ಕಡ್ತಲ ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪ್ರಶಸ್ತಿ
ಪಾರದರ್ಶಕ ಜನಸ್ನೇಹಿ ಆಡಳಿತಕ್ಕೆ ಪುರಸ್ಕಾರದ ಗರಿ
Team Udayavani, Sep 30, 2019, 5:46 AM IST
ಅಜೆಕಾರು: ರಾಜ್ಯ ಸರಕಾರ ವಿಶೇಷ ಸಾಧನೆ ಮಾಡಿರುವ ಗ್ರಾ.ಪಂ.ಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರಸಕ್ತ ಸಾಲಿನಲ್ಲಿ ಕಡ್ತಲ ಗ್ರಾ.ಪಂ. ಆಯ್ಕೆಗೊಂಡಿದೆ.
2018-19ನೇ ಸಾಲಿನಲ್ಲಿ ಪಂಚಾಯತ್‌ನ ಪಾರದರ್ಶಕ ಆಡಳಿತ, ಆರ್ಥಿಕ ಪ್ರಗತಿ, ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನ ಪರಿಗಣಿಸಿ ಗ್ರಾಮೀಣಾಭಿವೃದ್ಧಿ ,
ಪಂಚಾಯತ್‌ರಾಜ್ ಇಲಾಖೆಯು ಕಡ್ತಲ ಪಂಚಾಯತ್‌ನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅ. 2ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
2018-19ನೇ ಸಾಲಿನಲ್ಲಿ ಗ್ರಾ.ಪಂ. ಸ್ವಂತ ಸಂಪನ್ಮೂಲಗಳ ಕ್ರೋಢೀಕರಣ, ಅನುದಾನಗಳ ಸಮರ್ಪಕ ಬಳಕೆ, ಕ್ರಮಬದ್ಧ ಗ್ರಾಮ ಸಭೆ, ಜಮಾಬಂದಿ, ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿ ಅನುಷ್ಠಾನ, ವಿವಿಧ ಸಭೆ, ಮಾಹಿತಿ ಶಿಬಿರ, ಮೂಲ ಸೌಕರ್ಯ ಒದಗಿಸುವಿಕೆ, ಸ್ವತ್ಛತಾ ಆಂದೋಲನ, ಶೇ. 100 ತೆರಿಗೆ ಸಂಗ್ರಹ, ಸಂಪೂರ್ಣ ವಿದ್ಯುತ್ ಬಿಲ್ ಪಾವತಿ, ವಿವಿಧ ವಸತಿ ಯೋಜನೆ ಅನುಷ್ಠಾನ, ಕುಡಿಯುವ ನೀರು, ಬೀದಿದೀಪ ಅಳವಡಿಕೆ ಮಾಡಿರು ವುದು ಗ್ರಾ.ಪಂ.ನ ವಿಶೇಷತೆಗಳಾಗಿವೆ.
ದೇಶದಲ್ಲೇ ಮೊದಲ ಬಾರಿಗೆ ವರ್ಮಿ ಪಿಲ್ಟರ್ ಶೌಚಾಲಯ ನಿರ್ಮಿಸಿದ ಹೆಗ್ಗಳಿಕೆ ಕಡ್ತಲ ಗ್ರಾ.ಪಂ.ನದ್ದು. ಪಂಚಾಯತ್ ವ್ಯಾಪ್ತಿ ಯಲ್ಲಿ 50 ಮನೆಗಳಲ್ಲಿ ವರ್ಮಿ ಫಿಲ್ಟರ್ ಶೌಚಾಲಯ ನಿರ್ಮಿಸಲಾಗಿದೆ. ಕಡ್ತಲ, ಎಳ್ಳಾರೆ, ಕುಕ್ಕಜೆ ಮೂರು ಗ್ರಾಮಗಳನ್ನು ಒಳಗೊಂಡ ಪಂಚಾಯತ್ ವ್ಯಾಪ್ತಿಯಲ್ಲಿ 5,370 ಜನಸಂಖ್ಯೆಯಿದ್ದು ಪ್ರತಿ ಮನೆಯಲ್ಲಿ ಶೌಚಾಲಯ ಅಳವಡಿಸಲಾಗಿದೆ.
ಗ್ರಾಮದ ಪ್ರತಿ ಮನೆಗೂ ಸರಕಾರದ ಒಂದು ಯೋಜನೆಯಾದರೂ ಸಹ ದೊರೆಯಬೇಕು ಎಂಬ ಚಿಂತನೆಯೊಂದಿಗೆ “ಒಂದು ಮನೆ ಒಂದು ಯೋಜನೆ’ಯನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಳಿಸಲಾಗಿದೆ. ಪ್ರತಿ ಎರಡು ತಿಂಗಳಿ ಗೊಮ್ಮೆ ಕೊರಗರ ಕಾಲನಿಯಲ್ಲಿ ಪಂಚಾಯತ್ ಆಡಳಿತವು ಕುಂದುಕೊರತೆ ಸಭೆ ನಡೆಸಿ ಸರಕಾರದ ಯೋಜನೆಗಳು ಅರ್ಹರಿಗೆ ದೊರೆಯುವಲ್ಲಿ ಶ್ರಮಿಸಿದೆ.
