ಹಟ್ಟಿಕುದ್ರುವಿಗೆ ನನಸಾಗದ ಸೇತುವೆ ಭಾಗ್ಯ
Team Udayavani, Jul 3, 2018, 6:00 AM IST
ಬಸ್ರೂರು: ಬಸ್ರೂರಿನಿಂದ ಹಟ್ಟಿ ಕುದ್ರುವಿಗೆ ಸೇತುವೆ ಕನಸಾಗಿಯೇ ಉಳಿದಿದೆ. ಬಸ್ರೂರು ಗ್ರಾ.ಪಂ.ನ ಒಂದು ಮತ್ತು ಎರಡನೇ ವಾರ್ಡ್‌ನ ಪ್ರದೇಶವೇ ಹಟ್ಟಿಕುದ್ರು. ಇಲ್ಲಿ 1,200 ಮಂದಿ ವಾಸವಾಗಿದ್ದು 240 ಕುಟುಂಬಗಳಿವೆ. ಕುಂದಾಪುರ ತಾಲೂಕಿನಲ್ಲಿ ಇನ್ನೂ ಹಲವು ಕುದ್ರುಗಳಿದ್ದು ಒಂದೊಂದರ ಕಥೆ ಒಂದೊಂದು ರೀತಿಯಾಗಿದೆ.
ಶಾಲೆಯಲ್ಲಿ ಆರೋಗ್ಯ ಕೇಂದ್ರ
ಹಟ್ಟಿಕುದ್ರುವಿನಲ್ಲಿ ಒಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಉಪಕೇಂದ್ರ ಬೇರೆಡೆ ಸ್ಥಳಾವಕಾಶದ ಕೊರತೆ ಯಿಂದ ಶಾಲೆಯ ಒಂದು ಪಾರ್ಶ್ವದಲ್ಲೆ ನಡೆಸಲಾಗುತ್ತಿದೆ. ಇಲ್ಲಿನ ಜನರು ಹೆಚ್ಚಿನ ಕೆಲಸಗಳಿಗೆ ಅವಲಂಬಿಸಿರುವುದು ಬಸ್ರೂರನ್ನೆ, ಆದರೆ ಬಸ್ರೂರಿಗೆ ಬರಬೇಕಾದರೆ ಇವರಿಗೆ ದೋಣಿ ಪಯಣ ಅನಿವಾರ್ಯ.
ಶತಮಾನದಿಂದಲೂ ಈ ಪ್ರದೇಶದಲ್ಲಿ ದೋಣಿ ಸಂಚಾರವೇ ಪ್ರಮುಖ ಸಂಚಾರ ಸಾಧನವಾಗಿತ್ತು. ಬಸ್ರೂರು ಮಂಡಿಕೇರಿ ಯಿಂದ ಹಟ್ಟಿಕುದ್ರುವಿಗೆ ಸೇತುವೆ ನಿರ್ಮಾಣದ ಪ್ರಸ್ತಾವನೆ ಬಂತಾದರೂ ಅದಕ್ಕಿಂತ ಹಟ್ಟಿಯಂಗಡಿಯಿಂದ ಹಟ್ಟಿಕುದ್ರು ವಿಗೆ ಸೇತುವೆ ನಿರ್ಮಾಣ ಕಡಿಮೆ ದೂರ ದಲ್ಲಿ ಸಾಧ್ಯವೆಂಬ ಹಿನ್ನಲೆಸೇತುವೆಯನ್ನು ಹಟ್ಟಿ ಯಂಗಡಿಯಿಂದಲೇ ನಿರ್ಮಿಸಲಾಯಿತು. ಬಸ್ರೂರಿನಿಂದ ಹಟ್ಟಿಕುದ್ರುವಿಗೆ ಸೇತುವೆ ಕನಸಾಗಿಯೇ ಉಳಿಯಿತು.
