ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವ “ಸ್ವಾವಲಂಬನಾ ಕೇಂದ್ರ’
Team Udayavani, Mar 18, 2019, 12:30 AM IST
ಕೊಲ್ಲೂರು: ಗ್ರಾಮದ ಏಳಿಗೆಯಲ್ಲಿ ಏನೆಲ್ಲಾ ಕಾರ್ಯಯೋಜನೆಗಳನ್ನು ರೂಪಿಸಬಹುದು, ಅನುಷ್ಠಾನಕ್ಕೆ ತರಬಹುದು ಎನ್ನುವುದಕ್ಕೆ ವಂಡ್ಸೆ ಗ್ರಾಮ ಪಂಚಾಯತ್ ಶುರು ಮಾಡಿದ ಸ್ವಾವಲಂಬನಾ ಕೇಂದ್ರವೇ ಸಾಕ್ಷಿ. ವಂಡ್ಸೆ ಪುಟ್ಟ ಪಂಚಾಯತ್. ಇಲ್ಲಿ ಕೈಗಾರಿಕೆ, ಉದ್ಯಮಗಳು ಇಲ್ಲ. ಆಸಕ್ತ ಮಹಿಳೆಯರಿಗೆ ಸೂಕ್ತ ಉದ್ಯೋಗವಕಾಶಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರು ಪಂಚಾಯತ್ ವತಿಯಿಂದ ಆರು ತಿಂಗಳ ಅವಧಿಯ ಹೊಲಿಗೆ ತರಬೇತಿ ಕೇಂದ್ರ, ಪರಿಸರಸ್ನೇಹಿ ಕೈ ಚೀಲಗಳ ತಯಾರಿ ಘಟಕವನ್ನು ತೆರೆಯುವ ಚಿಂತನೆ ಮಾಡಿದರು. ಇಲ್ಲಿನ ಪ್ರಸಿದ್ಧ ಎಸ್‌ಎಲ್‌ಆರ್‌ಎಂ ಘಟಕದ ಅಡಿಯಲ್ಲೇ ಈ ಕೇಂದ್ರ ಕಾರ್ಯಾಚರಿಸುತ್ತಿದೆ.
ಉಚಿತ ತರಬೇತಿ
ಡಿಸೆಂಬರ್‌ನಿಂದ ಇಲ್ಲಿ ಉಚಿತ ಹೊಲಿಗೆ ತರಬೇತಿ ಆರಂಭವಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 40 ಜನ ಮಹಿಳೆಯರು ತರಬೇತಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆಸಕ್ತಿ ತೋರಿಸಿದ್ದಾರೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಕೈ ಚೀಲಗಳ ತಯಾರಿಕೆಗೆ ಒತ್ತು ನೀಡಲಾಗುತ್ತದೆ. ತರಬೇತಿ ಪಡೆದ ನಂತರ ಹೊರಗಿನಿಂದ ಆರ್ಡರ್ ಪಡೆದು ಬಟ್ಟೆ ಹೊಲಿದು ಕೊಡುವ ಯೋಜನೆಯೂ ಇದೆ. ಬಂದ ಆದಾಯ ಎಸ್‌ಎಲ್‌ಆರ್‌ಎಂ ಘಟಕ ನಿರ್ವಹಣೆಗೆ ಬಳಸುವ ಯೋಜನೆ ಇದೆ. ಸ್ವಾವಲಂಬನಾ ಕೇಂದ್ರದಲ್ಲಿ ತರಬೇತಿ ಪಡೆದ ನಂತರ ಬಟ್ಟೆ ಬ್ಯಾಗ್ ತಯಾರಿಸಿ ದೇವಸ್ಥಾನ, ಅಂಗಡಿಗಳಿಗೆ ಸರಬರಾಜು ಮಾಡುವ ಯೋಜನೆಯೂ ಇದೆ. ತರಬೇತಿ ಬಳಿಕ ಪ್ರಮಾಣ ಪತ್ರ ನೀಡಲಾಗುತ್ತದೆ. ತರಬೇತಿಗೆ ವಂಡ್ಸೆ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮೊದಲ ತಂಡ ಭರ್ತಿಯಾಗಿದ್ದು ಉತ್ತಮವಾಗಿ ಮುನ್ನಡೆಯುತ್ತಿದೆ.
2.5 ಲಕ್ಷ ರೂ. ವ್ಯಯ
ಗ್ರಾಮ ಪಂಚಾಯತ್ ಸ್ವಾವಲಂಬನಾ ಕೇಂದ್ರದ ನಿರ್ಮಾಣಕ್ಕೆ ಸುಮಾರು 2.5ಲಕ್ಷ ವ್ಯಯಿಸಿದ್ದು, 10 ಟೈಲರಿಂಗ್ ಯಂತ್ರಗಳ ಖರೀದಿಸಿ ಸೂಕ್ತ ಪೀಠೊಪಕರಣಗಳ ಸೇರಿದಂತೆ ಸುಸಜ್ಜಿತ ತರಬೇತಿ ಕೇಂದ್ರವನ್ನಾಗಿ ನಿರ್ಮಾಣ ಮಾಡಲಾಗಿದೆ. ಆರು ತಿಂಗಳು ಇಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. 20 ಜನ ಅಭ್ಯರ್ಥಿಗಳ ಬ್ಯಾಚ್ ಮಾಡಿ ಬೆಳಗ್ಗೆ ಮತ್ತು ಮಧ್ಯಾಹ್ನ ತರಬೇತಿ ನೀಡಲಾಗುತ್ತಿದೆ.
ಸ್ವಾವಲಂಬನೆಗೆ ಪ್ರೇರೇಪಣೆ
ನಿರುದ್ಯೋಗಿ ಆಸಕ್ತ ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬನೆಗೆ ಪ್ರೇರೆಪಿಸುವುದು, ಪ್ಲಾಸ್ಟಿಕ್ ನಿಷೇಧಕ್ಕೆ ಪರ್ಯಾಯವಾಗಿ ಪರಿಸರಸ್ನೇಹಿ ಬ್ಯಾಗ್‌ಗಳ ತಯಾರಿ, ಹೊರಗಿನ ಆರ್ಡರ್‌ಗಳನ್ನು ಪಡೆದು ಬಟ್ಟೆ ಹೊಲಿದು ಕೊಡುವುದು, ತರಬೇತಿ ಖರ್ಚುವೆಚ್ಚಗಳನ್ನು ದಾನಿಗಳ ನೆರವಿನಿಂದ ಭರಿಸುವ ಯೋಚನೆಯೂ ಇದೆ. ಇದರಿಂದ ಬಂದ ಲಾಭಾಂಶವನ್ನು ಎಸ್.ಎಲ್.ಆರ್.ಎಂ ಘಟಕದ ನಿರ್ವಹಣೆಗೆ ಬಳಸಲಾಗುವುದು.
ಉದಯ ಕುಮಾರ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷರು
ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.