ಜಿ. ಶಂಕರ್‌ ಆರೋಗ್ಯಸುರಕ್ಷಾ ಕಾರ್ಡ್‌ಗಳ ನವೀಕರಣ

Team Udayavani, Nov 11, 2021, 10:37 PM IST

ಜಿ. ಶಂಕರ್‌ ಆರೋಗ್ಯಸುರಕ್ಷಾ ಕಾರ್ಡ್‌ಗಳ ನವೀಕರಣ

ಮಲ್ಪೆ : ಅಂಬಲಪಾಡಿಯ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಅವರು ಮಣಿಪಾಲ ಸಿಗ್ನಾ ಹೆಲ್ತ್‌ ಇನ್ಶೂರೆನ್ಸ್‌ ಕಂಪೆನಿ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದಿಂದ ಆರಂಭಿಸಿದ ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ಗಳ ನವೀಕರಣ ಆರಂಭವಾಗಿದೆ.

ಜಾತಿ, ಮತ ಭೇದವಿಲ್ಲದೆ ಬಡವರ ಸ್ವಾಸ್ಥ್ಯಕ್ಕಾಗಿ ಹಮ್ಮಿಕೊಂಡ ಆರೋಗ್ಯ ವಿಮಾ ಯೋಜನೆ ಇದಾಗಿದ್ದು, ಯೋಜನೆಯ ಸೌಲಭ್ಯವನ್ನು 2021ರಲ್ಲಿ ಒಟ್ಟು 52,505 ಕುಟುಂಬಗಳಿಗೆ ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ವಿವಿಧ ಘಟಕಗಳ ಮೂಲಕ ನೋಂದಾವಣೆಗೊಳಿಸಿ ವಿತರಿಸಲಾಗಿದೆ. ಹಿಂದಿನ ಕಾರ್ಡ್‌ಗಳ ನವೀಕರಣ ಮತ್ತು ಹೊಸ ಸೇರ್ಪಡೆಗೂ ಅವಕಾಶವಿದೆ. ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಈ ಯೋಜನೆ ಸೀಮಿತ. ಕಡಿಮೆ ವರಮಾನವಿರುವ ಕುಟುಂಬಗಳಿಗೆ ಈ ಯೋಜನೆ ವರದಾನವಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.70, ಉಡುಪಿ ಟಿ.ಎಂ.ಎ.ಪೈ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಶೇ. 60, ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಶೇ. 100 ರಿಯಾಯಿತಿ ಇರುತ್ತದೆ.

ಈ ಆರೋಗ್ಯಸುರಕ್ಷಾ ಯೋಜನೆಯಲ್ಲಿ ಹಿಸ್ಟಿರೆಕ್ಟೊಮಿ ಅಪೆಂಡೆಕ್ಟೊಮಿ, ನಾರ್ಮಲ್‌ ಡೆಲಿವರಿ, ಡೆಲಿವರಿ ಸಿಸೆಕ್ಷನ್‌ ಮುಂತಾದ ಶಸ್ತ್ರ ಚಿಕಿತ್ಸೆಗಳಿಗೆ ಪ್ರತ್ಯೇಕ ಮಿತಿ ಇಲ್ಲದೆ ಶೇ.10 ಕೋಪೇಯೊಂದಿಗೆ ರೂಪಾಯಿ 50ಸಾವಿರ ಕ್ಲೇಮು ಪಡೆಯುವ ಆರೋಗ್ಯವಿಮಾ ಯೋಜನೆ ಇದಾಗಿರುತ್ತದೆ. ಕುಟುಂಬದ ಸದಸ್ಯನು ವಿಮಾ ಯೋಜನೆಗೆ ಒಳಪಟ್ಟ ರೋಗದ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾದಲ್ಲಿ ನಗದು ರಹಿತವಾಗಿ ಚಿಕಿತ್ಸೆ ಪಡೆಯುವ ಸೌಲಭ್ಯವಿದೆ.

