ಹೊಸಾಡು,ಯರ್ಲಪಾಡಿ ಗ್ರಾ.ಪಂ.ಗೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ


Team Udayavani, Oct 2, 2018, 6:00 AM IST

2909kdpp1.jpg

ಹೊಸಾಡು: ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎನ್ನುವ ಹೆಗ್ಗಳಿಕೆ ಸಹಿತ ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದ್ದಕ್ಕಾಗಿ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್‌ಗೆ ರಾಜ್ಯ ಸರಕಾರ ನೀಡುವ “ಗಾಂಧಿ ಗ್ರಾಮ ಪುರಸ್ಕಾರ’ ಲಭ್ಯವಾಗಿದೆ. 

ಗಾಂಧಿ ಜಯಂತಿಯಂದು ಈ ಪ್ರಶಸ್ತಿ ನೀಡಲಾಗುತ್ತಿದ್ದು ರಾಜ್ಯದ 176 ಗ್ರಾಮ ಪಂಚಾಯತ್‌ಗಳ ಪೈಕಿ ಕುಂದಾಪುರ ತಾಲೂಕಿ ನಿಂದ ಹೊಸಾಡು ಪಂಚಾಯತ್‌ ಅನ್ನು ಆಯ್ಕೆ ಮಾಡಲಾಗಿದೆ.  

ಸತತ ಎರಡನೇ ವರ್ಷವೂ ಪ್ರಶಸ್ತಿ
ತ್ರಾಸಿಯಿಂದ ವಿಂಗಡಣೆಗೊಂಡು ಹೊಸ ಗ್ರಾ.ಪಂ. ಆಗಿ ರಚನೆಯಾದ ಮೂರೇ ವರ್ಷಗಳಲ್ಲಿ ಸತತ ಎರಡನೇ ಬಾರಿಗೆ  ಈ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. ಇದಲ್ಲದೆ ಜಿಲ್ಲೆಯ 2 ಗ್ರಾ.ಪಂ.ಗಳಿಗೆ ಜಿ.ಪಂ. ಕೊಡಮಾಡುವ ನಮ್ಮ ಗ್ರಾಮ – ನಮ್ಮ ಯೋಜನೆ ಪ್ರಶಸ್ತಿಗೂ ಕಾಡೂರು ಜತೆಗೆ ಹೊಸಾಡು ಆಯ್ಕೆಯಾಗಿದೆ.

ಹೊಸಾಡು ಗ್ರಾ.ಪಂ. ಸಾಧನೆಗಳೇನು? 
– ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪುರಸ್ಕಾರ.
– ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯಡಿ ರಾಜೀವ್‌ ಗಾಂಧಿ ಸೇವಾ ಪುರಸ್ಕಾರ ಆರಂಭ.
– ಕಳೆದೆರಡು ವರ್ಷಗಳಿಂದ ಶೇ. 100 ತೆರಿಗೆ ವಸೂಲಿ.
– ಎಲ್ಲ ಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ.
– ಕಸ ವಿಲೇವಾರಿಗೆ ಎಲ್ಲ ಮನೆಗಳಿಗೂ ಹಸಿ ಹಾಗೂ ಒಣ ಕಸ ವಿಂಗಡಿಸಲು ಬಕೆಟ್‌ ನೀಡಲಾಗಿದೆ. 
– ಶೇ. 90ರಷ್ಟು ಚರಂಡಿ ಕಾಮಗಾರಿ ಪೂರ್ಣಗೊಂಡಿದೆ.
– 14ನೇ ಹಣಕಾಸು ಯೋಜನೆಯ ಅನುದಾನ ಸಂಪೂರ್ಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗಿದೆ.
– ದಾರಿ ದೀಪ ಹಾಗೂ ಸೋಲಾರ್‌ ದೀಪಗಳು, ಗ್ರಾ.ಪಂ.ಗೆ ಸಿಸಿಟಿವಿ ಅಳವಡಿಸಲಾಗಿದೆ.
– ವಲಸೆ ಕಾರ್ಮಿಕರಿಗೆ ಮುಳ್ಳಿಕಟ್ಟೆಯಲ್ಲಿ ಸೆಲ್ಕೋ ಸಹಯೋಗದಲ್ಲಿ ತಾತ್ಕಾಲಿಕ ಮನೆ.

