ಉಡುಪಿ: ವೈದ್ಯರ ಹೆಸರಿನಲ್ಲಿ ಮಹಿಳೆಗೆ 6,91,000 ರೂ. ವಂಚನೆ
Team Udayavani, Dec 2, 2022, 7:05 AM IST
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮಹಿಳೆಗೆ ಮೋಸ ಮಾಡಿದ ಘಟನೆ ನಡೆದಿದೆ.
ಸೆಪ್ಟಂಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ವ್ಯಕ್ತಿ ತಾನು ಸ್ಕಾಟ್ಲೆಂಡ್ನಲ್ಲಿ ಡಾಕ್ಟರ್ ಎಂಬುವುದಾಗಿ ಪರಿಚಯಿಸಿಕೊಂಡು, ಅನಂತರ ವಾಟ್ಸಾಪ್ ಮೂಲಕ ಚಾಟಿಂಗ್ ನಡೆಸಿ ಸ್ನೇಹಿತರಾಗಿದ್ದರು. ನವೆಂಬರ್ ಮೊದಲನೇ ವಾರದಲ್ಲಿ ಆತನು ಕೊರಿಯರ್ ಪಾರ್ಸೆಲ್ ಮೂಲಕ ಗಿಫ್ಟ್ ಕಳುಹಿಸುವುದಾಗಿ ಮಹಿಳೆಯನ್ನು ನಂಬಿಸಿದ್ದು, ಬಳಿಕ ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಕಚೇರಿಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಪೌಂಡ್ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ.
ಅದನ್ನು ನಂಬಿದ ಮಹಿಳೆ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 6,91,000 ರೂ. ಪಾವತಿಸಿದ್ದಾರೆ. ಆದರೆ ಪಾರ್ಸೆಲ್ ನೀಡದೆ, ಹಣವನ್ನೂ ಹಿಂದಿರುಗಿಸದೆ ಆರೋಪಿಗಳು ಮೋಸ ಎಸಗಿದ್ದಾರೆ ಎಂದು ಮಹಿಳೆ ಸೆನ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್ಟಿ ಕಡಿತ?
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.