ವಿಮೆ ಅವಧಿಯಲ್ಲಿ ಕುಟುಂಬದ ಸದಸ್ಯ ಅಪಘಾತದಲ್ಲಿ ಮೃತಪಟ್ಟಲ್ಲಿ 50 ಸಾವಿರ ರೂ. ಪರಿಹಾರ ಪಡೆಯಬಹುದು. ಡಯಾಲಿಸಿಸ್‌, ನವಜಾತ ಶಿಶುವಿಗೆ ತುರ್ತು ವೈದ್ಯಕೀಯ ಸೇವೆ ಪಡೆಯಯೂ ಅವಕಾಶವಿರುತ್ತದೆ. ಯಾವುದೇ ಷರತ್ತುಗಳಿಲ್ಲದೆ ಎಲ್ಲರಿಗೂ ಹೊಸದಾಗಿ ಕಾರ್ಡ್‌ ಪಡೆಯಬಹುದಾಗಿದೆ.

ಇದನ್ನೂ ಓದಿ:ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ

ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌ ಹೊಂದಿದ ಯಾವುದೇ ಸದಸ್ಯರೂ ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ಪಡೆಯಬಹುದಾಗಿದೆ. ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌ ಹೊಂದಿದ್ದವರು ಕೂಡ ರೇಷನ್‌ ಕಾರ್ಡ್‌ ಪ್ರತಿ ಹಾಗೂ ಕುಟುಂಬದ ಪ್ರತಿ ಸದಸ್ಯರ ಆಧಾರ್‌ ಕಾರ್ಡ್‌ ಪ್ರತಿ ಹಾಗೂ ಹೊಸದಾಗಿ ಕಾರ್ಡ್‌ ಮಾಡಲಿಚ್ಛಿಸುವವರು ಕುಟುಂಬದ ರೇಷನ್‌ ಕಾರ್ಡ್‌ ಪ್ರತಿಯನ್ನು ಹಾಗೂ ಎಲ್ಲ ಸದಸ್ಯರ ಆಧಾರ್‌ ಕಾರ್ಡ್‌ ಪ್ರತಿಯನ್ನು ನ. 15ರಿಂದ 30ರೊಳಗೆ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ ಮಾಧವ ಮಂಗಲ ಸಮುದಾಯ ಭವನ ಶಾಮಿಲಿ ಸಭಾಂಗಣದ ಎದುರು ಅಂಬಲಪಾಡಿ ಅಥವಾ ಮೊಗವೀರ ಯುವ ಸಂಘಟನೆಯ ವಿವಿಧ ಘಟಕಗಳನ್ನು ಸಂಪರ್ಕಿಸಬೇಕು ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ. ಕೋಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಒಂದು ಕಡೆಯಲ್ಲಿ ಮಾತ್ರ ಅವಕಾಶ
ಒಂದು ಕುಟುಂಬ ಅಥವಾ ಕುಟುಂಬದ ಸದಸ್ಯರು ಯಾವುದೇ ಒಂದು ಘಟಕದಲ್ಲಿ ವಿಮಾ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಘಟಕಗಳಲ್ಲಿ ನೋಂದಾಯಿಸಿಕೊಂಡರೆ ಅಂತಹ ವ್ಯಕ್ತಿಯ ಅಥವಾ ಕುಟುಂಬದ ವಿಮಾ ಯೋಜನೆಯ ಸದಸ್ಯತ್ವವನ್ನು ರದ್ದುಪಡಿಸಲಾಗುವುದು.

