ಹತಾಶೆಯಿಂದ ಪಕ್ಷೇತರಳಾಗಿ ಸ್ಪರ್ಧಿಸಿದೆ; ಗುರಿ ಸಾಧಿಸಿದ ತೃಪ್ತಿ ಇದೆ


Team Udayavani, Apr 19, 2018, 6:00 AM IST

Gladis-D-almeda.jpg

ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯರಾಗಿದ್ದು 23ರ ಹರೆಯದಲ್ಲೇ ಜನಪ್ರತಿನಿಧಿಯಾಗಿ ಆಯ್ಕೆಯಾಗಿ, 2004ರಲ್ಲಿ ಪಕ್ಷ ಮತ್ತು ಪಕ್ಷದ ಶಾಸಕರ ನಡೆಯಿಂದ ಬೇಸತ್ತು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ತಾನೂ ಸೋಲುಂಡು; ಕಾಂಗ್ರೆಸ್ಸನ್ನೂ ಸೋಲಿಸಿದವರು ಗ್ಲಾಡಿಸ್‌ ಡಿ’ ಅಲ್ಮೇಡಾ. ಮಾತಿನ ಮತದಲ್ಲಿ ಗ್ಲಾಡಿಸ್‌ ವಿಚಾರಗಳನ್ನು ಹಂಚಿಕೊಂಡಿದ್ದಾರೆ…

ರಾಜಕೀಯಕ್ಕೆ ಬಂದ ಬಗೆ …?
     ಎಳವೆಯಲ್ಲೇ ನನಗೆ ರಾಜಕೀಯದತ್ತ ಒಲವಿತ್ತು.  23ನೇ ವರ್ಷದಲ್ಲಿ ಮಂಡಲ ಪಂಚಾಯತ್‌ ಸದಸ್ಯೆಯಾಗಿ ಆಯ್ಕೆಯಾಗಿದ್ದು, ಬಳಿಕ ಗ್ರಾ.ಪಂ. ಸದಸ್ಯೆಯಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. 2000ನೇ ಇಸವಿಯಲ್ಲಿ ಜಿ.ಪಂ. ಸದಸ್ಯೆ ಯಾಗಿ ಆಯ್ಕೆಯಾದೆ. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡೆ.ಶಾಸಕ ವಸಂತ ವಿ. ಸಾಲ್ಯಾನ್‌ ಅವರಿಗೆ ಮೊದಲ ಬಾರಿಗೆ ಸೋಲಿನ ರುಚಿಯುಣಿಸಿದ ಸಮಾಧಾನ ನನಗಿದೆ. ಬಳಿಕ 2005ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡೆ. ಅನಂತರ ಎಲ್ಲೂರು ಜಿಲ್ಲಾ ಪಂಚಾಯತ್‌ ಕ್ಷೇತ್ರದಿಂದ ಸ್ಪರ್ಧಿಸಿ ಜಿ.ಪಂ. ಸದಸ್ಯೆಯಾಗಿ, ಜಿ.ಪಂ. ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದೇನೆ.

ಪಕ್ಷೇತರಳಾಗಿ ಸ್ಪರ್ಧಿಸಲು ಕಾರಣ ?
      ಕಾಪು ಶಾಸಕರ ಮೇಲಿನ ಬೇಸರ, ಕೋಪ ಮತ್ತು ಹತಾಶೆಯಿಂದಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸು ವಂತಾಯಿತು. ಗೆಲ್ಲುವ ಉದ್ದೇಶದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದಲ್ಲ. ನನ್ನ ಗುರಿಯಿದ್ದದ್ದು ಸಾಲ್ಯಾನ್‌ರನ್ನು ಸೋಲಿಸುವುದಷ್ಟೇ ಆಗಿತ್ತು. ಗುರಿಸಾಧಿಸಿದ್ದೇನೆ. ಅಂದಿನ ರಾಜಕೀಯ ದ್ವೇಷ ಸಾಧನೆಯ ಮನಃಸ್ಥಿತಿ ಇಂದು ದೂರವಾಗಿದೆ. ನಾವೆಲ್ಲರೂ ಈಗ ಜತೆಗಿದ್ದೇವೆ. 
 
