ಬೋಟುಗಳಿಗೆ ನಾಲ್ಕು ತಿಂಗಳ ಡೀಸೆಲ್ ಸಬ್ಸಿಡಿ ಬಾಕಿ
ಮೀನೂ ಇಲ್ಲ, ಸಬ್ಸಿಡಿ ಹಣವೂ ಬಾರದೆ ಮೀನುಗಾರರು ಕಂಗಾಲು
Team Udayavani, Mar 8, 2020, 5:12 AM IST
ಮಲ್ಪೆ: ಒಂದೆಡೆ ಮೀನಿನ ಕ್ಷಾಮ, ಮತ್ತೂಂದೆಡೆ ಮೇಲಿಂದ ಮೇಲೆ ಎರಗಿದ ಚಂಡಮಾರುತದಿಂದಾಗಿ ಲಕ್ಷಾಂತರ ರೂ. ಬಂಡವಾಳ ಹೂಡಿ ನಡೆಸುವ ಮೀನುಗಾರಿಕೆಗೆ ಈ ಬಾರಿಯೂ ದೊಡ್ಡ ಹೊಡೆತ ಉಂಟಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಡೀಸೆಲ್ ಸಬ್ಸಿಡಿಯನ್ನೂ ನೀಡಿದೆ ಸರಕಾರ ಬಾಕಿ ಇಟ್ಟುಕೊಂಡಿದ್ದು ಮೀನುಗಾರರನ್ನು ಸಂಕಷ್ಟಕ್ಕೆ ದೂಡಿದೆ.
ಪ್ರತಿ ಲೀ.ಗೆ 11.28 ಪೈಸೆ ಸಬ್ಸಿಡಿ
ಪ್ರತಿ ಯಾಂತ್ರೀಕೃತ ಬೋಟ್‌ಗೆ ಬಳಸುವ ಪ್ರತೀ ಲೀಟರ್ 11.28 ಪೈಸೆಯಷ್ಟು ಸಬ್ಸಿಡಿ ದೋಣಿ ಮಾಲಕನ ಖಾತೆಗೆ ಜಮಾ ಅಗುತ್ತದೆ. ಆಯಾ ಬೋಟ್‌ಗಳ ಡೀಸೆಲ್ ಬಳಕೆಯ ಆಧಾರದ ಮೇಲೆ ಒಂದು ದೋಣಿ ತಿಂಗಳಿಗೆ ಗರಿಷ್ಠ 9 ಸಾವಿರ ಲೀಟರ್‌ವರೆಗೆ ಸಬ್ಸಿಡಿ ಪಡೆಯಬಹುದಾಗಿದೆ. ರಾಜ್ಯದ ಕರಾವಳಿಯ ಮೂರು ಜಿಲ್ಲೆಯಲ್ಲಿ ಒಟ್ಟು 5000ಕ್ಕೂ ಹೆಚ್ಚು ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳಿದ್ದು ಬೋಟ್ ಮಾಲಕರ ಖಾತೆಗೆ ನವೆಂಬರ್‌ನಿಂದ ಜಮಾ ಆಗುವುದು ಬಾಕಿ ಇದೆ.
ವಿಳಂಬವೇಕೆ?
ಇಲಾಖೆಯ ಉನ್ನತ ಅಧಿಕಾರಿಗಳು ಹೇಳುವಂತೆ ಇಲಾಖೆಯಿಂದ ವಾರ್ಷಿಕವಾಗಿ 1.50 ಲಕ್ಷ ಕಿಲೋ. ಲೀಟರ್ ಡೀಸೆಲ್ ನೀಡಲಾಗುತ್ತಿದ್ದು, ಕಳೆದ ಬಜೆಟ್‌ನಲ್ಲಿ ಈ ಸಾಲಿನ ಮೀನುಗಾರಿಕೆಗೆ 11 ರೂ. ನಂತೆ 166 ಕೋ ರೂ. ಸಬ್ಸಿಡಿಗೆ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿತ್ತು. ಆದರೆ ಸರಕಾರ ಕೆಲವೊಂದು ಕಾರಣ ಒಡ್ಡಿ 135 ಕೋ. ರೂ. ಮಾತ್ರ ಮಂಜೂರು ಮಾಡಿದೆ. ಈಗಾಗಲೇ 3 ಕಂತಿನ ಹಣ ನೀಡಲಾಗಿದ್ದು, ಇದೀಗ ನಾಲ್ಕನೇ ಕಂತಿನ ಹಣವನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆ ಒಂದು ರೇಡರ್ ನಿಗದಿ ಪಡಿಸಿದೆಯಂತೆ. ಅದರ ಪ್ರಕಾರ 10 ಕೋ. ರೂಪಾಯಿಗಿಂತ ಹೆಚ್ಚಿಗೆ ಮೊತ್ತ ಬಿಡುಗಡೆಯಾಗಬೇಕಾದರೆ ಆರ್ಥಿಕ ಇಲಾಖೆಯ ಒಪ್ಪಿಗೆ ಬೇಕು. ಆ ಪ್ರಕಾರ ಆಡಳಿತ ಇಲಾಖೆಯಿಂದ ಕಾರ್ಯದರ್ಶಿ ಅವರಿಗೆ ಕಡತವನ್ನು ಕಳುಹಿಸಲಾಗಿದ್ದು ಒಂದೆರಡು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಡೆಲಿವರಿ ಪಾಯಿಂಟ್‌ನಲ್ಲಿ ನೀಡಲು ಆಗ್ರಹ
ಈ ಮೊದಲು ಡೆಲಿವರಿ ಪಾಯಿಂಟ್‌ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡಲಾಗುತಿತ್ತು. ಪ್ರಸ್ತುತ ಮೀನು ಗಾರರಿಂದ ಮಾರಾಟ ತೆರಿಗೆ ಪಡೆದುಕೊಂಡು ಆನಂತರ ಅವರ ಖಾತೆಗೆ ಈ ಮೊತ್ತವನ್ನು ಸರಕಾರ ಜಮೆ ಮಾಡುತ್ತಿದೆ. ಈ ತೆರಿಗೆ ಹಣ ಕ್ರಮಬದ್ಧವಾಗಿ ಬಾರದಿರುವ ಕಾರಣ ಮೀನುಗಾರರು ತೊಂದರೆ ಯನ್ನು ಅನುಭವಿಸುವಂತಾಗಿದೆ. ಈ ಹಿಂದಿನಂತೆ ಡೆಲಿವರಿ ಪಾಯಿಂಟ್‌ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಮೀನುಗಾರು ಆಗ್ರಹಿಸುತ್ತಿದ್ದಾರೆ.
