ಉಡುಪಿ: ಹಣ ಪಡೆದು ವಾಪಾಸು ನೀಡದೆ ವಂಚನೆ: ಆರೋಪಿಗೆ ಶಿಕ್ಷೆ
Team Udayavani, Aug 3, 2022, 7:26 PM IST
ಉಡುಪಿ: ಹಣ ಪಡೆದು ವಾಪಾಸು ನೀಡದೆ ವಂಚನೆ ಮಾಡಿದ ಆರೋಪಿಗೆ ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಉಡುಪಿಯ ಮೀನು ಮಾರುಕಟ್ಟೆ ಬಳಿಯ ನಿವಾಸಿ ಬಿ.ಅಬ್ದುಲ್ ಹಮೀದ್ ಸಾಹೇಬ್ ಎಂಬವರು ಈ ಹಿಂದೆ ತೆಂಕ ಎರ್ಮಾಳು ನಿವಾಸಿ ಅಬ್ದುಲ್ ಸಮದ್ ಖಾನ್ ಎಂಬಾತನಿಗೆ ಆತ ಕೇಳಿದಂತೆ 3 ಲ.ರೂ. ನೀಡಿದ್ದರು. ಬಳಿಕ ಈ ಹಣವನ್ನು ಅಬ್ದುಲ್ ಸಮದ್ ಖಾನ್ ಚೆಕ್ ರೂಪದಲ್ಲಿ ಬಿ.ಅಬ್ದುಲ್ ಹಮೀದ್ ಸಾಹೇಬ್‌ಗ ನೀಡಿದ್ದರು.
ಇದನ್ನೂ ಓದಿ: ಡೀಸೆಲ್ ಅನಿರೀಕ್ಷಿತ ಲಾಭ ತೆರಿಗೆ ಇಳಿಕೆ: ಕಚ್ಚಾ ತೈಲ ಶುಲ್ಕ ಹೆಚ್ಚಳ
ಆದರೆ ಚೆಕ್ ಬೌನ್ಸ್ ಆಗಿದೆ ಎಂದು ಬಿ.ಅಬ್ದುಲ್ ಹಮೀದ್ ಸಾಹೇಬ್ ಅವರು ನ್ಯಾಯಾಲಯದಲ್ಲಿ ಜು.19ರಂದು ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 3 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ. ಫಿರ್ಯಾದುದಾರರ ಪರವಾಗಿ ನ್ಯಾಯವಾದಿ ಮಹಮ್ಮದ್ ಇಕ್ಬಾಲ್ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.