ಅಂದಿನ ನಿಮ್ಮ ಮನಃಸ್ಥಿತಿ ಹೇಗಿತ್ತು ?
     ಪಕ್ಷೇತರಳಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಹಲವು ರೀತಿಯ ಮಾನಸಿಕ ವೇದನೆಗಳನ್ನು ಎದುರಿಸ ಬೇಕಾಯಿತು. ಆ ಸಂದರ್ಭದಲ್ಲಿ ನನ್ನ ಕೈ ಹಿಡಿದಿದ್ದು ಬಿಜೆಪಿ. ಅವರು ಕರೆದು ಜಿ.ಪಂ. ಟಿಕೆಟ್‌ ಕೊಟ್ಟರು. ಗೆದ್ದ ಬಳಿಕ ಮೀಸಲಾತಿಯ ಕೃಪೆಯಿಂದಾಗಿ ಕಾಂಗ್ರೆಸ್‌ ಕೈಯಲ್ಲಿದ್ದ ಜಿ.ಪಂ. ಆಡಳಿತವನ್ನು ಬಿಜೆಪಿಗೆ ತಂದುಕೊಟ್ಟು ಪಕ್ಷದ ಋಣ ತೀರಿಸುವ ಕೆಲಸ ಮಾಡಿದ್ದೇನೆ.

ರಾಜಕೀಯ ಜೀವನ ತೃಪ್ತಿ ನೀಡಿದೆಯೇ?
      ನಾನೆಂದೂ ಹಣ ಮತ್ತು ಜಾತಿ ಬಲದ ರಾಜಕೀಯ ಮಾಡಿಲ್ಲ. ರಾಜಕೀಯ ಇರುವುದು ನಾಯಕತ್ವಕ್ಕಾಗಿ. ಜನರ ಸೇವೆ ಮಾಡುವುದಕ್ಕಾಗಿ. ಅದೇ ಉದ್ದೇಶವನ್ನು ಇಟ್ಟುಕೊಂಡು ಜನಸೇವೆ ಮಾಡಿದ್ದೇನೆ. ಸುದೀರ್ಘ‌ ಅವಧಿಯ ರಾಜಕೀಯ ಜೀವನದಲ್ಲಿ ಎರಡು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಮಹತ್ವದ ಹುದ್ದೆಗಳನ್ನು ಅನುಭವಿಸಿದ್ದರೂ ಎಲ್ಲೂ ಹಣ ಮತ್ತು ಜಾತಿ ಬಲದ ರಾಜಕೀಯ ಮಾಡಿಲ್ಲ. ರಾಜಕೀಯದಲ್ಲಿ ನಾನು ಸಂತೃಪ್ತಿಯನ್ನು ಹೊಂದಿದ್ದೇನೆ.ಕಾಂಗ್ರೆಸ್‌ ಪಕ್ಷದಲ್ಲಿರು ವಾಗ ಮಾನಸಿಕ ಹಿಂಸೆಯಾಗುತ್ತಿತ್ತು. ರಾಜಕೀಯ ತಂತ್ರಗಾರಿಕೆಗೆ ನಮ್ಮನ್ನು ಬಲಿಪಶುಗಳನ್ನಾಗಿಸುತ್ತಿದ್ದರು. ವ್ಯಕ್ತಿಗತವಾಗಿ ನೋವುಂಡಿದ್ದೇನೆ. ಬಿಜೆಪಿಯಲ್ಲೀಗ ಸಂತೃಪ್ತಳಾಗಿದ್ದೇನೆ.

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Karkala: ಲೈಸೆನ್ಸ್‌ ಇಲ್ಲದ ವ್ಯಾಪಾರಕ್ಕೆ ಕಡಿವಾಣ

9-

Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

8

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

7

Kundapura: ಮೆಟ್ಟಿಲು ಹತ್ತುವಾಗಲೇ ಶುಚಿಯಾಗುವ ಶೌಚಾಲಯ!

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.