ಆಯ್ಕೆ ಪ್ರಕ್ರಿಯೆ ಹೇಗೆ?
ಪ್ರಶಸ್ತಿಗೆ 2017-18ನೇ ಸಾಲಿನ ಪ್ರಗತಿ, ಸಾಂಸ್ಥಿಕ ಹಾಗೂ ಪ್ರಗತಿ ಸೂಚ್ಯಂಕಗಳನ್ನು ಹೊಂದಿದ 150 ಅಂಕಗಳ ಪ್ರಶ್ನಾವಳಿಗಳನ್ನು ಪಂಚತಂತ್ರ ತಂತ್ರಾಂಶದಿಂದ ಉತ್ತರಿಸುವ ಮೂಲಕ ಗ್ರಾ. ಪಂ.ಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ರಾಜ್ಯದ 3,542 ಗ್ರಾ.ಪಂ.ಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪ್ರತಿ ತಾಲೂಕಿನ 3 ಗ್ರಾ.ಪಂ.ಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು.ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ, ಮೂರು ಗ್ರಾ.ಪಂ. ಗಳ ಪೈಕಿ ತಾಲೂಕಿಗೆ ಒಂದು ಗ್ರಾ.ಪಂ.ನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿತ್ತು. ಕುಂದಾಪುರ ತಾಲೂಕಿನ 101 ಗ್ರಾಮಗಳ ಪೈಕಿ ವಂಡ್ಸೆ, ಕೋಣಿ, ಹೊಸಾಡು ಗ್ರಾ.ಪಂ.ಗಳು ಆಯ್ಕೆಯಾಗಿದ್ದವು. ಗ್ರಾಮೀಣಾಭಿವೃದ್ಧಿ ಸಚಿವರಿಂದ ಅನುಮೋದನೆ ಪಡೆದು ಅಂತಿಮವಾಗಿ ಹೊಸಾಡು ಗ್ರಾ.ಪಂ.ನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶೇ. 100 ಪ್ರತಿಶತ ಪ್ರಯತ್ನ 
ಸರಕಾರದ ಎಲ್ಲ ಯೋಜನೆಗಳು, ಸವ ಲತ್ತುಗಳನ್ನು ಗ್ರಾಮಸ್ಥರಿಗೆ ತಲುಪಿ ಸುವಲ್ಲಿ ಶೇ. 100 ಪ್ರತಿಶತ ಪ್ರಯತ್ನ ಮಾಡಿ ದ್ದೇವೆ. ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿಯೂ ಪ್ರಾಮಾಣಿಕ  ಪ್ರಯತ್ನ ಮಾಡಲಾಗಿದೆ. ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ಈ ಪ್ರಶಸ್ತಿ ಬಂದಿದೆ. 
– ಚಂದ್ರಶೇಖರ್‌ ಪೂಜಾರಿ, ಗ್ರಾ.ಪಂ. ಅಧ್ಯಕ್ಷರು ಹೊಸಾಡು

ಎಲ್ಲರ ಸಹಕಾರ, ಪ್ರತತ್ನದಿಂದ ಪ್ರಶಸ್ತಿ
ಎಲ್ಲರ ಸಹಕಾರ, ಪ್ರಾಮಾಣಿಕ ಸೇವೆ, ಪ್ರಯತ್ನದಿಂದ ಈ ರಾಜ್ಯ ಪ್ರಶಸ್ತಿ ಬಂದಿದೆ. ಪಂ. ಸಿಬಂದಿ, ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಎಲ್ಲಕ್ಕಿಂತ ಹೆಚ್ಚಾಗಿ ಜನರ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ. 
– ಪಾರ್ವತಿ ಕೋಟತಟ್ಟು, 
ಹೊಸಾಡು ಪಿಡಿಒ

ಯರ್ಲಪಾಡಿ ಗ್ರಾ.ಪಂ.ಗೆ ಮೊದಲ ಬಾರಿ ಪುರಸ್ಕಾರ
ಕಾರ್ಕಳ:
2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾ.ಪಂ. ಆಯ್ಕೆಯಾಗಿದೆ. ಅ. 2ರಂದು ಬೆಂಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಳೆದ ಬಾರಿ ಕಾರ್ಕಳದ ವರಂಗ ಗ್ರಾ.ಪಂ. ಪುರಸ್ಕಾರಕ್ಕೆ ಆಯ್ಕೆಯಾಗಿತ್ತು.

ಯರ್ಲಪಾಡಿ ಗ್ರಾ.ಪಂ.ನಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳು, ಅನುದಾನಗಳ ಬಳಕೆ, ಘನತ್ಯಾಜ್ಯ ವಿಲೇವಾರಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಹೀಗೆ ಹತ್ತು ಹಲವು ಯೋಜನೆಗಳನ್ನು ಸಾಧಿಸಿದ ಹಿನ್ನೆಲೆಯಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ.