ಶೇ.50ರಷ್ಟು ಬೋಟ್‌ಲಂಗರು
ಪ್ರಸ್ತುತ ದಿನದಲ್ಲಿ ಮೀನುಗಾರಿಕೆಯಿಂದ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಆಳ ಸಮುದ್ರ ಮೀನುಗಾರಿಕೆಗೆ 10 ದಿನಕ್ಕೆ 6 ಸಾವಿರ ಲೀ. ನಂತೆ ಕನಿಷ್ಠ 4 ಲಕ್ಷ ರೂ. ಮೊತ್ತದ ಡಿಸೇಲ್ ವೆಚ್ಚವಾಗುತ್ತದೆ. ಬಲೆ, ಮಂಜುಗಡ್ಡೆ ಹಾಗೂ ಇನ್ನಿತರ ಖರ್ಚು ಬೇರೆ. ಒಟ್ಟು 5 ರಿಂದ 6 ಲಕ್ಷ ರೂ. ಮೌಲ್ಯದ ಮೀನು ಹಿಡಿದರೂ ಬೋಟ್ ಮಾಲಕರಿಗೆ ಇದರಿಂದ ಲಾಭವಾಗದು. ಮೀನಿನ ಅಲಭ್ಯತೆಯಿಂದಾಗಿ ಶೇ.50 ರಷ್ಟು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಶೇ. 5ರಷ್ಟು ಬೋಟುಗಳಿಗೆ ಅಲ್ಪ ಪ್ರಮಾಣದಲ್ಲಿ ಮತ್ಸ್ಯ ಸಂಪತ್ತು ಲಭಿಸಿದ್ದರೂ ಉಳಿದೆಲ್ಲ ನಷ್ಟದಲ್ಲಿದೆ.
ಸಬ್ಸಿಡಿ ಹಣಕ್ಕೆ ಕಾದಿದ್ದೇವೆ
ಈಗಾಗಲೇ ಮೀನಿನ ಕ್ಷಾಮದಿಂದಾಗಿ ಸಂಪೂರ್ಣ ನಷ್ಟವನ್ನು ಅನುಭವಿಸಿದೇªವೆ. ಬ್ಯಾಂಕ್ ಅಧಿಕಾರಿಗಳು ಮಾರ್ಚ್ ವರ್ಷಾಂತ್ಯದ ಕಾರಣ ಒಡ್ಡಿ ಒತ್ತಡವನ್ನು ಹೇರುತ್ತಿದ್ದಾರೆ. ಸಬ್ಸಿಡಿ ಹಣ ಸಿಕ್ಕಿದರೆ ಬ್ಯಾಂಕಿನಲ್ಲಿ ಮಾಡಿದ ಸಾಲದ ಕಂತನ್ನು ತುಂಬಲಾದರೂ ಸಹಕಾರಿಯಾಗಿರುತ್ತಿತ್ತು.
-ಸತೀಶ್ ಕುಂದರ್ ಮಲ್ಪೆ, ಬೋಟ್ ಮಾಲಕರು
ಒಂದೆರಡು ದಿನಗಳಲ್ಲಿ ಸಬ್ಸಿಡಿ ಬಿಡುಗಡೆಯಾಗುವ ಸಾಧ್ಯತೆ ಇದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಸಬ್ಸಿಡಿ ಹಣ ವಾರದೊಳಗೆ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಜನವರಿ ಮತ್ತು ಫೆಬ್ರವರಿಯ ತಿಂಗಳ ಪಟ್ಟಿಯನ್ನು ಕಳುಹಿಸಲಾಗಿದೆ.
-ರಾಮಾಚಾರ್ಯ, ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಬೆಂಗಳೂರು (ಮರೈನ್)
– ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.