ಗ್ರಾಮೀಣ ಪಂಚಾಯತ್ ರಸ್ತೆಯು ಅಭಿವೃದ್ಧಿಗೊಂಡಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಬಹುದೆಂಬ ಚಿಂತನೆಯೊಂದಿಗೆ ಶಾಸಕ ಸುನಿಲ್ ಕುಮಾರ್ ಅವರಲ್ಲಿ ಮನವಿ ಮಾಡಿ ನಗರೋತ್ಥಾನ ಯೋಜನೆಯಡಿ ಅನುದಾನ ಮಂಜೂರುಗೊಳಿಸಿ ಕಡ್ತಲ
ಪೇಟೆಯ ರಸ್ತೆ ವಿಸ್ತರಣೆ ಜತೆ ವಿಭಾಜಕ ಅಳವಡಿಸಿ ವಿದ್ಯುದೀಕರಣ ಗೊಳಿಸಲಾಗಿದೆ.
ಗ್ರಾಮದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗಿದ್ದು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಆಂದೋಲನ ನಡೆಸುವ ಜತೆಗೆ ಜನಜಾಗೃತಿ ಮೂಡಿಸಲಾಗಿದೆ.
ಸಮಗ್ರ ಅಭಿವೃದ್ಧಿ
ಸುಮಾರು 15 ಕೋ. ರೂ. ವೆಚ್ಚದಲ್ಲಿ ಪಂಚಾಯತ್ ವ್ಯಾಪ್ತಿಯ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದ್ದು, 5 ವಿಶಾಲ ಸೇತುವೆಗಳನ್ನು ವಿವಿಧ ಅನುದಾನ ಬಳಸಿ ನಿರ್ಮಿಸಲಾಗಿದೆ. ತೀಥೊìಟ್ಟು, ಪಟ್ಟಿಬಾವು, ದಬುìಜೆ, ಕೋಂಬೆ, ಬೆಂಬರಬೈಲುಗಳಲ್ಲಿ ಸೇತುವೆ ನಿರ್ಮಿಸಲಾಗಿದೆ.
ಮುಂದಿನ ಯೋಜನೆಗಳು
ಪಂಚಾಯತ್ ವ್ಯಾಪ್ತಿಯಲ್ಲಿ ಮಾದರಿ ಶ್ಮಶಾನ ನಿರ್ಮಾಣ, ಮಾದರಿ ಅಂಗನ ವಾಡಿ, ತೀಥೊìಟ್ಟು ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಾಣ, ಉದ್ಯಾನವನ, ಕುಕ್ಕಜೆ ಪೇಟೆಗೆ ಇಂಟರ್‌ಲಾಕ್ ಅಳವಡಿಕೆ, ಎಲ್ಲ ಸರಕಾರಿ ಕಚೇರಿ ಒಳಗೊಂಡ ಗ್ರಾಮ ಸೌಧ ನಿರ್ಮಾಣ, ಸೋಲಾರ್ ಅಳವಡಿಕೆ, ನಗದುರಹಿತ ವ್ಯವಹಾರ ಅಳವಡಿಸುವ ಯೋಜನೆ ಪಂಚಾಯತ್ ಆಡಳಿತ ಹೊಂದಿದೆ.
ಸೇವಾ ಮನೋಭಾವ
ಪಂಚಾಯತ್ ಆಡಳಿತದ ನಿರಂತರ ಸೇವಾ ಮನೋಭಾವದಿಂದಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದ್ದು ಇದೀಗ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಪಂಚಾಯತ್ ಸದಸ್ಯರ ಸಹಕಾರ, ಪಿಡಿಒರವರ ಅಭಿವೃದ್ಧಿ ಪರ ಚಿಂತನೆ, ಸಿಬಂದಿ ವರ್ಗದ ಸೇವಾ ಮನೋಭಾವ, ಗ್ರಾಮಸ್ಥರ ಸಹಕಾರ, ಸಲಹೆ ಸೂಚನೆಯಿಂದಾಗಿ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ.
-ಅರುಣ್ ಕುಮಾರ್ ಹೆಗ್ಡೆ, ಅಧ್ಯಕ್ಷರು, ಗ್ರಾ.ಪಂ. ಕಡ್ತಲ
ಇನ್ನಷ್ಟು ಅಭಿವೃದ್ಧಿ ಕಾರ್ಯ
ಉತ್ತಮ ಆಡಳಿತ ಮಂಡಳಿ ಹಾಗೂ ಜನತೆಯ ಸೂಕ್ತ ಸ್ಪಂದನೆಯಿಂದಾಗಿ ಸರಕಾರದ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲಾಗುವುದು.
-ಫರ್ಜಾನಾ ಎಂ, ಪಿಡಿಒ,ಗ್ರಾ.ಪಂ. ಕಡ್ತಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.