ಆಡಳಿತಾತ್ಮಕ ಕಾರ್ಯವೈಖರಿ
ಶೇ. 90ರಷ್ಟು ತೆರಿಗೆ ವಸೂಲಾತಿ, ನಿಯಮಾನುಸಾರವಾಗಿ ಗ್ರಾಮ ಸಭೆ, ನೀರಿನ ಬಿಲ್‌ ವಸೂಲಾತಿ, ಸ್ಥಾಯೀ ಸಮಿತಿ ಸಭೆ ಹಾಗೂ ನೈರ್ಮಲ್ಯ, ರಸ್ತೆ ಚರಂಡಿಗಳ ನಿರ್ಮಾಣ, ಜಲ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ 3 ಕಡೆ ಜಲಮರುಪೂರಣ, ಚಿಕ್ಕಲ್‌ಬೆಟ್ಟು ಭಾಗದಲ್ಲಿ ಸೇತುವೆ ಹೀಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಮಾಡುವ ಮೂಲಕ ಉತ್ತಮ ಆಡಳಿತಾತ್ಮಕ ಕಾರ್ಯವೈಖರಿ ತೋರಿದೆ.

ಮಾದರಿ ಘನತ್ಯಾಜ್ಯ ವಿಲೇವಾರಿ
ಯರ್ಲಪಾಡಿ ಗ್ರಾಮ ಘನತ್ಯಾಜ್ಯ ವಿಲೇವಾರಿ ಯಲ್ಲಿ ಜಿಲ್ಲೆಯಲ್ಲೇ ಪ್ರಶಂಸೆಗೆ ಪಾತ್ರವಾಗಿದೆ. ಕಾರ್ಕಳ ತಾಲೂಕಿನಲ್ಲಿ ಮಾದರಿಯಾಗುವಂತೆ ಘನ ತ್ಯಾಜ್ಯ ವಿಲೇವಾರಿ ನಡೆಸಿದೆ. 

ಕೌಶಲ ಮಾಹಿತಿ ಶಿಬಿರಗಳು
ಗ್ರಾ.ಪಂ. ಸಾರ್ವಜನಿಕವಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ವಿವಿಧ ಸಂಘ  ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿವಿಧ ಮಾಹಿತಿ ಕಾರ್ಯ ಕ್ರಮಗಳನ್ನು ನಡೆಸುತ್ತಿದೆ. ಕಾನೂನು ಮಾಹಿತಿ ಶಿಬಿರ, ಪೊಲೀಸ್‌ ಬೀಟ್‌, ತೋಟಗಾರಿಕಾ ಮಾಹಿತಿ ಶಿಬಿರ, ಹೈನುಗಾರಿಕೆ, ಸರಕಾರಿ ಯೋಜನೆಗಳ ಮಾಹಿತಿ ಹೀಗೆ ಹತ್ತು ಹಲವು ಶಿಬಿರಗಳನ್ನು ನಡೆಸಿದೆ. ಹೀಗಾಗಿ ಈ ಎಲ್ಲ ಜನೋಪಯೋಗಿ ಕೆಲಸಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಆಯ್ಕೆಗೊಳಿಸಲಾಗಿದೆ. 

ಕುಡಿಯುವ ನೀರಿನ ವ್ಯವಸ್ಥೆ
ನೀರಿನ ಸಮಸ್ಯೆ ಈ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಲ್ಲ. ಕುಡಿಯುವ ನೀರಿನ ಪೂರೈಕೆಯಲ್ಲಿ ಮಾದರಿ ಎನಿಸಿದೆ. ಮನೆ ಮನೆಗೆ  ವಿನೂತನ ಶೈಲಿಯಲ್ಲಿ ಪೈಪ್‌ಲೈನ್‌ ಅಳವಡಿಸುವ ಮೂಲಕ ನೀರು ಪೂರೈಸುತ್ತಿದೆ. ಅಲ್ಲದೇ ಇಲ್ಲಿನ ನೀರು ಪೂರೈಕೆಯ ವಿಧಾನವನ್ನೇ ಕಾರ್ಕಳ ತಾಲೂಕಿನ ಇತರ ಕೆಲವು ಪಂ.ಗಳು ಅನುಸರಿಸುವಂತಾಗಿದೆ.

ಸಂತಸ ತಂದಿದೆ
ಪಂಚಾಯತ್‌ನ ಅನೇಕ ಯೋಜನೆಗಳು, ಅನೇಕರ ಸಹಕಾರದಿಂದ ಗಾಂಧಿ ಪುರಸ್ಕಾರ ಬಂದಿದೆ. ಮುಂದೆಯೂ ಮಾದರಿ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು. ಇದೀಗ ಪ್ಲಾಸ್ಟಿಕ್‌ ನಿಯಂತ್ರಿಸುವುದಕ್ಕಾಗಿ ಪ್ರತೀ ಮನೆಗಳಿಗೆ 3 ನಮೂನೆಯ ಗಾತ್ರದ ಕೈಚೀಲಗಳನ್ನು ನೀಡಲು ನಿರ್ಧರಿಸಿದ್ದೇವೆ.
– ವಸಂತ್‌ ಕುಲಾಲ್‌, ಗ್ರಾ.ಪಂ.ಅಧ್ಯಕ್ಷ

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

1-swami-sm-bg

Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.