ಆಪ್ತರಕ್ಷಕ ಜನನಿ ಕನ್ನಡ  ಸಂಘದ ಉಚಿತ ಆ್ಯಂಬುಲೆನ್ಸ್‌ ಸೇವೆ


Team Udayavani, Oct 27, 2017, 7:35 AM IST

ambulance.jpg

ಕೋಟ: ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ  ಸೇವೆ ನೀಡುವ ಸಲುವಾಗಿ ರಾಜ್ಯದಲ್ಲಿ  108 ಎನ್ನುವ ಆ್ಯಂಬುಲೆನ್ಸ್‌ ಸೇವೆಯನ್ನು  ಸರಕಾರದ ಮೂಲಕ ನೀಡಲಾಗುತ್ತಿದೆ. ಆದರೆ ಈ ಸೇವೆ ಎಲ್ಲ ಕಡೆ ಸಮರ್ಪಕವಾಗಿ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಕೆಲವು ಕಡೆಗಳಲ್ಲಿ ಸಂಘ-ಸಂಸ್ಥೆಗಳೇ  ಸರಕಾರದ 108 ಮಾದರಿಯ ಉಚಿತ ಸೇವೆ ನೀಡುವುದನ್ನು ನಾವು ಕಾಣುತ್ತೇವೆ. ಅದೇ ರೀತಿ ಕೋಟ ಹೋಬಳಿಯ ಸಾೖಬ್ರಕಟ್ಟೆಯ  ಜನನಿ ಯುವ ಕನ್ನಡ ಸಂಘ ಎಂಬ ಸಂಘಟನೆ ಉಚಿತ ಆ್ಯಂಬುಲೆನ್ಸ್‌ ಸೇವೆ ಆರಂಭಿಸಿ ಯಶಸ್ವಿಯಾಗಿದೆ.

ಸರಕಾರದಿಂದ ಸೌಲಭ್ಯ ಸಿಗದಿದ್ದಾಗ ತಾವೇ ಸೇವೆಗೆ ನಿಂತರು
 ಗ್ರಾಮೀಣ ಪ್ರದೇಶವಾದ ಸಾೖಬ್ರಕಟ್ಟೆ ಸುತ್ತ-ಮುತ್ತ ಯಾವುದೇ ಅವಘಡಗಳು ನಡೆದಾಗ  11 ಕಿ.ಮೀ ದೂರದ ಕೋಟ, 10 ಕಿ.ಮೀ. ದೂರದ ಬ್ರಹ್ಮಾವರ ಅಥವಾ 21 ಕಿ.ಮೀ. ದೂರದ ಕೊಕ್ಕರ್ಣೆಯಿಂದ ಆ್ಯಂಬುಲೆನ್ಸ್‌  ಬರಬೇಕಿತ್ತು ಹಾಗೂ ಇಲ್ಲಿ ಯಾವುದೇ ಖಾಸಗಿ ಆ್ಯಂಬುಲೆನ್ಸ್‌ ಸೇವೆ ಲಭ್ಯವಿರಲಿಲ್ಲ. ಆದ್ದರಿಂದ ಇಲ್ಲಿಗೆ  108 ಆ್ಯಂಬುಲೆನ್ಸ್‌  ಸೇವೆ ಒದಗಿಸಿ ಎಂದು ಜನನಿ ಯುವ ಕನ್ನಡ ಸಂಘಟನೆ ಹಲವು ಬಾರಿ ಈ ಭಾಗದ ಜನಪ್ರತಿನಿಧಿಗಳು ಆರೋಗ್ಯ ಸಚಿವರು, ಸರಕಾರಕ್ಕೆ  ಮನವಿ ಸಲ್ಲಿಸಿತ್ತು.  ಆದರೆ ಸಂಬಂಧಪಟ್ಟವರು ಮನವಿಯನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ಹೀಗಾಗಿ ಬೇಸರಗೊಂಡ ಸಂಘಟನೆಯವರು ತಾವೇ  ಉಚಿತ ಆ್ಯಂಬುಲೆನ್ಸ್‌ ಸೇವೆಯನ್ನು ನೀಡಲು ಮುಂದಾದರು.  ಹಲವು ಮಂದಿ ದಾನಿಗಳ ಸಹಕಾರ ಪಡೆದು ಕಳೆದ ವರ್ಷ 2016 ನವೆಂಬರ್‌ 1ರ  ರಾಜ್ಯೋತ್ಸವದಂದು ಸಂಘಟನೆಯ ದಶಮಾನೋತ್ಸವ ವೇದಿಕೆಯಲ್ಲಿ ಉಚಿತ ಆ್ಯಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿದರು.

70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನೆರವು
 ಇದೀಗ ಒಂದು ವರ್ಷ ಸೇವೆ ಸಲ್ಲಿಸಿರುವ  ಈ ಆ್ಯಂಬುಲೆನ್ಸ್‌ ಇದುವರೆಗೆ 70 ಪ್ರಕರಣಕ್ಕೂ ಹೆಚ್ಚು ನೆರವು ನೀಡಿದೆ. ಸಾೖಬ್ರಕಟ್ಟೆಯಿಂದ ಆರು ಕಿ.ಮೀ. ಆಸುಪಾಸಿನಲ್ಲಿ ಯಾವುದೇ ಅವಘಡಗಳು ನಡೆದಾಗ ಈ ಆ್ಯಂಬುಲೆನ್ಸ್‌ ಸೇವೆ ನೀಡುತ್ತದೆ.

