ಮಳೆಗಾಗಿ ಇಂದು ಉಡುಪಿಯಲ್ಲಿ ಕಪ್ಪೆ ಮದುವೆ !
Team Udayavani, Jun 8, 2019, 6:00 AM IST
ಸಾಂದರ್ಭಿಕ ಚಿತ್ರ
ಉಡುಪಿ: ಉಡುಪಿಯಲ್ಲಿ ಮತ್ತೂಮ್ಮೆ ಕಪ್ಪೆ ಮದುವೆಗೆ ‘ಕಲ್ಯಾಣ ಮಂಟಪ’ ಸಿದ್ಧಗೊಂಡಿದೆ !
ಮಳೆಯ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಅದರೊಂದಿಗೆ ಶನಿವಾರ ‘ಮಂಡೂಕ ಪರಿಣಯ'(ಕಪ್ಪೆ ಮದುವೆ) ನಡೆಸಲು ಸಿದ್ಧತೆ ನಡೆಯುತ್ತಿದೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನಾ ಸೇವಾ ಟ್ರಸ್ಟ್ ಈ ಬಾರಿಯ ಕಪ್ಪೆ ಮದುವೆ ಆಯೋಜನೆ ಮಾಡಿವೆ. ಮದುವೆ ಜೂ.8ರ ಮಧ್ಯಾಹ್ನ 12.05ಕ್ಕೆ ಕಿದಿಯೂರು ಹೊಟೇಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ನಿಗದಿಯಾಗಿದೆ. ಮದುವೆ ದಿಬ್ಬಣ ಬೆಳಗ್ಗೆ 11ಕ್ಕೆ ಮಾರುತಿ ವೀಥಿಕಾದಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಹೊರಟು ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಕಲ್ಯಾಣ ಮಂಟಪಕ್ಕೆ ಸಾಗಲಿದೆ.
ಕೀಳಿಂಜೆಯ ವಧು, ಕಲ್ಸಂಕದ ವರ
ಹೆಣ್ಣು ಕಪ್ಪೆಯನ್ನು ಕೊಳಲಗಿರಿ ಕೀಳಿಂಜೆಯಿಂದ ಹಾಗೂ ಗಂಡು ಕಪ್ಪೆಯನ್ನು ಉಡುಪಿ ಕಲ್ಸಂಕದಿಂದ ತರಲಾಗಿದೆ. ಹೆಣ್ಣು ಕಪ್ಪೆಗೆ ‘ವರ್ಷಾ’ ಎಂದೂ, ಗಂಡು ಕಪ್ಪೆಗೆ ‘ವರುಣ’ ಎಂದೂ ನಾಮಕರಣ ಮಾಡಲಾಗಿದೆ. ‘ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ’ ಎಂಬ ಒಕ್ಕಣೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿದೆ.
ಕಪ್ಪೆಗಾಗಿ ಹುಡುಕಾಟ
ಕಪ್ಪೆಗಳ ಸಂತತಿ ಕಡಿಮೆಯಾಗಿರುವುದರಿಂದ ನಿತ್ಯಾನಂದ ಒಳಕಾಡು ಅವರು ಕಪ್ಪೆಗಳನ್ನು ತರಲು ಒಂದು ವಾರಗಳ ಕಾಲ ಹುಡುಕಾಟ ನಡೆಸಿದ್ದಾರೆ. ಅನಂತರ ಅವುಗಳನ್ನು ಪ್ರಸಿದ್ಧ ಆಸ್ಪತ್ರೆಯ ಲ್ಯಾಬ್ನಲ್ಲಿ ಪರೀಕ್ಷೆಗೊಳಪಡಿಸಿ ಗಂಡು ಯಾವುದು, ಹೆಣ್ಣು ಯಾವುದು ಎಂಬುದನ್ನು ಗುರುತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.