ಡಿಎಫ್ಒ ವಿರುದ್ಧ ಕ್ರಮಕ್ಕೆ ಜಿ.ಪಂ. ನಿರ್ಣಯ
ಅಭಿವೃದ್ಧಿಗೆ ಅಡ್ಡಿ, ಸಭೆಗೆ ಗೈರು ಆರೋಪ
Team Udayavani, Jan 29, 2020, 1:56 AM IST
ಉಡುಪಿ: ಉಪ ಅರಣ್ಯ ಸಂರಕ್ಷಣಾಧಿ ಕಾರಿ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುತ್ತಿಲ್ಲ ಎಂದು ಜಿ.ಪಂ. ಸದಸ್ಯರು ಪಕ್ಷಭೇದ ಮರೆತು ಆರೋಪಿಸಿ ದ್ದಲ್ಲದೆ, ಸರ್ವಾನುಮತದ ನಿರ್ಣಯವನ್ನೂ ಕೈಗೊಂಡ ಘಟನೆ ಮಂಗಳವಾರ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕಂದಾಯ, ಅರಣ್ಯ, ಗಣಿ ಇಲಾಖೆಯ ರಾಜ್ಯ ಸ್ತರದ ಪ್ರಧಾನ ಕಾರ್ಯದರ್ಶಿಗಳು ಡೀಮ್ಡ್ ಅರಣ್ಯದಿಂದ ಆಂಶಿಕ ಡೀಮ್ಡ್ ಅರಣ್ಯದ ಭಾಗವನ್ನು ಬೇರ್ಪಡಿಸಲು ಒಮ್ಮತದಿಂದ ತಳೆದ ನಿರ್ಣಯವನ್ನೂ ಜಿಲ್ಲೆಯಲ್ಲಿ ಈಡೇರಿಸಲು ಡಿಎಫ್ಒ ಸಿದ್ಧರಿಲ್ಲ. ಹೀಗಾದರೆ ಮರಳು ಸಮಸ್ಯೆ ತಲೆದೋರಿದಂತೆ ಜಲ್ಲಿ ಸಮಸ್ಯೆಯೂ ತಲೆದೋರುತ್ತದೆ. ಅವರು ಜಿ.ಪಂ. ಸಭೆಗೆ ಹಾಜರಾಗಲೂ ಸಿದ್ಧರಿಲ್ಲ. ಇವರ ವಿರುದ್ಧ ನಿರ್ಣಯ ತಳೆದು ರಾಜ್ಯ ಸರಕಾರದ ಗಮನಕ್ಕೆ ತರಬೇಕು ಎಂದು ಸದಸ್ಯರು ಆಗ್ರಹಿಸಿದರು.
ಅಕೇಶಿಯಾ ಕಾಡು
ಅರಣ್ಯ ಇಲಾಖೆಯವರು ಅವರ ಭೂಮಿಯಲ್ಲಿ ಕಾಡು ಬೆಳೆಸದೆ ಅಕೇಶಿಯಾ ಕಾಡು ಬೆಳೆಸುತ್ತಾರೆ. ಡೀಮ್ಡ್ ಅರಣ್ಯದ ಹೆಸರಿನಲ್ಲಿ ಅಭಿವೃದ್ಧಿ ಕೆಲಸ ಗಳಿಗೆ ವಿನಾ ಕಾರಣ ಅಡ್ಡಿ ಪಡಿಸುತ್ತಾರೆ ಎಂದು ಶಾಸಕ ರಘುಪತಿ ಭಟ್ ಆರೋಪಿಸಿದರು. ಪರಿಸರ ಸೂಕ್ಷ್ಮ ವಲಯದಂತೆ ಅಭಯಾ ರಣ್ಯದ ಗಡಿಯಿಂದ ಆದಷ್ಟು ಕಡಿಮೆ ಭೂಮಿಯನ್ನು (100-200 ಮೀ.) ಗುರುತಿಸಬೇಕು. ಈಗ ಒಂದು ಕಿ.ಮೀ. ಎಂದು ನಿರ್ಧರಿಸಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗು ತ್ತದೆ ಎಂದು ನಿರ್ಣಯ ಅಂಗೀಕರಿಸಲಾಯಿತು.
ಕಾರ್ಖಾನೆ ಕಾರ್ಮಿಕರಿಗೆ ಜನ್ಮ ದಿನಾಂಕ ಮತ್ತು ವಿದ್ಯಾರ್ಹತೆಯ ದಾಖಲೆ ಇಲ್ಲದೆ ಆಧಾರ್
ಕಾರ್ಡ್ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಿಎಫ್ ಮುಂತಾದ ಸೌಲಭ್ಯ ಪಡೆಯಲಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ 2ನೇ ಶನಿವಾರ ಕೆಲವು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಶಿಬಿರ ಏರ್ಪಡಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಯಿತು.
