ಸಂಪೂರ್ಣ ಹದಗೆಟ್ಟ ಬೋಳ ಅಂಬರಾಡಿ ರಸ್ತೆ
Team Udayavani, Jul 8, 2017, 3:45 AM IST
ಬೆಳ್ಮಣ್: ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳ ಅಂಬರಾಡಿಯಿಂದ ಸಚ್ಚೇರಿಪೇಟೆ ಸಾಗುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರದ ಜತೆ ನಡದೆದಾಡುವುದಕ್ಕೂ ಅಯೋಗ್ಯವೆನಿಸಿದೆ.
ವಾಹನ ಓಡಾಟ ಕಷ್ಟ
ಈ ರಸ್ತೆಯಲ್ಲಿ ಅಲ್ಲಲ್ಲಿ ಜಲ್ಲಿ ಟಾರುಗಳು ಕಿತ್ತು ಹೋಗಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದ್ದು ವಾಹನ ಓಡಾಟ ನಡೆಸುವುದೇ ಕಷ್ಟ ಸಾಧ್ಯವಾಗಿದೆ.ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಈ ಭಾಗದ ಜನ ಕಾಲ್ನಡಿಗೆಯಲ್ಲಿ ಸಂಚಾರ ನಡೆಸುತ್ತಿದ್ದಾರಾದರೂ ಅದೂ ಸಂಕಟವೆನಿಸಿದೆ.
ಡಾಮರೂ ಇಲ್ಲ
ಈ ರಸ್ತೆಗೆ ಡಾಮರೀಕರಣಗೊಂಡು ಹಲವು ವರ್ಷಗಳು ಕಳೆದಿದ್ದು ಆ ಬಳಿಕ ಮತ್ತೆ ತೇಪೆ ಹಾಕುವ ಕಾಮಗಾರಿ ಈವರೆಗೂ ನಡೆದಿಲ್ಲ.ರಸ್ತೆಯುದ್ದಕ್ಕೂ ಭಾರೀ ಗಾತ್ರದ ಹೊಂಡಗಳಿದ್ದು ಆ ಗುಂಡಿಗಳಲ್ಲಿ ವಾಹನ ಚಲಾಯಿಸಬೇಕಾಗಿದೆ.ರಸ್ತೆಗೆ ಹಾಕಲಾದ ಜಲ್ಲಿ ಟಾರು ಎಲ್ಲವೂ ಎದ್ದು ಹೋಗಿದ್ದು ಬರೀ ಮಣ್ಣು ಹಾಗೂ ಕೆಸರು ತುಂಬಿ ಹೋಗಿದೆ.
ಪೇಟೆಗೆ ಹತ್ತಿರದ ಮಾರ್ಗ
ಬೋಳ ಪರಿಸರದ ಗ್ರಾಮಸ್ಥರು ಈ ಪಂಚಾಯತ್ ರಸ್ತೆಯ ಮೂಲಕ ಹಾದು ಹೋಗಿ ಸಚ್ಚೇರಿಪೇಟೆಯನ್ನು ತಲುಪಲು ಇದು ಹತ್ತಿರದ ಮಾರ್ಗವಾದ ಕಾರಣ ಹೆಚ್ಚಿನ ಗ್ರಾಮಸ್ಥರು ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಈ ರಸ್ತೆಯ ದುರವಸ್ಥೆಯ ಪರಿಣಾಮವಾಗಿ ಗ್ರಾಮಸ್ಥರು ಸುಮಾರು 7-8 ಕಿ.ಮೀ ಕಾಲು ನಡಿಗೆಯಲ್ಲೇ ಸಂಚಾರ ನಡೆಸುವಂತಾಗಿದೆ.ಆದರೆ ನಡೆದಾಡಲೂ ಆಗದೆ ಪರದಾಡಬೇಕಾಗಿದೆ.