ಅಸ್ವಸ್ಥರು, ಮುದುಕರು, ವಿದ್ಯಾರ್ಥಿ ಗಳಿಗೆ ಬಸ್ರೂರಿನ ಸಂಪರ್ಕ ಅನಿವಾರ್ಯ ವಾದ್ದರಿಂದ ಬಸೂÅರು ಮಂಡಿಕೇರಿಯಿಂದ ಹಟ್ಟಿಕುದ್ರುವಿಗೆ ಸೇತುವೆ ನಿರ್ಮಿಸಬೇಕೆಂದು ಈ ಭಾಗದ ಜನರು ಜನಪ್ರತಿನಿಧಿಗಳನ್ನು ಆಗ್ರಹಿಸುತ್ತಲೇ ಬಂದಿದ್ದಾರೆ.
ಇಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವಾಗಿ ದೋಣಿ ಪ್ರಯಾಣ ಲಭಿಸುತ್ತಿದ್ದು ಕಾಲೇಜು ವಿದ್ಯಾರ್ಥಿಗಳಿಗೆ 1 ರೂ. ತೆಗೆದು ಕೊಳ್ಳು ತ್ತಿದ್ದಾರೆ.
ಕೇಂದ್ರ ಸರಕಾರಕ್ಕೆ ಪತ್ರ
ಬಸ್ರೂರಿನಿಂದ ಹಟ್ಟಿಕುದ್ರುವಿಗೆ ಸೇತುವೆ ನಿರ್ಮಾಣದ ಬಗ್ಗೆ ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಿದ್ದು ಅವರು ರೂ.35 ಕೋಟಿಯ ಅನುದಾನವನ್ನು ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುತ್ತಾರೆ. ಈ ಬಗ್ಗೆ ಸಂಸದರಿಗೂ ಮನವಿ ನೀಡಿದ್ದು, ಶಿಕ್ಷಣ, ವೈದ್ಯಕೀಯ ಮತ್ತಿತರ ಅಗತ್ಯಗಳಿಗಾಗಿ ಹಟ್ಟಿಕುದ್ರುವಿನ ಜನರು ಬಸ್ರೂರಿಗೆ ದೋಣಿಯಲ್ಲೆ ಅಪಾಯದ ನಡುವೆ ಬರಬೇಕಾದ ಅನಿವಾರ್ಯತೆಯಿದೆ. ಆದಷ್ಟು ಶೀಘ್ರ ಸೇತುವೆ ನಿರ್ಮಾಣವಾಗಬೇಕೆಂಬುದು ನಮ್ಮ ಉದ್ದೇಶ.
– ಸಂತೋಷ್ ಕುಮಾರ್ ಎಚ್., ಅಧ್ಯಕ್ಷರು, ಗ್ರಾ.ಪಂ. ಬಸ್ರೂರು
ಮನವಿ ಮಾಡಲಾಗಿದೆ
ಬಸ್ರೂರಿನಿಂದ ಹಟ್ಟಿಕುದ್ರುವಿಗೆ ಸೇತುವೆ ನಿರ್ಮಾಣ ಅನಿವಾರ್ಯವಾಗಿದೆ. ಈ ಬಗ್ಗೆ ಕುಂದಾಪುರ ಶಾಸಕರಿಗೆ ಮೌಖೀಕವಾಗಿ, ಲಿಖೀತವಾಗಿ ಮನವಿ ನೀಡಲಾಗಿದೆ. ಸಂಸದರಿಗೂ ಇಲ್ಲಿ ಸೇತುವೆ ನಿರ್ಮಿಸುವ ಬಗ್ಗೆ ಮನವಿ ಮಾಡಲಾಗಿದೆ. ಈ ಪ್ರಯತ್ನ ನಿರಂತರ ನಡೆಯುತ್ತಿದ್ದು. ಶೀಘ್ರ ಬಸ್ರೂರಿನಿಂದ ಹಟ್ಟಿಕುದ್ರುವಿಗೆ ಸೇತುವೆ ನಿರ್ಮಾಣವಾಗುತ್ತದೆ ಎನ್ನುವ ಆಶಾಭಾವನೆಯಿದೆ.
- ರಾಮ್‌ಕಿಶನ್ ಹೆಗ್ಡೆ,
ಬಸ್ರೂರು ತಾ.ಪಂ. ಸದಸ್ಯ
– ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.