ಮತ್ತಷ್ಟು ಅಂತರ್ಜಲ ಕುಸಿತ ಭೀತಿ; ಹೆಚ್ಚಾಗಲಿ ಜಾಗೃತಿ
Team Udayavani, Jan 29, 2019, 12:50 AM IST
ಉಡುಪಿ: ಸಮುದ್ರ, ನದಿ, ಹಳ್ಳ, ಕೆರೆ-ಬಾವಿಗಳು ಆವರಿಸಿದ್ದರೂ ಉಡುಪಿ ತಾಲೂಕಿನ ಹಲವೆಡೆ ಪ್ರತಿ ವರ್ಷ 2-3 ತಿಂಗಳು ಕಾಲ ಕುಡಿಯುವ ನೀರಿನ ಕೊರತೆ ಎದುರಾಗುತ್ತದೆ. ಮಳೆ ಪ್ರಮಾಣ ಕಡಿಮೆಯಾಗಿಲ್ಲವಾದರೂ ಅಂತರ್ಜಲದ ಮಟ್ಟ ಕುಸಿಯುತ್ತಿದೆ.
ಹಿರಿಯಡಕ ಬಜೆಯಲ್ಲಿ ಸ್ವರ್ಣಾ ನದಿಗೆ ನಿರ್ಮಿಸಲಾಗಿ ರುವ ಅಣೆಕಟ್ಟಿನಿಂದ ದಿನವೊಂದಕ್ಕೆ 24 ಎಂಎಲ್‌ಡಿ ನೀರನ್ನು ಪಂಪ್ ಮಾಡಿ ನಗರ ಸಭೆಯ 35 ವಾರ್ಡ್‌ಗಳು, ಅಕ್ಕ ಪಕ್ಕದ 6 ಗ್ರಾ.ಪಂ.ಗಳಿಗೆ ಪೂರೈಸಲಾಗುತ್ತದೆ. ಆದರೆ ಬೇಸಗೆಯಲ್ಲಿ ಸ್ವರ್ಣೆ ಬತ್ತುವುದ ರಿಂದ ನೀರಿನ ಬರ ಆರಂಭವಾಗುತ್ತದೆ. 25 ಗ್ರಾ.ಪಂ.ಗಳಲ್ಲಿ ವರ್ಷಂಪ್ರತಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ.
ಶಾಶ್ವತ ಪರಿಹಾರ ಯತ್ನ
ನಗರಸಭೆ ವ್ಯಾಪ್ತಿಯ ಲ್ಲಿಯೂ ನೀರಿನ ಬೇಡಿಕೆ ಹೆಚ್ಚುತ್ತಿದೆ. ಅಷ್ಟು ಪ್ರಮಾಣದ ನೀರು ಸ್ವರ್ಣೆಯಿಂದ ವರ್ಷವಿಡೀ ದೊರೆಯುವುದಿಲ್ಲ. ವಾರಾಹಿಯಿಂದ ಉಡುಪಿಗೆ 38 ಕಿ.ಮೀ. ಉದ್ದದ ಪೈಪ್‌ಲೈನ್ ಅಳವಡಿಸಿ ಕುಡಿಯುವ ನೀರು ಪೂರೈಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 300 ಕೋ.ರೂ. ವೆಚ್ಚದ ಈ ಯೋಜನೆ 36 ತಿಂಗಳುಗಳಲ್ಲಿ (2018ರ ನವೆಂಬರ್‌ನಿಂದ ಮೊದಲ್ಗೊಂಡು) ಪೂರ್ಣಗೊಳ್ಳ ಲಿದೆ. ಪೈಪ್‌ಲೈನ್ ಹಾದು ಹೋಗಲಿರುವ ಗ್ರಾ.ಪಂ.ಗಳಿಗೂ ಈ ಯೋಜನೆಯಿಂದ ನೀರು ದೊರೆಯಲಿದೆ.
ಬಹುಗ್ರಾಮ ಯೋಜನೆ ಕುಂಠಿತ
ಚಾಂತಾರು, ಹೆಜಮಾಡಿ ಮತ್ತು ತೆಂಕನಿಡಿಯೂರಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಅಕ್ಕಪಕ್ಕದ ಹಲವಾರು ಗ್ರಾ.ಪಂ.ಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸರಕಾರದ ಮಂಜೂರಾತಿ ದೊರೆತು ಹಲವು ವರ್ಷಗಳಾಗಿವೆ. ಆದರೆ ಅನಂತರ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಇದು ಅನುಷ್ಠಾನಗೊಂಡರೆ ತಾಲೂಕಿನ ಶೇ. 60ರಿಂದ 70ರಷ್ಟು ಪ್ರದೇಶಕ್ಕೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಇದೆ.
