ್‌ಗೂ ಕೆಲಸ ಕೊಡಿಸುವುದಾಗಿ ಆರೋಪಿಗಳು 5 ಲ.ರೂ. ಪಡೆದು ಕೊಂಡಿದ್ದರು,
ಜುಬೇದಾ ಹೆಸರಿನಲ್ಲಿ ಲಕ್ಷಾಂತರ ರೂ. ಆಸ್ತಿಯಿದ್ದು,ಅದನ್ನು ಲಪಟಾ ಯಿಸುವ ಹುನ್ನಾರದಿಂದ ಆರೋಪಿಗಳು ದೂರ ವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದು, ಮತ್ತೂ 30 ಲ. ರೂ. ಪಡೆದು ವಂಚಿಸಿದ್ದಾರೆ ಎಂದು ಜುಬೇದಾ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳಿಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.