ಮಾವಿನಹಣ್ಣು ಅಗ್ಗ, ಮುಸುಂಬಿ ದುಬಾರಿ


Team Udayavani, Jun 20, 2018, 2:10 AM IST

fruits-600.jpg

ಉಡುಪಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮಾರುಕಟ್ಟೆಗೆ ತರಕಾರಿಗಳ ಪೂರೈಕೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಯವಾಗಿದೆ. ಮಳೆಗಾಲ ವಾದ್ದರಿಂದ ಮಾವಿನಹಣ್ಣಿನ ಬೆಲೆ ಕಡಿಮೆಯಾದರೆ, ಮುಸುಂಬೆ ಬೆಲೆ ದುಬಾರಿಯಾಗಿದೆ.

ಅಗ್ಗವಾದ ಮಾವಿನಹಣ್ಣು
ಬೇಸಗೆಯ ಆರಂಭದಲ್ಲಿ 120ಕ್ಕೆ ಮಾರಾಟವಾಗುತ್ತಿದ್ದ ಮಲ್ಲಿಕ ಅನಂತರ ಕೆಜಿ 1ಕ್ಕೆ 160 – 180 ರೂ.ಗೆ ಮಾರಾಟವಾಗುತ್ತಿತ್ತು. ಇದೀಗ 80 – 100 ರೂ.ಗೆ ದೊರೆಯುತ್ತಿದೆ. 160 – 180 ರೂ. ಇದ್ದ ಮಲಗೋವಾ ಈಗ 100 – 120 ರೂ., 100 – 120 ರೂ. ದರವಿದ್ದ ಚಿತ್ತೂರು ನೀಲಂ ಈಗ 50- 80 ರೂ.ಗೆ ಸಿಗುತ್ತಿದೆ. ಮಲ್ಲಿಕ, ಮಲಗೋವಾ ಮಾವಿನಹಣ್ಣು ಇನ್ನು ಸ್ವಲ್ಪ ದಿನವಷ್ಟೇ ಪೂರೈಕೆಯಾಗಲಿದ್ದು, ಅನಂತರ ಸುಮಾರು 2 ತಿಂಗಳವರೆಗೆ ನೀಲಂ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ. ಹಣ್ಣು ಹಂಪಲುಗಳಲ್ಲಿ ಖರ್ಜೂರ ಆವಕವಾದರೆ, 50- 60 ರೂ.ಗೆ ಸಿಗುತ್ತಿದ್ದ ಮುಸುಂಬೆ ಈಗ 100 – 110 ರೂ. ದರವಾಗಿದೆ. ಬಾಳೆಹಣ್ಣು ಸಾಕಷ್ಟು ದೊರೆಯುತ್ತದೆ.

ತರಕಾರಿಗಳಲ್ಲಿ ಬೀನ್ಸ್‌, ಹೀರೆಕಾಯಿ, ದೊಣ್ಣೆ ಮೆಣಸು, ಸೀಮೆ ಬದನೆ ಇತ್ಯಾದಿಗಳ ದರ ತುಸು ಹೆಚ್ಚಳವಾಗಿದೆ. ಸ್ಥಳಿಯ ಕೃಷಿಕರಿಂದ ಬರುವ ತರಕಾರಿಗಳು ಕಡಿಮೆಯಾದ ನೆಲೆಯಲ್ಲಿ ಕೆಲವೊಂದು ತರಕಾರಿಗಳ ಬೆಲೆ ಏರಿಕೆಯಾಗಿದೆ.

