ಸ್ವಪ್ರಾಯೋಜಿತ ಶಿಕ್ಷಣ ಪದ್ಧತಿಯ ಆದ್ಯ ಪ್ರವರ್ತಕ ಡಾ| ಟಿಎಂಎ ಪೈ

ಮಣಿಪಾಲ: ಸ್ಥಾಪಕರ ದಿನಾಚರಣೆಯಲ್ಲಿ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು

Team Udayavani, May 1, 2019, 6:15 AM IST

swa-prayojita

ಉಡುಪಿ: ಸ್ವಪ್ರಾಯೋಜಿತ ಖಾಸಗಿ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸಿ, ದೇಶದ
ಇತರ ಕಡೆಗಳಲ್ಲೂ ಈ ಪ್ರಯೋಗ ನಡೆಯುವಂತೆ ಮಾಡಿದ ಕೀರ್ತಿ ಮಣಿಪಾಲದ ಡಾ|ಟಿಎಂಎ ಪೈಯವರಿಗೆ ಸಲ್ಲುತ್ತದೆ ಎಂದು ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಬಣ್ಣಿಸಿದರು.

ಮಣಿಪಾಲದ ಮಾಹೆ ವಿ.ವಿ., ಡಾ| ಟಿಎಂಎ ಪೈ ಪ್ರತಿಷ್ಠಾನ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ (ಎಜಿಇ), ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ., ಎಂಇಎಂಜಿ ಆಶ್ರಯದಲ್ಲಿ ಮಣಿಪಾಲದ ವ್ಯಾಲಿ ವ್ಯೂ ಹೊಟೇಲ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ಥಾಪಕರ ದಿನಾಚರಣೆಯಲ್ಲಿ (ಡಾ| ಟಿಎಂಎ ಪೈಯವರ 121ನೇ ಜನ್ಮದಿನ) ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.

ಅಜ್ಞಾನ, ದಾರಿದ್ರé, ಅನಾರೋಗ್ಯ ಈ ಮೂರು ಪಿಡುಗುಗಳನ್ನು ದೇಶ ಎದುರಿಸುತ್ತಿದೆ ಎಂದು ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಹೇಳುತ್ತಿದ್ದರು. ಡಾ| ಟಿಎಂಎ ಪೈಯವರು ಅಜ್ಞಾನ ನಿವಾರಣೆಗೆ ಶಿಕ್ಷಣ ಸಂಸ್ಥೆ, ದಾರಿದ್ರé ನಿವಾರಣೆಗಾಗಿ ಪಿಗ್ಮಿಯಂತಹ ಉಳಿತಾಯ ಪ್ರವೃತ್ತಿ ಹುಟ್ಟುಹಾಕಿದ ಸಿಂಡಿಕೇಟ್‌ ಬ್ಯಾಂಕ್‌, ಅನಾರೋಗ್ಯ ನಿವಾರಣೆಗೆ ಆಸ್ಪತ್ರೆಯನ್ನು ನಿರ್ಮಿಸಿ ಮೂರೂ ಸಮಸ್ಯೆಗಳಿಗೆ ಪರಿಹಾರದ ದಾರಿ ತೋರಿಸಿಕೊಟ್ಟರು ಎಂದರು.

ವಿದ್ಯಾರ್ಥಿಗಳೇ ಹಣ ಕೊಟ್ಟು ಕಲಿಯುವ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಕೆಎಂಸಿ ಮೂಲಕ ಹುಟ್ಟು ಹಾಕಿದರು. ಆಗ ಇಂತಹ ಧೈರ್ಯವನ್ನು ದೇಶದಲ್ಲಿ ಯಾರೂ ಮಾಡಿರಲಿಲ್ಲ. ಇಂತಹ ಶಿಕ್ಷಣ ಪದ್ಧತಿಯನ್ನೂ ಮಾಡಬಹುದು ಎಂಬ ಮೂಲ ಕಲ್ಪನೆ ಡಾ| ಪೈಯವರದ್ದು. ಅವರು ಆರಂಭಿಸಿದ ಸಂಸ್ಥೆಗಳನ್ನು ಅವರ ಬಂಧುಗಳು ಬೆಳೆಸಿದ್ದಾರೆ. ಶಾಸ್ತ್ರದಲ್ಲಿ ಆತ್ಮನಿಗೆ ಮರಣವಿಲ್ಲ. ಅವರಿಗೆ ಭಗವಂತನ ಅನುಗ್ರಹ ಸದಾ ಇರಲಿ ಎಂದು ಸ್ವಾಮೀಜಿ ಹಾರೈಸಿದರು.

