ಮುಂದಿನ ವರ್ಷ ಇನ್ನಷ್ಟು ಸಾಧನೆ: ಡಾ| ವಿನೋದ್ ಭಟ್
Team Udayavani, May 1, 2018, 9:48 AM IST
ಉಡುಪಿ: ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯವು ನೀಡುವ ಎನ್‌ಐಆರ್‌ಎಫ್ (ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೆಮ್‌ವರ್ಕ್) ರ್‍ಯಾಂಕಿಂಗ್‌ನಲ್ಲಿ ಈ ಸಾಲಿನಲ್ಲಿ ಮಾಹೆಯ ವಿವಿಧ ಶಿಕ್ಷಣ ಸಂಸ್ಥೆಗಳು ಉತ್ತಮ ಸಾಧನೆ ತೋರಿವೆ. ಮುಂದಿನ ವರ್ಷ ಇದು ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ಮಾಹೆ ಕುಲಪತಿ ಡಾ| ಎಚ್. ವಿನೋದ್ ಭಟ್ ಹೇಳಿದರು.
ಮಣಿಪಾಲ ವಿ.ವಿ. ಕಟ್ಟಡದಲ್ಲಿ ಶನಿವಾರ ಜರಗಿದ ಎನ್‌ಐಆರ್‌ಎಫ್ ರ್‍ಯಾಂಕಿಂಗ್ 2018ರ ಪ್ರಮಾಣಪತ್ರ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಮಾಹೆಗಿಂತ ಉನ್ನತ ರ್‍ಯಾಂಕ್‌ನಲ್ಲಿ 7 ವಿ.ವಿ.ಗಳಿದ್ದವು. ಈ ಬಾರಿ ಒಂದು ವಿ.ವಿ. ಮಾತ್ರ ಮುಂದಿದೆ. ಮುಂದಿನ ವರ್ಷ ಇದನ್ನೂ ಮೀರಿ ಮಾಹೆ ಸಾಧನೆ ದಾಖಲಿಸಲಿದೆ. ಎಜುಕೇಶನ್ ವರ್ಲ್ಡ್ ಮ್ಯಾಗಜಿನ್‌ನ ಮುಂದಿನ ಆವೃತ್ತಿಯಲ್ಲಿಯೂ ಮಾಹೆ ಸತತ ಮೂರನೇ ಬಾರಿಗೆ ಪ್ರಥಮ ರ್‍ಯಾಂಕ್ ಪಡೆಯಲಿದೆ ಎಂದರು.
ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಕುಲಪತಿಯವರನ್ನು ಅಭಿನಂದಿಸಿದರು. ಕುಲಸಚಿವ ಡಾ| ನಾರಾಯಣ್ ಸಭಾಹಿತ್ ಸ್ವಾಗತಿಸಿದರು. ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.