ಉಡುಪಿ: ಮುದ್ರಾ ಲೋನ್ ಹೆಸರಿನಲ್ಲಿ ವ್ಯಕ್ತಿಗೆ 2 ಲಕ್ಷ ರೂ. ವಂಚನೆ
Team Udayavani, Nov 25, 2022, 9:47 PM IST
ಉಡುಪಿ : ಮುದ್ರಾ ಲೋನ್ ಹೆಸರಿನಲ್ಲಿ ಸಾಲ ಕೊಡುವುದಾಗಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ.ವರೆಗೆ ವಂಚಿಸಿದ ಘಟನೆ ನಡೆದಿದೆ.
ಜಿಲ್ಲೆಯ ನಿವಾಸಿ ಸತೀಶ್ ಜೈನ್ ಅವರಿಗೆ ಅಪರಿಚಿತನೊರ್ವ ಮುದ್ರಾ ಲೋನ್ ಸಂಸ್ಥೆಯ ಮ್ಯಾನೇಜರ್ ಎಂದು ಕರೆ ಮಾಡಿ ಮುದ್ರಾ ಲೋನ್ ನೀಡುವುದಾಗಿ ತಿಳಿಸಿದ್ದ. ಲೋನ್ಗೆ ಸಂಬಂಧಿಸಿ ದಾಖಲೆಗಳನ್ನು ಪಡೆದು, ನೋಂದಣಿ ಶುಲ್ಕ 3,200 ರೂ. ಜಮೆ ಮಾಡುವಂತೆ ತಿಳಿಸಿದ್ದ. ಶುಲ್ಕ ಪಾವತಿಸಿದ ಅನಂತರ ಪ್ರೊಸೆಸ್ ಚಾರ್ಜ್, ಇನ್ಸುರೆನ್ಸ್ ಚಾರ್ಜ್, ಎನ್ಒಸಿ, ಆರ್ಬಿಐ ಟ್ಯಾಕ್ಸ್ ಎಂದು ನಂಬಿಸಿ ಹಣ ಕಟ್ಟುವಂತೆ ತಿಳಿಸಿದ್ದ. ಸತೀಶ್ ಜೈನ್ ಅವರು ನ. 3ರಿಂದ ನ. 11ರ ವರೆಗೆ ಹಂತ-ಹಂತವಾಗಿ 2,38,420 ರೂ. ಹಣವನ್ನು ಪಾವತಿಸಿ ವಂಚನೆಗೊಳಗಾಗಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮತದಾರರ ಪಟ್ಟಿಯ ಅಕ್ರಮ; ಇಬ್ಬರ ಅಮಾನತು: ಪರಿಶೀಲನೆಗೆ ಆಯೋಗ ನಿರ್ದೇಶನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.