ನಾವು ಸನ್ಯಾಸಾಶ್ರಮ ಸ್ವೀಕರಿಸಿ ಪುರಪ್ರವೇಶ ಮಾಡಿದ ದಿನದಿಂದ ನಮಗೆ ಡಾ| ಪೈಯವರ ಸಂಪರ್ಕವಿತ್ತು. ನಮ್ಮ ಮೊದಲ ಪರ್ಯಾಯದ ತಣ್ತೀಜ್ಞಾನ ಸಮ್ಮೇಳನಕ್ಕೆ ವಿರೋಧ ಬಂದಾಗ ಅದು ಯಶಸ್ವಿಯಾಗಿ ನಡೆಯುವಂತಾಗಲು ಡಾ| ಪೈ ಪ್ರಮುಖ ಕಾರಣರಾಗಿದ್ದರು. ಇದೂ ಸಹಿತ ಬೇರೆ ಬೇರೆ ಸಂದರ್ಭ ಅವರು ಮಾರ್ಗದರ್ಶನ ನೀಡುತ್ತಿದ್ದರು ಎಂದರು.

ಮಂಗಳೂರು ಕೆಎಂಸಿ ವಿಶ್ರಾಂತ ಸಹ ಡೀನ್‌ ಡಾ| ಸಿ.ಆರ್‌. ಕಾಮತ್‌ ಗೌರವ
ಅತಿಥಿಗಳಾಗಿ ಮಾತನಾಡಿ, ಸಿಂಡಿಕೇಟ್‌ ಬ್ಯಾಂಕ್‌ನ್ನು ನೇಕಾರರಿಗೆ ಸಹಾಯ ಮಾಡಲು ಸ್ಥಾಪಿಸಲಾಯಿತು. ಅನಂತರ ಅದು ವಿಸ್ತಾರವಾಗಿ ಬೆಳೆಯಿತು ಎಂದರು.

ಎಂಇಎಂಜಿ ಅಧ್ಯಕ್ಷ, ಎಜಿಇ ಕುಲಸಚಿವ ಡಾ| ರಂಜನ್‌ ಪೈ, ಮಾಹೆ ಟ್ರಸ್ಟ್‌ ಟ್ರಸ್ಟಿ ವಸಂತಿ ಪೈ, ಡಾ| ಟಿಎಂಎ ಪೈ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಖಜಾಂಚಿ ಟಿ. ಅಶೋಕ್‌ ಪೈ, ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ, ಎಜಿಇ ಉಪಾಧ್ಯಕ್ಷ ಸತೀಶ್‌ ಯು. ಪೈ ಉಪಸ್ಥಿತರಿದ್ದರು ಎಜಿಇ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಸ್ವಾಗತಿಸಿ ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್‌ ವಂದಿಸಿದರು.

ವಾಗಾÏ ಸಹಾಯಕ ಪ್ರಾಧ್ಯಾಪಕ ಡಾ| ನರೇಶ ಪಿ. ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ನಗದು ಬಹುಮಾನವನ್ನು ವಿತರಿಸ ಲಾಯಿತು.