ಬಾಡಿಗೆ ವಾಹನಕ್ಕೆ ಬೇಡಿಕೆ
ಈ ರಸ್ತೆಯಲ್ಲಿ ಬಸ್ಸು ಸೌಕರ್ಯವಿಲ್ಲದ ಪರಿಣಾಮ ಈ ಭಾಗದ ರಸ್ತೆಯಲ್ಲಿ ಸಾಗುವ ಮಂದಿ ಹೆಚ್ಚಾಗಿ ಬಾಡಿಗೆ ವಾಹನಗಳನ್ನು ಅವಲಂಬಿಸಿದ್ದು ರಿಕ್ಷಾವಾಲಾರಿಗೆ ಬಹು ಬೇಡಿಕೆ.ರಸ್ತೆ ಹದಗೆಟ್ಟ ಪರಿಣಾಮ ಯಾವುದೇ ಬಾಡಿಗೆ ವಾಹನಗಳು ರಿಕ್ಷಾಗಳು ಬೇಕಾದರೆ ಕಾಡಿ ಬೇಡಿ ಕರೆತರಬೇಕಾದ ಸ್ಥಿತಿಯೊದಗಿದೆ ಎಂಬುದುಗ್ರಾಮಸ್ಥರ ಅಳಲು.
ದ್ವಿಚಕ್ರಗಳ ಸರ್ಕಸ್
ಗ್ರಾಮಸ್ಥರು ಈ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಬಳಸಿಕೊಳ್ಳುತ್ತಿದ್ದುನ ಕೆಟ್ಟ ರಸ್ತೆಯ ಪರಿಣಾಮ ಇಲ್ಲಿ ಅಪಘಾತ ನಿರಂತರವಾಗಿದೆ.ಬೃಹತ್ ಗಾತ್ರದ ಹೊಂಡದಲ್ಲಿ ಎದ್ದು ಬಿದ್ದು ಏಳುವ ಸನ್ನಿವೇಶ ಇಲ್ಲಿ ಮಾಮೂಲು.ಡಾಮಾರು ಕಳೆದುಕೊಂಡ ರಸ್ತೆಯ ಜಲ್ಲಿಯ ಹೊಡೆತಕ್ಕೆ ಟಯರ್‌ಗಳು ಹೊಡೆದ ನಿದರ್ಶನಗಳೂ ಇವೆ.ಪಡೆದ ಬಾಡಿಗೆಗಿಂತ ಹೆಚ್ಚಿನ ವೆಚ್ಚವನ್ನು ಗ್ಯಾರೇಜ್ ಗಳಿಗೆ ಹಾಕುವಂತಾಗಿದೆ ಎಂದು ವಾಹನ ಚಾಲಕರ ಅಳಲು.
ಇಲಾಖೆ ಸ್ಪಂದಿಸಬೇಕಾಗಿದೆ
ಈ ರಸ್ತೆಯ ದುರವಸ್ಥೆಯ ಬಗ್ಗೆ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಹಾಗೂ ಇತರೆಡೆಗಳಲ್ಲಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು ದುರಸ್ಥಿಯ ಪ್ರಯತ್ನ ನಡೆಯುತ್ತಿದೆಯೆಂಬ ಉತ್ತರ ಕೇಳಿ ಬರುತ್ತಿದೆ.ಕೂಡಲೇ ಅ ಕಾರಿಗಳು ಜನಪ್ರತಿನಿ ಗಳು ಈ ರಸ್ತೆಯ ಕುರಿತು ಕ್ರಮ ಕೈಗೊಂಡು ಸಂಪೂರ್ಣ ಡಾಮರೀಕರಣ ಇಲ್ಲವೇ ರಸ್ತೆಯ ಹೊಂಡವನ್ನು ಮುಚ್ಚುವ ಕಾರ್ಯಕ್ಕೆ ಮನಮಾಡಬೇಕಾಗಿದೆ.ಅಪಘಾತಗಳಿಗೆ ಎಡೆ ಮಾಡಿಕೊಡುವ ಈ ರಸ್ತೆ ಶೀಘ್ರ ದುರಸ್ಥಿಯನ್ನು ಕಾಣಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್.ಆರ್. ಗವಿಯಪ್ಪ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.