ಸದಸ್ಯರಿಂದ ನಿಸ್ವಾರ್ಥ ಸೇವೆ 
ಈ  ಸೇವೆ ಯಶಸ್ವಿಯಾಗಿ ನಡೆಯಲು ಸಂಸ್ಥೆಯ ಸದಸ್ಯರ ಪಾತ್ರ ಮಹತ್ವದಿದೆ. ಯಾಕೆಂದರೆ ಅಪಘಾತಗಳು 
ನಡೆದಾಗ ಹಗಲು ರಾತ್ರಿ ಭೇದವಿಲ್ಲದ ಸದಸ್ಯರು  ಸೇವೆಗೆ ನಿಲ್ಲುತ್ತಾರೆ. ಇವರೇ ವಾಹನದ ಚಾಲಕರಾಗಿ, ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಕೆಲವೊಮ್ಮೆ ಸ್ಥಳೀಯರ ನೆರವನ್ನು ಕೂಡ ಪಡೆಯಲಾಗುತ್ತದೆ. ವಾಹನಕ್ಕೆ ಬೇಕಾಗುವ ಡೀಸಿಲ್‌ ವೆಚ್ಚವನ್ನು ದಾನಿಗಳಿಂದ ಸಂಗ್ರಹಿಸಲಾಗುತ್ತದೆ. ಮಿಕ್ಕುಳಿದ  ನಿರ್ವಹಣೆಯನ್ನು ಸಂಸ್ಥೆಯೇ ನಡೆಸುತ್ತದೆ.  ಪ್ರಸ್ತುತ ಸಂಘಟನೆಯ ಅಧ್ಯಕ್ಷರಾಗಿ ವಡ್ಡರ್ಸೆ ಗ್ರಾ.ಪಂ. ಸದಸ್ಯ ಹರೀಶ್‌ ಶೆಟ್ಟಿ, ಕಾರ್ಯದರ್ಶಿಯಾಗಿ ಆನಂದ ಪ್ರಗತಿ, ಗೌರವಾಧ್ಯಕ್ಷರಾಗಿ ರವೀಂದ್ರನಾಥ ಕಿಣಿ, ಖಜಾಂಚಿಯಾಗಿ  ಸುರೇಶ ಭಟ್‌ ಹಾಗೂ 25ಮಂದಿ ಸದಸ್ಯರಾಗಿ ಸೇವೆ ಸಲ್ಲಿಸ್ತುತಿದ್ದಾರೆ.

ಒಟ್ಟಾರೆ ಸಂಘಟನೆಯ ಈ ಸಮಾಜಮುಖೀ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಜನನಿ ಆ್ಯಂಬುಲೆನ್ಸ್‌  ಈ ಭಾಗದ ಆಪ್ತರಕ್ಷಕ ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ನಿರ್ವಹಣೆಗಾಗಿ ಯಕ್ಷಗಾನ ಆಯೋಜನೆ
ದಾನಿಗಳು ಎಷ್ಟೇ ಸಹಕಾರ ನೀಡಿದರೂ ಆ್ಯಂಬುಲೆನ್ಸ್‌ ನಿರ್ವಹಣೆ ಕಷ್ಟದ ಮಾತಾಗಿದೆ. ಹೀಗಾಗಿ ಅ.30ರಂದು ರಾತ್ರಿ ಸಾೖಬ್ರಕಟ್ಟೆಯಲ್ಲಿ ತೆಂಕು ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ  ಯಕ್ಷಗಾನ ಪ್ರದರ್ಶನ ಆಯೋಜಿಸುವ ಮೂಲಕ ವಾಹನದ ನಿರ್ವಹಣೆಗೆ ಧನ ಸಂಗ್ರಹ ಮಾಡಲು ಸಂಸ್ಥೆ ಮುಂದಾಗಿದೆ ಹಾಗೂ ನ. 1ರಂದು ಸಂಸ್ಥೆಯ ವತಿಯಿಂದ ರಾಜ್ಯೋತ್ಸವ, ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.

ನಮ್ಮ  ಸಂಸ್ಥೆ ಉಚಿತ ಆ್ಯಂಬುಲೆನ್ಸ್‌  ಸೇವೆಯ ಮೂಲಕ ಒಂದು ವರ್ಷದಲ್ಲಿ  70 ಪ್ರಕರಣಗಳಲ್ಲಿ 150ಕ್ಕೂ  ಹೆಚ್ಚು ಮಂದಿಗೆ ನೆರವಾಗಿದೆ. ಕೆಲವೊಮ್ಮೆ ನಮ್ಮ ತುರ್ತು ಸೇವೆಯಿಂದ ಜೀವ ಉಳಿದಿದೆ ಎಂದು ವೈದ್ಯರು ಹೇಳುವಾಗ ಹೆಮ್ಮೆ ಎನಿಸುತ್ತದೆ.  ಎಲ್ಲ ಕಡೆಗಳಲ್ಲೂ ಇದೇ ರೀತಿ ಸಮಾಜಮುಖೀ ಸೇವೆ ನಡೆದರೆ ಒಳ್ಳೆಯದು. ಇದೀಗ ಆ್ಯಂಬುಲೆನ್ಸ್‌ನ ನಿರ್ವಹಣೆಗಾಗಿ ಯಕ್ಷಗಾನ ಕಾರ್ಯಕ್ರಮ ಆಯೋಜಿಸಿದ್ದು ದಾನಿಗಳ ಸಹಕಾರ ಅಗತ್ಯವಿದೆ.
– ಹರೀಶ್‌ ಶೆಟ್ಟಿ, ಅಧ್ಯಕ್ಷರು ಜನನಿ ಯುವ ಕನ್ನಡ ಸಂಘ ಸಾೖಬ್ರಕಟ್ಟೆ

ಟಾಪ್ ನ್ಯೂಸ್

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

11

Udupi: ಜಿಲ್ಲಾಧಿಕಾರಿ ಕಚೇರಿಯಲ್ಲೇ ನೆಟ್‌ವರ್ಕ್‌ ಸಮಸ್ಯೆ!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.