ಮೊದಲ ಪರ್ಯಾಯದಲ್ಲಿ ಗೈರು, ಐದನೆಯದಕ್ಕೆ ಹಾಜರು!
ಶ್ರೀಕೃಷ್ಣ ಮಠದಲ್ಲಿ ನಾವು ಪ್ರಥಮ ಪರ್ಯಾಯದಲ್ಲಿದ್ದಾಗ ಮಣಿಪಾಲ ಕೆಎಂಸಿಗೆ ಶಿಲಾನ್ಯಾಸ ಮಾಡಲು ಡಾ| ಪೈಯವರು ಒತ್ತಾಯಿಸಿದರು. ಆದರೆ ಪರ್ಯಾಯ ಅವಧಿಯಾದ ಕಾರಣ ಬರಲಾಗಲಿಲ್ಲ. ಆದರೆ ಐದನೆಯ ಪರ್ಯಾಯದಲ್ಲಿ ನನಗೆ ಅನಾರೋಗ್ಯ ಉಂಟಾಗಿ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುವಂತಾಯಿತು. ಕೆಎಂಸಿ ಆರಂಭಿಸುವಾಗ ಶ್ರೀಕೃಷ್ಣ ದೇವರ ಎದುರು ನಾನು ನಿಂತು ದೇವರಲ್ಲಿ ಪ್ರಾರ್ಥನೆ ನಡೆಸಿದ್ದೆ. ಆಗ ಡಾ| ಪೈಯವರು ಕಣ್ಣೀರುಸುರಿಸಿದ್ದರು. ಆ ಭಾವೋದ್ವೇಗದ ಘಟನೆ ಇಂದಿಗೂ ನೆನಪಿದೆ. ಶ್ರೀಕೃಷ್ಣನ ಅನುಗ್ರಹದಿಂದ ಈಗ ವಿದ್ಯಾಸಾಮ್ರಾಜ್ಯವೇ ನಿರ್ಮಾಣವಾಗಿದೆ.

ಎಂಜಿಎಂ ಕಾಲೇಜು ಆರಂಭೋತ್ಸವಕ್ಕೆ ಪರ್ಯಾಯ ಮಠಾಧೀಶರು ಹೊರತುಪಡಿಸಿ ಏಳೂ ಸ್ವಾಮೀಜಿಯವರು ಆಗಮಿಸಿದ್ದರೆನ್ನುವುದು ಉಲ್ಲೇಖನೀಯ.
– ಪೇಜಾವರ ಸ್ವಾಮೀಜಿ

ಸಹಾಧ್ಯಾಯಿ ಸಹೋದ್ಯೋಗಿ !
ಮಂಗಳೂರು ಕೆಎಂಸಿ ವಿಶ್ರಾಂತ ಸಹ ಡೀನ್‌ ಡಾ| ಸಿ.ಆರ್‌.ಕಾಮತ್‌ ಅವರ ತಂದೆ ಡಾ| ಸಿ.ಪಿ. ಕಾಮತ್‌ ಅವರು ಚೆನ್ನೈಯಲ್ಲಿ ಡಾ| ಟಿಎಂಎ ಪೈಯವರ ಸಹಾಧ್ಯಾಯಿ. ಮಣಿಪಾಲ ಕೆಎಂಸಿ ಆರಂಭಿಸುವಾಗ, “ನಿನಗೆ ಪ್ರಾಧ್ಯಾಪಕ ವೈದ್ಯರು ಯಾರು ಸಿಗುತ್ತಾರೆ’ ಎಂದು ಸಿ.ಪಿ. ಕಾಮತ್‌ ಅವರು ಡಾ| ಪೈಯವರನ್ನು ಕೇಳಿದಾಗ, “ಕಣ್ಣಿನ ವಿಭಾಗಕ್ಕೆ ನೀನೇ ಮುಖ್ಯಸ್ಥ’ ಎಂದು ಹೇಳಿ ಅವರನ್ನೇ ಪ್ರಾಧ್ಯಾಪಕರಾಗಿ ನಿಯೋಜಿಸಿದರು. ಡಾ|ಪೈಯವರ ಗುಣಮಟ್ಟದ ಶಿಕ್ಷಣ ಕಲ್ಪನೆಯಿಂದಾಗಿ ಮೊದಲ ಎಂಬಿಬಿಎಸ್‌ ತಂಡಕ್ಕೆ ಬ್ರಿಟಿಷ್‌ ವೈದ್ಯಕೀಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಮಾನ್ಯತೆ ನೀಡಿತ್ತು ಎಂದು ಡಾ| ಸಿ.ಆರ್‌. ಕಾಮತ್‌ ಉಲ್ಲೇಖೀಸಿದರು.

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.