ಕಳೆದ ವರ್ಷ 61.45 ಲ.ರೂ. ವೆಚ್ಚದಲ್ಲಿ ಟ್ಯಾಂಕರ್ ನೀರು ಪೂರೈಸಲಾಗಿದೆ. ತಾಲೂಕಿನಲ್ಲಿ 4-5 ವರ್ಷಗಳಿಂದೀಚೆಗೆ ಟ್ಯಾಂಕರ್ ನೀರು ಪೂರೈಕೆ ನಡೆಯುತ್ತಿದೆ.
ಬಾವಿ ನಿರ್ಮಾಣಕ್ಕೆ ಆದ್ಯತೆ
ಹಿಂದೆಲ್ಲಾ ಕೊಳವೆ ಬಾವಿಯಿಂದ ಕನಿಷ್ಠ 20 ವರ್ಷ ನೀರು ದೊರೆಯುತ್ತಿತ್ತು. ಈಗ 5 ವರ್ಷಕ್ಕೆ ಬತ್ತಿ ಹೋಗುತ್ತಿವೆ. ತಾಲೂಕಿನಲ್ಲಿ ಈ ವರ್ಷದ ಮಾರ್ಚ್ ಒಳಗೆ 18 ತೆರೆದ ಬಾವಿಗಳನ್ನು ನಿರ್ಮಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ತಾಲೂಕಿನಲ್ಲಿ ಉಪ್ಪುನೀರಿನ ಸಮಸ್ಯೆಯೂ ಇದೆ. ಅಂಥ ಕಡೆ ಸಣ್ಣ ಬಾವಿ ನಿರ್ಮಾಣ ಮಾಡಲಾಗುತ್ತಿದೆ.
– ಸಹಾಯಕ ಕಾರ್ಯನಿರ್ವಾಹಕ ಅಭಿಯಂತ, ತಾ.ಪಂ. ಉಡುಪಿ
ಸದ್ಯ ಸಮಸ್ಯೆ ಇಲ್ಲ
ತಾಲೂಕಿನಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ. ಆದರೂ ಎದುರಾಗ ಬಹುದಾದ ಸಮಸ್ಯೆ ನಿರ್ವಹಿಸಲು ಪೂರ್ಣ
ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ಪೂರೈಸಲು ಕೂಡ ಸಿದ್ಧರಾಗಿದ್ದೇವೆ. ಅಂತರ್‌ಜಲ ಮಟ್ಟ ಕಾಪಾಡುವ ನಿಟ್ಟಿನ ಕಾರ್ಯಕ್ರಮಗಳು ಪಂಚಾಯತ್ ಮಟ್ಟದಲ್ಲಿ ಅನುಷ್ಠಾನಗೊಳ್ಳಲಿವೆ.
– ರಾಜು ಕೆ. ಇಒ, ಉಡುಪಿ ತಾ.ಪಂ.
ವರ್ಷಕ್ಕೆ 40 ಬೋರೆÌಲ್
ಶಾಶ್ವತ ಪರಿಹಾರವಾಗಿ ಕೊಳವೆ ಬಾವಿ, ತೆರೆದ ಬಾವಿಗಳನ್ನು ಕೊರೆಸ ಲಾಗುತ್ತದೆ. ಆದರೆ ಅಂತರ್ಜಲ ಮಟ್ಟ ಕುಸಿತ ವ್ಯವಸ್ಥೆ ಮೇಲೆ ದೊಡ್ಡ ಹೊಡೆತ ನೀಡುತ್ತಿದೆ. ತಾಲೂಕಿನಲ್ಲಿ ವರ್ಷವೊಂದಕ್ಕೆ ಸರಾಸರಿ 30-40 ಕೊಳವೆ ಬಾವಿ ಹಾಗೂ 15-20 ತೆರೆದ ಬಾವಿಗಳನ್ನು ಕೊರೆಯಲಾಗುತ್ತಿದೆ.
ಕೊರತೆಗೆ ಕಾರಣ
ನೀರಿನ ಬಳಕೆ ಹೆಚ್ಚಿರುವುದು, ಮಳೆನೀರು ಭೂಮಿಯಲ್ಲಿ ಇಂಗಲು ಅವಕಾಶ ಕಡಿಮೆಯಾಗುತ್ತಿರುವುದು, ಲಭ್ಯ ಇರುವ ನೀರಿನಲ್ಲಿ ಉಪ್ಪಿನಂಶದಿಂದಾಗಿ ಬಳಕೆ ಯೋಗ್ಯವಾಗದಿರುವುದು, ಬಾವಿಗಳ ಅವಗಣನೆ ಮೊದಲಾದವು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲು ಕಾರಣ.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.