ಚೈನೀಸ್‌ ತರಕಾರಿ 
200 ರೂ.ಗೆ ಮಾರಾಟವಾಗುತ್ತಿದ್ದ ಬ್ರೊಕೋಲಿ ಈಗ 150 ರೂ., ಲೈಟ್ಟಿಸ್‌ ಮತ್ತು ಸೆಲೆರಿ 120 ರೂ., ಚೈನೀಸ್‌ ಕ್ಯಾಬೇಜ್‌ 80 ರೂ., ರೆಡ್‌ ಮತ್ತು ಯೆಲ್ಲೋ ಕ್ಯಾಪ್ಸಿಕಂ 100 ರೂ., ಬೇಬಿ ಪೊಟ್ಯಾಟೋ 50 ರೂ., ಚೆರಿ ಟೊಮ್ಯಾಟೋ ಪ್ಯಾಕ್‌ ಗೆ 40 ರೂ., ಜುಕುನಿ 120, ಐಸ್‌ಪರ್ಕ್‌ 120 ರೂ., ಚೈನೀಸ್‌ ಕುಕುಂಬರ್‌ 60 ರೂ., ರೆಡ್‌ ಕ್ಯಾಬೇಜ್‌ 60 ರೂ. ಹೀಗೆ ಸುಮಾರು 50ಕ್ಕೂ ಹೆಚ್ಚು ಬಗೆಯ ಚೈನೀಸ್‌ ತರಕಾರಿಗಳು ದೊಡ್ಡ ದೊಡ್ಡ ಮಳಿಗೆಗಳಲ್ಲಿ ಮಾತ್ರ ಸಿಗುತ್ತವೆ. ಗೋವಾ ಮಶ್ರೂಂ (ಅಣಬೆ), ಬೇಬಿ ಕಾರ್ನ್ಗೆ ಉಡುಪಿಯಲ್ಲಿ ಸಾಕಷ್ಟು ಬೇಡಿಕೆಯಿದೆ.

ಪೂರೈಕೆ ಆಧಾರದಲ್ಲಿ ದರ ನಿಗದಿ 
ಮಳೆಗಾಲವಾದ್ದರಿಂದ ವ್ಯಾಪಾರ ಕಡಿಮೆಯಿದೆ. ದಿನದಿಂದ ದಿನಕ್ಕೆ ತರಕಾರಿಗಳ ಬೆಳೆ, ಪೂರೈಕೆ ಆಧಾರದಲ್ಲಿ ದರ ನಿಗದಿಪಡಿಸಲಾಗುತ್ತದೆ. ಎಲವೊಂದು ತರಕಾರಿಗಳಿಗೆ ಬೆಲೆ ಕಡಿಯಾದರೆ, ಕೆಲವೊಂದಕ್ಕೆ ದರ ಹೆಚ್ಚಾಗಿದೆ. ತರಕಾರಿ ಬೆಳೆಯುವಲ್ಲಿ ಮಳೆ ವಿಪರೀತವಿದ್ದರೆ, ಯಾವಾಗಲೂ ತರುವ ಲಾರಿ, ವ್ಯಾನ್‌ ಸಿಗದಿದ್ದರೆ ದರದಲ್ಲಿ ವ್ಯತ್ಯಾಸಗಳಾಗುತ್ತವೆ. ಬಸ್‌ ಮೂಲಕ ತರಕಾರಿ ಪೂರೈಸಿದರೆ ದರ ಹೆಚ್ಚಳವಾಗುತ್ತದೆ.
– ಅಬ್ದುಲ್‌ ರಹೀಂ, ವ್ಯಾಪಾರಿ, ವಿಶ್ವೇಶ್ವರಯ್ಯ ತರಕಾರಿ/ಹಣ್ಣುಹಂಪಲು ಮಾರುಕಟ್ಟೆ ಉಡುಪಿ

ಸ್ಪರ್ಧಾತ್ಮಕ ದರದಲ್ಲಿ ಮಾರಾಟ 
ದೊಡ್ಡ ಮಳಿಗೆಗಳು ಸ್ಪರ್ಧಾತ್ಮಕ ದರದಲ್ಲಿ ತರಕಾರಿ/ಹಣ್ಣು ಹಂಪಲುಗಳನ್ನು ಮಾರಾಟ ಮಾಡುವುದರಿಂದ ಸಾಮಾನ್ಯ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ದೊರೆಯುತ್ತವೆ. ಸುಮಾರು ಶೇ. 40 – 50ರ ವರೆಗೂ ದರಗಳಲ್ಲಿ ವ್ಯತ್ಯಾಸಗಳಾಗುತ್ತವೆ.
– ಶ್ರೀಕಾಂತ್‌ ಹೆಗ್ಡೆ, ತರಕಾರಿ/ಹಣ್ಣು ಪೂರೈಕೆದಾರರು ಉಡುಪಿ.

ಟಾಪ್ ನ್ಯೂಸ್

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.