ಟಾಪ್ ನ್ಯೂಸ್

BY Election: ಬಿಜೆಪಿ ಅಭ್ಯರ್ಥಿಗಳು ಶೀಘ್ರ ಅಂತಿಮ: ಬಸವರಾಜ ಬೊಮ್ಮಾಯಿ

BY Election: ಬಿಜೆಪಿ ಅಭ್ಯರ್ಥಿಗಳು ಶೀಘ್ರ ಅಂತಿಮ: ಬಸವರಾಜ ಬೊಮ್ಮಾಯಿ

BJP: ಮಾಸಾಂತ್ಯವರೆಗೆ ಬಿಜೆಪಿ ಸದಸ್ಯತ್ವ ಅಭಿಯಾನ ವಿಸ್ತರಣೆ: ನಂದೀಶ್‌ ರೆಡ್ಡಿ

BJP: ಮಾಸಾಂತ್ಯವರೆಗೆ ಬಿಜೆಪಿ ಸದಸ್ಯತ್ವ ಅಭಿಯಾನ ವಿಸ್ತರಣೆ: ನಂದೀಶ್‌ ರೆಡ್ಡಿ

BJP: ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ

BJP: ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ

ರಾಜ್ಯಾದ್ಯಂತ ಒಳ ಮೀಸಲಾತಿ ಕಿಚ್ಚು, ಪ್ರತಿಭಟನೆ

State Govt; ರಾಜ್ಯಾದ್ಯಂತ ಒಳ ಮೀಸಲಾತಿ ಕಿಚ್ಚು, ಪ್ರತಿಭಟನೆ

Arrest

Kota: ಬಾಲಕಿ ಮೇಲೆ ಸಂಬಂಧಿಯಿಂದ ಅತ್ಯಾಚಾರ: ಆರೋಪಿ ವಶಕ್ಕೆ

Special Court: ಮೂರು ತಿಂಗಳ ಸೆರೆವಾಸದ ಬಳಿಕ ಮಾಜಿ ಸಚಿವ ನಾಗೇಂದ್ರ ಬಿಡುಗಡೆ

Special Court: ಮೂರು ತಿಂಗಳ ಸೆರೆವಾಸದ ಬಳಿಕ ಮಾಜಿ ಸಚಿವ ನಾಗೇಂದ್ರ ಬಿಡುಗಡೆ

Eshwara Khandre: “ಕೆಐಒಸಿಎಲ್‌ನಿಂದ 1334 ಹೆ. ಭೂಮಿ, 1,349 ಕೋಟಿ ದಂಡ ವಸೂಲಿಗೆ ಕ್ರಮ’

Eshwara Khandre: “ಕೆಐಒಸಿಎಲ್‌ನಿಂದ 1334 ಹೆ. ಭೂಮಿ, 1,349 ಕೋಟಿ ದಂಡ ವಸೂಲಿಗೆ ಕ್ರಮ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sand 1

Padubidri: ಟಿಪ್ಪರ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ವಶ

10-udupi

Udupi: ಅಕ್ರಮ ಪಟಾಕಿ ದಾಸ್ತಾನು; ಪೊಲೀಸ್‌ ವಶಕ್ಕೆ

mgm

Manipal: ಎಂಜಿಎಂ ಚಿಟ್ಟೆ ಪಾರ್ಕ್‌ನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು

14

Malpe: ಸಿಎನ್‌ಜಿ ಕೊರತೆ; ರಿಕ್ಷಾ ಚಾಲಕರಿಗೆ ಚಿಂತೆ

10

ಅ.22ರಂದು ಉಡುಪಿ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ ‘ರಜತ ಕ್ರೀಡಾ ಸಂಭ್ರಮ’

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

BY Election: ಬಿಜೆಪಿ ಅಭ್ಯರ್ಥಿಗಳು ಶೀಘ್ರ ಅಂತಿಮ: ಬಸವರಾಜ ಬೊಮ್ಮಾಯಿ

BY Election: ಬಿಜೆಪಿ ಅಭ್ಯರ್ಥಿಗಳು ಶೀಘ್ರ ಅಂತಿಮ: ಬಸವರಾಜ ಬೊಮ್ಮಾಯಿ

BJP: ಮಾಸಾಂತ್ಯವರೆಗೆ ಬಿಜೆಪಿ ಸದಸ್ಯತ್ವ ಅಭಿಯಾನ ವಿಸ್ತರಣೆ: ನಂದೀಶ್‌ ರೆಡ್ಡಿ

BJP: ಮಾಸಾಂತ್ಯವರೆಗೆ ಬಿಜೆಪಿ ಸದಸ್ಯತ್ವ ಅಭಿಯಾನ ವಿಸ್ತರಣೆ: ನಂದೀಶ್‌ ರೆಡ್ಡಿ

BJP: ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ

BJP: ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ

ರಾಜ್ಯಾದ್ಯಂತ ಒಳ ಮೀಸಲಾತಿ ಕಿಚ್ಚು, ಪ್ರತಿಭಟನೆ

State Govt; ರಾಜ್ಯಾದ್ಯಂತ ಒಳ ಮೀಸಲಾತಿ ಕಿಚ್ಚು, ಪ್ರತಿಭಟನೆ

Arrest

Kota: ಬಾಲಕಿ ಮೇಲೆ ಸಂಬಂಧಿಯಿಂದ ಅತ್ಯಾಚಾರ: ಆರೋಪಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.