ವಿವಿಧ ಸ್ಥಾಯೀ ಸಮಿತಿಗಳ ಅಧ್ಯಕ್ಷರಾದ ಸುಮಿತ್ ಶೆಟ್ಟಿ ಕೌಡೂರು, ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಶೋಭಾ ಜಿ. ಪುತ್ರನ್, ಸಿಇಒ ಪ್ರೀತಿ ಗೆಹಲೋತ್, ಉಪ ಕಾರ್ಯದರ್ಶಿ ಕಿರಣ್ ಪಡ್ನ್ಕರ್, ಯೋಜನಾ ನಿರ್ದೇಶಕ ಗುರುದತ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ಸದಸ್ಯರಾದ ಬಾಬು ಶೆಟ್ಟಿ, ಜನಾರ್ದನ ತೋನ್ಸೆ, ಶಿಲ್ಪಾ ಸುವರ್ಣ, ದಿವ್ಯಶ್ರೀ ಅಮೀನ್, ಸುರೇಶ ಬಟವಾಡೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಗೌರಿ ದೇವಾಡಿಗ, ಲಕ್ಷ್ಮೀ ಮಂಜು ಬಿಲ್ಲವ, ಚಂದ್ರಿಕಾ ಕೇಳ್ಕರ್, ಜ್ಯೋತಿ ಹರೀಶ್, ಉದಯ ಕೋಟ್ಯಾನ್, ಶಶಿಕಾಂತ ಪಡುಬಿದ್ರಿ, ರೋಹಿತ್‌ಕುಮಾರ್ ಶೆಟ್ಟಿ, ಜ್ಯೋತಿ ಎಂ. ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮ
ಲೋಕಸಭಾ ಚುನಾವಣೆ ವೇಳೆ ಸ್ಥಗಿತಗೊಂಡ ಸರಕಾರಿ ಸ್ಥಳದಲ್ಲಿ ವಾಸಿಸುತ್ತಿರುವವರಿಗೆ 57 ನಮೂನೆ ಅರ್ಜಿಯನ್ನು ಮತ್ತೆ ಸ್ವೀಕರಿಸಬೇಕೆಂದು ನಿರ್ಣಯ ಅಂಗೀಕರಿಸಲಾಯಿತು. ರಾ.ಹೆ. ಇಕ್ಕೆಲಗಳಲ್ಲಿ ಅಕ್ರಮ ವಾಗಿ ತಲೆ ಎತ್ತಿದ ರಚನೆಗಳ ಬಗ್ಗೆ ಶೀಘ್ರವೇ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ರಾ.ಹೆ. ಅಧಿಕಾರಿಗಳು ಭರವಸೆ ನೀಡಿದರು.
ಕುಡಿಯುವ ನೀರು ಪೂರೈಸಿದವರಿಗೆ ಟೆಂಡರ್‌ನಂತೆ ಮೊತ್ತ ಪಾವತಿಯಾಗುತ್ತಿಲ್ಲ ಎಂದು ಸಭೆಯಲ್ಲಿ ಕೇಳಿಬಂದಾಗ ಇದರ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು. ಸಂಧ್ಯಾಸುರಕ್ಷಾ ದಂತಹ ಸಾಮಾಜಿಕ ಪಿಂಚಣಿ ಯೋಜನೆಗಳು ವರ್ಷವಾದರೂ ಜಾರಿಯಾಗುತ್ತಿಲ್ಲ ಎಂದು ಕಳವಳ ವ್ಯಕ್ತವಾಯಿತು. ಇದಕ್ಕೆ ಕಾರಣವಾದ ಸರ್ವರ್ ಸಮಸ್ಯೆಯನ್ನು ರಾಜ್ಯ ಸರಕಾರದ ಗಮನಕ್ಕೆ ತರುವುದಾಗಿ ಅಧಿಕಾರಿಗಳು ತಿಳಿಸಿದರು.
ಪಡಿತರ ವಿಲೇ ಸಮಸ್ಯೆ
ಪಡಿತರ ಚೀಟಿ ವಿಲೇವಾರಿಗೆ ರಾಜ್ಯ ಮಟ್ಟದ ಸರ್ವರ್ ಸಮಸ್ಯೆ ಅಡ್ಡಿಯಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಜಿ.ಪಂ., ಇದರ ಕುರಿತು ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.